ಒಂದಲ್ಲ ಎರಡಲ್ಲ ಮೂರು ದರೋಡೆ ಸ್ವರೂಪ ಮಾತ್ರ ಬೇರೆ ಬೇರೆ

ಬ್ಯಾಡರಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ದರೋಡೆ, ಆನ್‌ಲೈನ್ ವಂಚನೆಯಂತಹ ಸಾಲು ಸಾಲು ಪ್ರಕರಣಗಳು ವರದಿಯಾಗಿದ್ದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಪೇ‌ಟೀಎಂ ಇಸ್ಟಾಲ್ ಮಾಡೋದಾಗಿ ಬೀದಿ ಬದಿ ವ್ಯಾಪಾರಿಗೆ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ, ಬೀದಿ ಬದಿ ವ್ಯಾಪಾರಿ ಧನಲಕ್ಷ್ಮಮ್ಮ ಎನ್ನುವವರ ಬ್ಯಾಂಕ್ ಖಾತೆಯಲ್ಲಿದ್ದ 22 ಸಾವಿರ ನಗದನ್ನು ದೋಚಿದ್ದಾರೆ. ನಾಗರಹೊಳೆ ನಗರ ಬಡಾವಣೆಯಲ್ಲಿ ನಡೆದಿದ್ದು ವ್ಯಾಪಾರಿಗೆ ಮೊಬೈಲ್‌ಗೆ ಪೇಟಿಎಂ ಹಾಕಿಕೊಡುವುದಾಗಿ ಆರೋಪಿಗಳು ಹೇಳಿದ್ದು ಮೊಬೈಲ್ ಪಡೆದು ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿರುವುದಾಗಿ ದೂರು ನೀಡಿದ್ದು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಶಿರಡಿಯಲ್ಲಿ ದರೋಡೆ ಆಗಿದೆ, ಸಹಾಯ ಮಾಡಿ ಎಂದು ವಂಚನೆ ಮಾಡಿರುವ ಮತ್ತೊಂದು ಪ್ರಕರಣ ದಾಖಲಾಗಿದೆ, ವಿದ್ಯಮಾನನಗರದ ಉದ್ಯಮಿ ಶ್ರೀನಿವಾಸ್‌ಗೆ ಕರೆ ಮಾಡಿರುವ ಆರೋಪಿಗಳು ಉದ್ಯಮಿಯ ಉದ್ಯಮಕ್ಕೆ ಪೂರೈಕದಾರ ಎಂದು ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ನಾವು ಶಿರಡಿಯಲ್ಲಿ ಇದ್ದೇವೆ, ಇಲ್ಲಿ…

Read More

ಅಂತರಾಜ್ಯ ಕಳ್ಳರನ್ನು ಬಂಧಿಸಿದ ಮಾದನಾಯಕನಹಳ್ಳಿ ಪೊಲೀಸರು, ಬಂಧಿತರಿಂದ 75 ಲಕ್ಷ ಮೂಲ್ಯದ ಎಲೆಕ್ಟ್ರಾನಿಕ್‌ ಉತ್ಪನ್ನಗಳು ವಶಕ್ಕೆ – Digital Varthe

ನೆಲಮಂಗಲ: ಕೊಟ್ಯಾಂತರ ರುಪಾಯಿ ಮೌಲ್ಯದ ಕ್ಯಾಮೆರಾ, ಲ್ಯಾಪ್‌ ಟಾಪ್‌ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನ‌ ಕಳ್ಳತನ್‌ ಮಾಡಿದ್ದ ಏಳು ಜನ ಆರೋಪಿಗಳಲ್ಲಿ ಐದು ಜನರನ್ನ ಬಂಧಿಸಿದ್ದು ಇನ್ನು ಇಬ್ಬರಿಗಾಗಿ ಶೋಧ ಮಾಡಲಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪತ್ರಿಕಾಗೋಷಗಠಿಯಲ್ಲಿ ತಿಳಿಸಿದ್ದಾರೆ ಪ್ರಸಿದ್ಧ ಅಂತರ ರಾಷ್ಟ್ರೀಯ ಕಂಪನಿಗಳ ವೇರ್‌ಹೌಸ್ ಹಾಗೂ ಗೋಡನ್‌ಗಳ ಕಳ್ಳತನ ಮಾಡುತ್ತಿದ್ದ ಅಂತರ್ ರಾಜ್ಯ ಕಳ್ಳರನ್ನು ಬಂಧಿಸಿ 75ಲಕ್ಷ ಮೌಲ್ಯದ ವಸ್ತುಗಳನ್ನು ಮಾದನಾಯಕನಹಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣದಲ್ಲಿ ಸೋಮವಾರ ಸಂಜೆ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಘಟನೆ ಹಿನ್ನಲೆ: ಕಳೆದ 2023ರ ಫೆ.19ರಂದು ಬೆಂಗಳೂರು ಉತ್ತರ ತಾಲೂಕಿನ ಅವ್ವೇರಹಳ್ಳಿ ಗ್ರಾಮದ ಬಳಿಯ ಪ್ಯಾನಸೋನಿಕ್ ಇಂಡಿಯಾ ಪ್ರೈ.ಲಿ. ಗೋಡನ್‌ನಲ್ಲಿ ರಾತ್ರಿ ವೇಳೆ ದುಷ್ಕರ್ಮಿಗಳು ವೇರ್‌ಹೌಸ್ ಶೀಟ್‌ಗಳನ್ನು ಕಿತ್ತು ಒಳಗೆ ಬಂದು ಸುಮಾರು 69.2 ಲಕ್ಷಮೌಲ್ಯದ ಲ್ಯಾಪ್‌ಟ್ಯಾಫ್, ಹೆಡ್‌ಫೋನ್,…

Read More