40 ದಿನ..!! 4 ಮಕ್ಕಳು..!! ದಟ್ಟಾರಣ್ಯ..!! ಬದುಕುಳಿದಿದ್ದೇ ಆಶ್ಚರ್ಯ….!!

ಕೊಲಂಬಿಯಾ ದೇಶದ ತಾಯಿಯೊಬ್ಬಳು ಮೇ ೧ ರಂದು ತನ್ನ ನಾಲ್ಕು ಮಕ್ಕಳ ಜೊತೆ ಪುಟ್ಚ ವಿಮಾನದಲ್ಲಿ ಜಾಲಿ ರೈಡ್ ಹೋಗುತ್ತಾಳೆ. ಪ್ರಾರಬ್ಧಕ್ಕೆ ಆ ವಿಮಾನ ಕ್ರಾಶ್ ಆಗಿ ಅಮೆಝಾನ್ ಕಾಡಿನಲ್ಲಿ ಉದುರಿ ಬೀಳುತ್ತದೆ. ಕಾಣೆಯಾದ ವಿಮಾನ ಹುಡುಕುತ್ತಾ ಅಮೆಝಾನ್ ಕಾಡಿಗೆ ಹೋದ ಕೊಲಂಬಿಯಾದ ಮಿಲಿಟರಿ ಜವಾನರಿಗೆ ಅಪಘಾತದಲ್ಲಿ ತಾಯಿ, ಅವಳ ಸಂಬಂಧಿ ಮತ್ತು ಪೈಲೆಟ್ ಸತ್ತು ಬಿದ್ದಿರುವುದು ಕಾಣುತ್ತದೆ.ಹೌದೂ, ಆ ನಾಲ್ಕು ಮಕ್ಕಳು? ಅವರೆಲ್ಲಿ? ದೊಡ್ಡದು 13 ವರ್ಷ. ಎರಡನೆಯದ್ದಕ್ಕೆ 9,ಮೂರನೆಯದ್ದು 4 ವರ್ಷದ್ದು. ನಾಲ್ಕನೇ ಮಗು ಪಾಪ ಇನ್ನೂ ಒಂದು ವರ್ಷದ ಕಂದಮ್ಮ! ಅವರೆಲ್ಲಿದ್ದಾರೆ ಎಂದು ಮಿಲಿಟರಿ ಶೋಧ ಶುರುಮಾಡುತ್ತದೆ. ಮಕ್ಕಳು ಜೀವಂತ ಇದ್ದಾರೆ ಎಂಬ ಗುಮಾನಿ ಮಿಲಿಟರಿಗೆ. ಅದಕ್ಕೆ ಪೂರಕವಾಗಿ ಅದು ಹುಡುಕಾಟ ನಡೆಸುತ್ತದೆ. ಕಾಡಿನ ಮೇಲೆ ಹೆಲಿಕಾಪ್ಟರ್ ಹಾರಿಸಿ ಅಲ್ಲಲ್ಲಿ ನೀರಿನ ಬಾಟಲಿ, ಸ್ನಾಕ್ಸ್ ಪೊಟ್ಟಣಗಳನ್ನು ಉದುರಿಸುತ್ತದೆ.ಮಕ್ಕಳು ಹುಟಿಟೋ ಕಮ್ಯುನಿಟಿಯವರು. ಹುಟಿಟೋ ಜನರಿಗೆ…

Read More