ಘಾಟಿ ಸುಭ್ರಹ್ಮಣ್ಯದಲ್ಲಿ ಹುಂಡಿ ಎಣಿಕೆ: ನೋಟ್ ಬ್ಯಾನ್ ಬೆನ್ನಲ್ಲೆ ಎರಡು ಸಾವಿರ ಮೌಲ್ಯದ‌ ಗರಿ ಗರಿ ನೋಟಿ

ಬೆಂಗಳೂರು ಗ್ರಾಮಾಂತರ:  ದೊಡ್ಡಬಳ್ಳಾಪುರ ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಘಾಟಿ ಸುಭ್ರಹ್ಮಣ್ಯ ಕ್ಷೇತ್ರದಲ್ಲಿ ಹುಂಡಿ ಎಣಿಕೆ ಕಾರ್ಯ ಮಾಡಲಾಗಿದೆ. ಎರಡು ತಿಂಗಳಿಗೊಮ್ಮೆ ನಡೆಯುವ ಈ ಎಣಿಕೆ ಕಾರ್ಯದಲ್ಲಿ ಈ ಭಾರಿ ದಾಖಲೆಯ ಮೊತ್ತ ಸಂಗ್ರಹವಾಗಿದೆ. ಈ ಭಾರಿ ಹುಂಡಿಯಲ್ಲಿ 89 ಲಕ್ಷದ 2 ಸಾವಿರ 459 ರೂ ಸಂಗ್ರಹವಾಗಿದೆ. ಇದರೊಂದಿಗೆ 3 ಗ್ರಾಂ 800 ಮೀಲಿ ಚಿನ್ನ, 3 ಕೆಜಿ 150 ಗ್ರಾಂ ಬೆಳ್ಳಿಯನ್ನ ಭಕ್ತರು ದೇವರ ಹುಂಡಿಗೆ ಹಾಕುವ ಮೂಲಕ ಹರಕೆ ತಿರಿಸಿದ್ದಾರೆ. ದೇವಾಲಯದ ಇಓ ಕೃಷ್ಣಪ್ಪ ನೇತೃತ್ವದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಈಗಾಗಲೇ ವಾಪಸ್ ಪಡೆಯಲು ನಿರ್ಧರಿಸುವ 2000 ನೋಟುಗಳು ಸುಮಾರು 46 ಸಾವಿರ ಹಣವನ್ನ ಭಕ್ತರು ಹುಂಡಿಗೆ ಸಮರ್ಪಿಸಿದ್ದಾರೆ.

Read More