ಮಾಲೀಕನ ಹೆಂಡತಿಯ ಮೇಲೆ ಹತ್ಯಾಚಾರಕ್ಕೆ ಯತ್ನ: ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು

ನೆಲಮಂಗಲ: ತಾನೂ ಕೆಲಸ ಮಾಡುತ್ತಿದ್ದ ಮಾಲಿಕನ ಪತ್ನಿಯ ಫೋಟೋ ತೆಗೆದುಕೊಂಡು ಗಂಡನಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿ ವಿರುದ್ದ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೆಲಮಂಗಲ ನಗರ ವ್ಯಾಪ್ತಿಯಲ್ಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನ ಅರೊಪಿ ಕಳೆದ ನಾಲ್ಕು ತಿಂಗಳ ಹಿಂದೆ ತಾನು ಕೆಲಸ ಮಾಡುತ್ತಿದ್ದ ಅಂಗಡಿಯ ಮಾಲೀಕನ ಹೆಂಡತಿಯ ಮೇಲೆ ಹತ್ಯಾಚಾರಾಕ್ಕೆ ಯತ್ನಿಸಿದ್ದ, ಮರ್ಯಾದೆ ಅಂಜಿ ದೂರು ನೀಡದೆ  ಆತನನ್ನ ಕೆಲಸದಿಂದ ತೆಗೆದಿದ್ದರು. ಇದಾದ ಬಳಿಕ ಆರೋಪಿ ತನ್ನ ಮೊಬೈಲ್‌ನಲ್ಲಿ ಗೌಪ್ಯವಾಗಿ ಸೆರೆಹಿಡಿದಿದ್ದ ಮಹಿಳೆಯ ಫೋಟೋಗಳನ್ನ ಆತನ ಗಂಡನಿಗೆ ಫೋಟೋಗಳನ್ನ ಕಳುಹಿಸಿ ಬ್ಲಾಕ್ ಮೇಲ್ ಮಾಡಿದ್ದಾನೆ. ನೀನು ನಿನ್ನ ಹೆಂಡತಿಯನ್ನ ಬಿಟ್ಟು ಬಿಡು, ನಾನು ಅವಳನ್ನ ಮದುವೆಯಾಗುತ್ತೇನೆ ಎಂದು ಗಂಡನ ಮೊಬೈಲ್‌ಗೆ ಕರೆ ಮಾಡಿದ್ದಾನೆ. ಇಷ್ಟೆಲ್ಲಾ ಬೆಳವಣಿಗೆಗಳ ಬಳಿಕ ಆರೋಪಿ ಕಿರುಕುಳಕ್ಕೆ ಬೇಸತ್ತು ಗಂಡ ಹೆಂಡತಿ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.…

Read More

ಮಾದನಾಯಕನಹಳ್ಳಿ: ಬಾರ್‌ಅಲ್ಲಿ ಕುಡಿದ್ವ? ದುಡ್ಡ ಕೊಟ್ವ? ಹೋಗ್ತಿರ್ಬೇಕು. ಗಾಂಚಲಿ ಮಾಡುದ್ರೆ ಇಂಗೆ ಆಗೋದು

ನೆಲಮಂಗಲ: ಬಾರ್‌ ಅಂಡ್ ರೆಸ್ಟೋರೆಂಟ್ ಕುಡಿದ ಮತ್ತಿನಲ್ಲಿ ಗಲಾಟೆ ಶುರುಮಾಡಿದ ಪುಂಡರು ಬಾರ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕು ನಗರೂರಿನ ಶ್ರೀ ಬಾಲಾಜಿ ಸರೋವರ ರೆಸ್ಟೋರೆಂಟ್‌‌ನಲ್ಲಿ ನಡೆದಿದೆ. ರೆಸ್ಟೋರೆಂಟ್‌ಗೆ ಬಂದಿದ್ದ ಆರೋಪಿ ಸಂಜೆ 7 ಗಂಟೆಗೆ ಬಂದು ಕಂಠಪೂರ್ತಿ ಕುಡಿದು ಬಾರ್‌ ಸಿಬ್ಬಂದಿ ಜೊತೆ ಗಲಾಟೆ ಮಾಡಿ ಹಣ ಕೊಡದೆ ತೆರಳಿದ್ದ, ಬಳಿಕ 8.30 ರ ವೇಳೆಗೆ ತನ್ನ ಸ್ನೇಹಿತರಾದ ಮಂಜುಗೌಡ ಹಾಗೂ ರಾಕೇಶ್ ಎನ್ನುವವರನ್ನ ಸಹ ರೆಸ್ಟೋರೆಂಟ್‌ಗೆ ಕರೆದುಕೊಂಡು ಬಂದಿದ್ದಾನೆ. ಪುನಃ ರೆಸ್ಟೋರೆಂಟ್ ನಲ್ಲಿ ಮದ್ಯ ಖರೀದಿಸಿ ಅಲ್ಲೇ ಇದ್ದ ಸ್ವಿಮ್ಮಿಂಗ್ ಫೂಲ್ ಬಳಿ ಕುಡಿಯಲು ಹೋಗಿದ್ದರಂತೆ, ಅಲ್ಲಿಗೆ ರೆಸ್ಟೋರೆಂಟ್ ಸಿಬ್ಬಂದಿ ಸತೀಶ್ ತೆರಳಿ ಸರ್ ಇಲ್ಲಿ ಕುಡಿಯುವ ಆಗಿಲ್ಲ, ನೀವು ಟೇಬಲ್‌ಗೆ ತೆರಳಿ ಎಂದಿದ್ದಕ್ಕೆ ನಾವು ಇಲ್ಲೆ ಕುಡಿಯುತ್ತೇವೆ ಏನ್ ಮಾಡ್ಕೊತ್ಯಾ ಮಾಡ್ಕೊ ಹೋಗೋ. ನಾವು ಲೋಕಲ್‌ನವರು…

Read More