ರಾಜ್ಯ ಸಚಿವ ಸಂಪುಟದಲ್ಲಿ ಮೇಜರ್ ಸರ್ಜರಿ: ಖಾತೆ ಹಂಚಿಕೆ ಮಾಡಿದ ಸಿಎಂ

ರಾಜ್ಯ ವಿಧಾನಸಭೆಯಲ್ಲಿ ಇತ್ತೀಚೆಗಷ್ಟೆ ಸಚಿವ ಸಂಪುಟ ವಿಂಗಡಣೆಯಾಗಿ ಸರ್ಕಾರ ಟೇಕ್ ಆಫ್ ಆಗಿತ್ತು, ಪಂಚ ಭಾಗ್ಯ ಯೋಜನೆಗಳ ಅನುಷ್ಟಾನದ ಬಗ್ಗೆ ವಿಪಕ್ಷಗಳು ಕಡ್ಡಾಯಗೊಳಿಸಬೇಕು ಎಂದು ಹೋರಾಟ ಆಗ್ರಹ ಪಡಿಸುತ್ತಿದ್ದರೆ, ರಾಜ್ಯ ಸರ್ಕಾರ ಯೋಜನೆ ಅನುಷ್ಟಾನದ ಬಗ್ಗೆ ಸಾಕಷ್ಟು ಸಭೆಗಳನ್ನ ನಡೆಸಿ ಮಾಹಿತಿ ಪಡೆಯುತ್ತಿದೆ. ಸಚಿವ ಸಂಪುಟ ವಿಸ್ತರಣೆ ವೇಳೆ ಸಿಎಂ ಸಿದ್ದರಾಮಯ್ಯ ತಮ್ಮ ಬಳಿ ಮೇಜರ್ ಖಾತೆಗಳನ್ನ ಇಟ್ಟುಕೊಂಡಿದ್ದರು, ಈಗ ತಮ್ಮ ಬಳಿ ಇದ್ದ ಎರಡು ಬಹುಮುಖ್ಯ ತಮ್ಮ ಆಪ್ತ ವಲಯಕ್ಕೆ ಹಂಚಿಕೆ ಮಾಡಿರೋದು ಸುದ್ದಿಯಾಗಿದೆ. 200 ಯುನಿಟ್ ವಿದ್ಯುತ್ ಉಚಿತಕ್ಕೆ ಷರತ್ತುಗಳ ಬಗ್ಗೆ ಇಂಧನ ಸಚಿವ ಕೆ.ಜೆ ಜಾರ್ಜ್ ಏನಂದ್ರು!? ಈಗಾಗಲೆ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿದ್ದ ಚಿತ್ತಾಪುರ ಶಾಸಕ ಪ್ರಿಯಾಂಕ ಖರ್ಗೆ ಅವರಿಗೆ ಐಟಿ-ಬಿಟಿ ಖಾತೆಯನ್ನು ಹೆಚ್ಚುವರಿಯಾಗಿ ನೀಡಿದ್ದಾರೆ. ಇನ್ನೂ ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ 2016 ರಿಂದ 2018ರವರೆಗೂ ಐಟಿ ಬಿಟಿ…

Read More