ಸ್ಯಾಂಡಲ್‌ವುಡ್‌ ಮೇರುನಟನ ಪತ್ನಿ ಸಾವು: ಕಣ್ಣೀರಲ್ಲಿ ಚಂದನವನ

ಸ್ಯಾಂಡಲ್‌ವುಡ್‌ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರು ಹೃದಯಾಘಾತದಿಂಧ ನಿಧನರಾಗಿದ್ದಾರೆ.

ಬೆಂಗಳೂರು (ಆ.7):ಸ್ಯಾಂಡಲ್‌ವುಡ್‌ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರು ಹೃದಯಾಘಾತದಿಂಧ ನಿಧನರಾಗಿದ್ದಾರೆ. ಪತಿ ವಿಜಯ್ ಅವರ ಜೊತೆಗೆ ಬ್ಯಾಂಕಾಕ್ ಗೆ ತೆರಳಿದ್ದಾಗ ಅಲ್ಲಿ ಹಾರ್ಟ್ ಅಟ್ಯಾಕ್ ಆಗಿ  ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಸುದ್ದಿ ಇಡೀ ಕನ್ನಡ ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿಯಾಗಿದೆ.

ದಂಪತಿಗೆ ಇವರಿಗೆ ಶೌರ್ಯ ಎಂಬ ಓರ್ವ ಪುತ್ರನಿದ್ದಾನೆ. 2016ರಲ್ಲಿ ಬಿಡುಗಡೆಯಾದ ಅಪೂರ್ವ ಸಿನೆಮಾದಲ್ಲಿ ಅತಿಥಿ ಪಾತ್ರದಲ್ಲಿ ಸ್ಪಂದನಾ ನಟಿಸಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಶಿವರಾಂ ಅವರ ಪುತ್ರಿಯಾಗಿರುವ ಸ್ಪಂದನಾ ಅವರನ್ನು ವಿಜಯ ರಾಘವೇಂದ್ರ 2007, ಆಗಸ್ಟ್ 26 ರಲ್ಲಿ  ಪ್ರೀತಿಸಿ  ಮದುವೆಯಾಗಿದ್ದರು. ಇವರ 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಕೇವಲ 19 ದಿನಗಳು ಬಾಕಿ ಇರುವಂತೆ ಈ ದುರಂತ ನಡೆದಿದೆ.

ರಾತ್ರಿ ಮಲಗಿದ್ದ ಜಾಗದಲ್ಲೆ ಸ್ಪಂದನಾಹೆ ಹೃದಯಾಘಾತವಾಗಿದ್ದು ವಿಜಯರಾಘವೇಂದ್ರ ನೋಡಿಕೊಳ್ಳುವಷ್ಟರಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಿದೆ ಎನ್ನಲಾಗುತ್ತಿದೆ. ತಕ್ಷಣ ಆಸ್ಪತ್ರಗೆ ಸೇರಿಸಲು ಪ್ರಯತ್ನ ಪಟ್ಟರು ವೈದ್ಯರು ಸಾವು ಸಂಭವಿಸಿರುವುದನ್ನ ದೃಡಪಡಿಸಿದ್ದಾರೆ.

ಸೌಜನ್ಯ ಪ್ರಕರಣದಲ್ಲಿ ಎಲ್ಲಿಯೂ ಹೇಳದ ಮಾಹಿತಿ ಬಿಚ್ಚಿಟ್ಟ ಮಹೇಶ್‌ ತಿಮರೊಡ್ಡಿ

ಈಗಾಗಲೇ ಸ್ಪಂದನಾ ತಂದೆ ಬ್ಯಾಂಕಾಕ್‌ನತ್ತ ಹೊರಟಿದ್ದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬ್ಯಾಂಕಾಕ್‌ ತಲುಪಲಿದ್ದಾರೆ, ಅಲ್ಲಿನ ಕಾನೂನಿನ ಪ್ರಕಾರ ಕರ್ತವ್ಯಗಳನ್ನ ಪೂರೈಸಿ ನಾಳೆ ಸಂಜೆ ವೇಳೆಗೆ ಮೃತ ದೇಹ ಬೆಂಗಳೂರು ತಲುಪಬಹುದು ಎಂದು ವಿಜಯ ರಾಘವೇಂದ್ರ ಕುಟುಂಬಸ್ಥರು ಮಾಹಿತಿ ನೀಡಿದ್ದಾರರೆ

Related posts

Leave a Comment