ಖಾಲಿ ರೋಡು ಜಾಲಿ ರೈಡು, ಕೊನೆಗೆ ದುರಂತ ಅಂತ್ಯ, ಬೈಕ್ ಅಪಘಾತದಲ್ಲಿ ಓರ್ವ ಸಾವು

ಬೆಂಗಳೂರು: ರಾತ್ರಿ ಜಾಲಿ ರೈಡ್ ಗೆ ಒರ್ವ ಬಲಿಯಾಗಿದ್ದು ಮತ್ತೊರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ಬೆಂಗಳೂರಿನ ಪದ್ಮನಾಭ ನಗರದ ದೇವೆಗೌಡ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ರಾಮ್ ಕುಮಾರ್( 29)ಮೃತ ವ್ಯಕ್ತಿ, ಯಶವಂತ (22)  ಗಾಯಾಳು. ಮೃತ ಹಾಗೂ ಗಾಯಾಳು ಬ್ಯಾಟರಾಯನಪುರ ಬಳಿಯ ಪ್ರಮೋದ್ ಲೇಔಟ್ ನಿವಾಸಿಗಳಾಗಿದ್ದು, ಮೃತ ರಾಮ್‌ಕುಮಾರ್ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿದ್ದ ತಿಳಿದು ಬಂದಿದೆ. ಇದನ್ನೂ ಓದಿ: ಇಷ್ಟಕ್ಕೆಲ್ಲ ಕುತ್ತಿಗೆಗೆ ಮಚ್ಚು ಇಡೋದ!? ಯಾವ ಪುರುಷಾರ್ತಕ್ಕಾಗಿ!? ರಾತ್ರಿ ಎರಡು ಘಂಟೆ ಸುಮಾರಾಗಿ ಘಟನೆ ನಡೆದಿದ್ದು ಅಪಘಾತದ ವೇಳೆ ಫ್ಲೈ ಒವರ್  ತಡೆಗೋಡೆಗೆ ಬೈಕ್ ಡಿಕ್ಕಿಯಾಗಿದೆ. ತಡೆಗೋಡೆಗೆ ಡಿಕ್ಕಿಯಾಗಿ ಹಿಂಬದಿಯಿಂದ ರಾಮ್ ಕುಮಾರ್ ಹಾರಿ ಕೆಳಗೆ ಬಿದ್ದಿದ್ದಾನೆ, ಈ ವೇಳೆ ತಲೆಗೆ ಪೆಟ್ಟಾಗಿ ಸ್ಥಳದಲ್ಲಿ ಸಾವನಪ್ಪಿದ ರಾಮ್ ಕುಮಾರ್. ಘಟನೆ ಬಳಿಕ ರಾಮ್ ಕುಮಾರ್ ಮೃತ ದೇಹವನ್ನು ಕಿಮ್ಸ್ ಅಸ್ಪತ್ರೆಗೆ ರವಾನಿಸಿದ್ದು, ಗಾಯಾಳು ಯಶವಂತ ಹತ್ತಿರದ…

Read More