ಕುತ್ತಿಗೆಗೆ ಚಾಕುವಿನಿಂದ ಇರಿದು ದರೋಡೆ ಮಾಡಿದ್ದ ಆರೋಪಿಗಳ ಬಂಧನ

ನೆಲಮಂಗಲ: ವ್ಯಕ್ತಿಯೊಬ್ಬನ್ನು ಬಳಿ ಕಿತ್ತುಕೊಂಡು ಚಾಕುವಿನಿಂದ ಹಿರಿದು ಮೊಬೈಲ್ ಕಸಿದು ಪರಾರಿಯಾಗಿದ್ದ ಮೂರು ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಂಗಳೂರು ಪೀಣ್ಯ ನಿವಾಸಿಗಳಾದ ತೇಜಸ್(೨೬). ಸನ್ಮಾಲ್(೨೫), ತಾಲೂಕಿನ ಟಿ.ಬೇಗೂರು ಗ್ರಾಮದ ನಿವಾಸಿ ಚಾನ್‌ಪಾಷ್ (೨೩) ಬಂಧಿತ ಆರೋಪಿಗಳು. ಏನಿದು ಘಟನೆ: ಜೂ.೧೦ರಂದು ನಗರದ ಕೂಲಿಪುರ ಗ್ರಾಮದ ನಿವಾಸಿ ಬಸವರಾಜು ಎಂಬಾತ ಕೆಲಸ ಮುಗಿಸಿಕೊಂಡು ಮನೆಗೆ ತೆರುಳುತ್ತಿದ್ದ ವೇಳೆ ಮಾರ್ಗಮದ್ಯದ ತಾಲೂಕಿನ ಗಂಗಾಧರನಪಾಳ್ಯ ಬಳಿಯ ೩ ಮಂದಿ ದುಷ್ಕರ್ಮಿಗಳು ಮೊಬೈಲ್‌ಕಿತ್ತುಕೊಂಡಿದ್ದರು. ಪ್ರಶ್ನೆ ಮಾಡಿದಕ್ಕೆ ವ್ಯಕ್ತಿಯೊಬ್ಬ ಚಾಕುವಿನಿಂದ ಕುತ್ತಿಗೆ ಭಾಗಕ್ಕೆ ಹಿರಿದು ಸ್ಥಳದಿಂದ ಪರಾರಿಯಾಗಿದ್ದರು. ಬಳಿಕ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸ್ನೇಹಿತ ಶಶಿಕುಮಾರ್ ಎಂಬಾತ ಬಸವರಾಜು ಗಂಭೀರವಾಗಿ ಗಾಯಗೊಂಡಿದನ್ನು ಕಂಡು ತಕ್ಷಣ ನಗರದ ಜಯಪ್ರಸಾದ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಬಿನ್ನಮಂಗಲ ಬಳಿಕ ವಿ.ಪಿ.ಮ್ಯಾಗ್ನಸ್…

Read More