ಮಾಲೀಕನ ಹೆಂಡತಿಯ ಮೇಲೆ ಹತ್ಯಾಚಾರಕ್ಕೆ ಯತ್ನ: ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು

ನೆಲಮಂಗಲ: ತಾನೂ ಕೆಲಸ ಮಾಡುತ್ತಿದ್ದ ಮಾಲಿಕನ ಪತ್ನಿಯ ಫೋಟೋ ತೆಗೆದುಕೊಂಡು ಗಂಡನಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿ ವಿರುದ್ದ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೆಲಮಂಗಲ ನಗರ ವ್ಯಾಪ್ತಿಯಲ್ಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನ ಅರೊಪಿ ಕಳೆದ ನಾಲ್ಕು ತಿಂಗಳ ಹಿಂದೆ ತಾನು ಕೆಲಸ ಮಾಡುತ್ತಿದ್ದ ಅಂಗಡಿಯ ಮಾಲೀಕನ ಹೆಂಡತಿಯ ಮೇಲೆ ಹತ್ಯಾಚಾರಾಕ್ಕೆ ಯತ್ನಿಸಿದ್ದ, ಮರ್ಯಾದೆ ಅಂಜಿ ದೂರು ನೀಡದೆ  ಆತನನ್ನ ಕೆಲಸದಿಂದ ತೆಗೆದಿದ್ದರು. ಇದಾದ ಬಳಿಕ ಆರೋಪಿ ತನ್ನ ಮೊಬೈಲ್‌ನಲ್ಲಿ ಗೌಪ್ಯವಾಗಿ ಸೆರೆಹಿಡಿದಿದ್ದ ಮಹಿಳೆಯ ಫೋಟೋಗಳನ್ನ ಆತನ ಗಂಡನಿಗೆ ಫೋಟೋಗಳನ್ನ ಕಳುಹಿಸಿ ಬ್ಲಾಕ್ ಮೇಲ್ ಮಾಡಿದ್ದಾನೆ. ನೀನು ನಿನ್ನ ಹೆಂಡತಿಯನ್ನ ಬಿಟ್ಟು ಬಿಡು, ನಾನು ಅವಳನ್ನ ಮದುವೆಯಾಗುತ್ತೇನೆ ಎಂದು ಗಂಡನ ಮೊಬೈಲ್‌ಗೆ ಕರೆ ಮಾಡಿದ್ದಾನೆ. ಇಷ್ಟೆಲ್ಲಾ ಬೆಳವಣಿಗೆಗಳ ಬಳಿಕ ಆರೋಪಿ ಕಿರುಕುಳಕ್ಕೆ ಬೇಸತ್ತು ಗಂಡ ಹೆಂಡತಿ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.…

Read More

Bengaluru: ಒಂದು ಸಣ್ಣ ತಪ್ಪು ಇಬ್ಬರ ಪ್ರಾಣ ಕಳೀತು, ಏನು? ಎಲ್ಲಿ? ಹೇಗೆ? ಕಾರಣ? ಯಾರು?

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ವಿದ್ಯುತ್ ಕಂಬಕ್ಕೆ (Electric pole) ಬೈಕ್ ಡಿಕ್ಕಿ (Bike Accident) ಹೊಡೆದ ಹಿನ್ನೆಲೆ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರೂಣ ಘಟನೆಗೆ ನಡೆದಿದೆ. ದುಡಿದು ಕುಟುಂಬಕ್ಕೆ ಆಧಾರಸ್ಥಂಭ ಆಗಬೇಕಿದ್ದ ಚಂದು (21) (Chandu), ಮೋಹನ್ ಕುಮಾರ್ (21) (Mohan Kumar), ಇಬ್ಬರು ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಸುಂಕದಕಟ್ಟೆಯ (Sunkadakatte) ಕಾಲೇಜು ಬಸ್ ಸ್ಟಾಪ್ (College Bus Stop) ಬಳಿ ಅಪಘಾತ ಸಂಭವಿಸಿದೆ.‌ ಹೆಲ್ಮೆಟ್ ಇಲ್ಲದ್ದಕ್ಕೆ ಸಾವು: ಹೆಲ್ಮಟೆ ಇಲ್ಲದೇ (without Helmet) ಪಲ್ಸರ್ ಬೈಕ್ (Pulsur Bike) ನಲ್ಲಿ ವೇಗವಾಗಿ ತೆರಳುತಿದ್ದ ಸವಾರರು, ನೈಸ್ ರಸ್ತೆ (Nice Road) ಕಡೆಯಿಂದ ಸುಂಕದಕಟ್ಟೆ ಕಡೆಗೆ ತೆರಳುತಿದ್ದರು, ಈ ವೇಳೆ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ ಇಬ್ಬರು ಸವಾರರ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.…

Read More

ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಕೇರಳ ಮೂಲದ ವ್ಯಕ್ತಿ

ನೆಲಮಂಗಲ (ಮೇ 31) : ಟವಲ್‌ನಿಂದ ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದ ಸುಭಾಷ್‌ನಗರದಲ್ಲಿ ಈ ಘಟನೆ ಸಂಭವಿಸಿದ್ದು ನೆರೆ ರಾಜ್ಯ ಕೇರಳದ ಕಣ್ಣೂರು ಜಿಲ್ಲೆಯ ಪೆರಂದಟ್ಟ ಮೂಲದ ಎವಿ ವಿನೀಶ್‌ (37) ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾನೆ. ವಿನೀಶ್‌ ಮೃತಾ ದೇಹದ ಬಳಿ ಡೆತ್‌ ನೋಟ್‌ ಒಂದು ಪತ್ತೆಯಾಗಿದ್ದು, ವಿನೀಶ್‌ ಆತ್ಮಹತ್ಯೆಗೆ ಮಾಡಿಕೊಳ್ಳುವ ಮುನ್ನ ಡೆತ್‌ ನೋಟ್‌ ಬರೆದಿದ್ದಾನೆ ಎನ್ನಲಾಗುತಿದ್ದು, ಡೆತ್‌ ನೋಟ್‌ನಲ್ಲಿ ಅಪ್ಪ ಅಮ್ಮ ದಯವಿಟ್ಟು ನನ್ನನ್ನು ಕ್ಷಮಿಸಿ, ಮೇಲಿನಿಂದ ನಿಮ್ಮನ್ನ ನೋಡುತ್ತಿರುತ್ತನೆ ಎಂದು ಮಲಯಾಳಂ ಭಾಷೆಯಲ್ಲಿ ಬರೆದಿದ್ದಾನೆ ಎನ್ನಲಾಗುತ್ತಿದೆ, ಮೃತ ವಿನೀಶ್‌ ಕಳೆದ 15 ವರ್ಷದ ಹಿಂದೆ ಉದ್ಯೋಗಕ್ಕಾಗಿ ಕೇರಳದಿಂದ ನೆಲಮಂಗಲಕ್ಕೆ ಬಂದಿದ್ದು ಸದ್ಯ ನೆಲಮಂಗಲ ಹೊರವಲಯದಲ್ಲಿರುವ ಪವರಿಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಇನ್ನೂ…

Read More