ಕ್ಯಾಂಟರ್ ಪಲ್ಟಿ, ಸ್ಥಳದಲ್ಲೇ ಮೂವರು ಸಾವು – ಇಬ್ಬರ ಸ್ಥಿತಿ ಗಂಭೀರ

ಚಿಕ್ಕಬಳ್ಳಾಪುರ: ಕಲ್ಲು ಕೂಚ ಸಾಗಿಸುತ್ತಿದ್ದ ಕ್ಯಾಂಟರ್ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಹಿನ್ನೆಲೆ ಕ್ಯಾಂಟರ್ ನಲ್ಲಿ ಇದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಆಸ್ಪತ್ರೆಯ ಆಸಿಗೆ ಮೇಲೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಕಣಿವೆ ಬಳಿ ಘಟನೆ ನಡೆದಿದ್ದು ಚಿಕ್ಕಬಳ್ಳಾಪುರ – ಗೌರಿ ಬಿದನೂರು ಮಾರ್ಗದಲ್ಲಿ ಕೆಲಸ ಕಾಲ ಸಂಚಾರ ದಟ್ಟನೆ ಉಂಟಾಗಿತ್ತು. ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಚಿಕ್ಕ ತಿರುಪತಿಯಿಂದ ಚಿಕ್ಕಬಳ್ಳಾಪುರದ ಮಂಚೇನಹಳ್ಳಿಗೆ ಕೂಚದ ಕಲ್ಲುಗಳನ್ನ ಸಾಗಿಸಲಾಗುತ್ತಿತ್ತು. ಘಟನೆಗೆ ಕ್ಯಾಂಟರ್ ನಲ್ಲಿ ತುಂಬಿದ್ದ ಅಧಿಕ ತೂಕವೇ ಕಾರಣ ಎಂದು ಹೇಳಲಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಅವಘದ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More

ಪ್ರೇಮ ವಿವಾಹಕ್ಕೆ ಪೋಷಕರ ಅಡ್ಡಿ: ಪೊಲೀಸರ ಜೊತೆ ಪೋಷಕರ ವಾಗ್ವಾದ: ಮುಂದೇನಾಯ್ತು ನೋಡಿ

ಚಿಕ್ಕಬಳ್ಳಾಪುರ : ಪ್ರೇಮಿಗಳ ಅಂತರ್ಜಾತಿ ಪ್ರೀತಿಗೆ ಪೋಷಕರಿಂದಲೇ ವಿರೋಧ ವ್ಯಕ್ತಪಡಿಸಿ ಪೊಲೀಸ್ ಠಾಣೆ ಎದುರೇ ಹೈಡ್ರಾಮಾ ನಡೆದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪೊಲೀಸ್ ಠಾಣೆ ಎದುರು ನಡೆದಿದೆ. ಹೌದು ಚಿಕ್ಕಬಳ್ಳಾಪುರ ತಾಲ್ಲೂಕಿನ ಕಾಮಶೆಟ್ಟಿಹಳ್ಳಿಯ ಕೆ ಎಂ ಮಧುಸೂದನ್ ಹಾಗೂ ಗುಡಿಬಂಡೆ ತಾಲೂಕಿನ ಜಂಬಿಗೇಮರದ ಹಳ್ಳಿಯ ಜೆ ಎಸ್ . ಭಾನುಶ್ರೀ ಜೋಡಿ ಚಿಕ್ಕಬಳ್ಳಾಪುರ ನಗರದ ಮಹೇಶ್ವರಿ ಡಿಗ್ರಿ ಕಾಲೇಜಿನಲ್ಲಿ ಬಿಕಾಂ ಓದುತ್ತಿರುವ ವೇಳೆ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದಾರೆ. ಆದರೆ ಅನ್ಯ ಕೋಮಿನ ಯುವಕನ ಜೊತೆಗಿನ ಪ್ರೀತಿ ಹಾಗೂ ಮಧುವೆಗೆ ಯುವತಿಯ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ಗುಡಿಬಂಡೆ ಪೊಲೀಸ್ ಠಾಣೆ ಎದುರೇ ಕೂಗಾಟ ರಂಪಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಪೊಲೀಸರ ಮೇಲೆಯೇ ವಾಗ್ವಾದಕ್ಕಿಳಿದಿದು ಯುವತಿಯನ್ನ ತಮ್ಮೊಂದಿಗೆ ಕಳಿಸುವಂತೆ ಒತ್ತಾಯಿಸಿದರು. ಈ ವೇಳೆ ಪೊಲೀಸರು ಯುವತಿಯ ಹೇಳಿಕೆಯನ್ನು ಪಡೆದ ವೇಳೆ ಪ್ರೀತಿಸಿದ ಯುವಕನೊಂದಿಗೆ ಹೋಗುವುದಾಗಿ ಯುವತಿ ಹೇಳಿಕೆ…

Read More