ಕಾಂಗ್ರೆಸ್ ಗೆಲುವಿಗೆ ಸುಧಾಂ ದಾಸ ಶ್ರಮ ಅಪಾರ: ಯಾರು ಈ ಸುಧಾಂ ದಾಸ್

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ತನ್ನ ಗೆಲುವಿನ ಪತಾಕೆಯನ್ನು ಕರ್ನಾಟಕದಲ್ಲಿ ಹಾರಿಸಿದ್ದು, ಭ್ರಷ್ಟ ಬಿಜೆಪಿಯಿಂದ ಕರ್ನಾಟಕದವನ್ನು ಉಳಿಸಿಕೊಂಡಂತಹ ಹರ್ಷದಲ್ಲಿ ಕನ್ನಡಿಗರಿದ್ದಾರೆ. ಕಾಂಗ್ರೆಸ್ ಸರ್ಕಾರವು ತನ್ನ ಗೆಲುವನ್ನು ಸಾಧಿಸಲು ಸಾಕಷ್ಟು ಜನ ಶ್ರಮ ಪಟ್ಟಿದ್ದು ಅದರಲ್ಲಿ ಬಹು ಮುಖ್ಯವಾಗಿ ಕರ್ನಾಟಕದ ಜೋಡೆತ್ತುಗಳಾದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ರವರು ನಿರಂತರವಾಗಿ ಕರ್ನಾಟಕ ರಾಜ್ಯ ಪ್ರವಾಸದಿಂದ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಪಟ್ಟಿದ್ದಾರೆ. ಈಗ ಕಾಂಗ್ರೆಸ್ ಪಾಳಯದಲ್ಲಿ ಹಲವಾರು ಭಿನ್ನಾಭಿಪ್ರಾಯಗಳು ಮೂಡುತ್ತಿದ್ದು ಎಂಎಲ್ಸಿ ಆಯ್ಕೆಯ ವಿಚಾರವಾಗಿ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಎಚ್.ಪಿ ಸುಧಾಮದಾಸ್ ( ಮಾಜಿ ಆಯುಕ್ತರು, ಮಾಹಿತಿ ಆಯೋಗ) ರವರ ಹೆಸರು ಕೇಳಿ ಬರುತ್ತಿದ್ದು ಇವರಿಗೆ ಎಂಎಲ್ಸಿ ಟಿಕೆಟ್ ನೀಡಲು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ರವರು ಈಗಾಗಲೇ ಹಸಿರು ನಿಶಾನೆಯನ್ನು ತೋರಿದ್ದಾರೆ ಎಂಬುದು…

Read More