ಕೆಂಪೆಗೌಡರ ಭಾವಚಿತ್ರಕ್ಕೆ ಮಸಿ, ನೆಲಮಂಗಲದಲ್ಲಿ ಬುಗಿಲೆದ್ದ ಜನಾಕ್ರೋಶ

ನೆಲಮಂಗಲ: ನೆಲಮಂಗಲದ ಕುಣಿಗಲ್ ಸರ್ಕಲ್‌ನಲ್ಲಿರುವ ರಾಜ್ಯ ಒಕ್ಕಲಿಗರ ವೇದಿಕೆಯ ನಾಮಫಲಕದಲ್ಲಿದ್ದ ಕೆಂಪೆಗೌಡರ ಭಾವಚಿತ್ರಕ್ಕೆ ಕಪ್ಪು ಬಣ್ಣ ಬಳಿದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನೆಲಮಂಗಲದಲ್ಲಿ ಕೆಂಪೆಗೌಡ ಹೋರಾಟ ಬಳಗದವರು ಪ್ರತಿಭಟನೆ ನಡೆಸಿದ್ದಾರೆ.

ಹೆದ್ದಾರಿ ತಡೆ: ಕುಣಿಗಲ್ ಬೈಪಾಸ್‌ ಸರ್ಕಲ್‌ನಲ್ಲಿ ಪ್ರತಿಭಟನ ನಿರತ ನಾಗರೀಕರು ಹೆದ್ದಾರಿ ತಡೆದು ಮಾನವ ಸರಪಳಿ ರಚಿಸಿದರು. ಕೈಗೆ ಕಪ್ಪು ಪಟ್ಟಿ ಧರಿಸಿದ್ದ ಪ್ರತಿಭಟನಾ ನಿರತರು ಕಪ್ಪು ಬಣ್ಣ ಬಳಿದವರನ್ನ ಬಂಧಿಸುವಂತೆ ಆಗ್ರಹಿಸಿದ್ದಾರೆ. ಘಟನೆಯಿಂದ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಂ ಉಂಟಾಗಿದ್ದು ವಾಹನ ಸವಾರರು ಗಂಟೆಗಟ್ಟಲೆ ರಸ್ತೆಯಲ್ಲಿ ಕಾದು ನಿಂತಿದ್ದರು.

ಅನುಮಾನ: ಇತ್ತೀಚೆಗೆ ನಡೆದ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ವೇಳೆ ರಾಜಕೀಯ ಮುಖಂಡರ ಭಾವಚಿತ್ರಗಳನ್ನ ಮರೆಮಾಚುವಂತೆ ಚುನಾವಣಾ ಆಯೋಗ ಆದೇಶ ಮಾಡಿತ್ತು. ಇದರಂತೆ ನಗರಸಭೆ ಅಧಿಕಾರಿಗಳು ಎಲ್ಲೆಡೆ ಕಪ್ಪು ಬಣ್ಣ ಬಳಸಿ ರಾಜಕೀಯ ಮುಖಂಡರ ಭಾವಚಿತ್ರಗಳನ್ನ ಮರೆಮಾಚಿದ್ದರು. ಬಹುಶಃ ಚುನಾವಣೆ ವೇಳೆ ಈ ಅವಘಡ ನಡೆದಿದ್ದು ಬಳಿಕ ಬಾವಚಿತ್ರವನ್ನ ಪೇಪರ್ ಅಥವಾ ಯಾವುದೋ ಬೇರೆ ವಸ್ತು ಬಳಸಿ ಮುಚ್ಚಿರಬಹುದು. ಇತ್ತೀಚೆಗೆ ಕಪ್ಪು ಬಣ್ಣ ಕಾಣಿಸಿರಬಹುದು ಎಂಬುದು ಕೆಲವ ಅಭಿಪ್ರಾಯವಾಗಿದೆ.

Related posts

One Thought to “ಕೆಂಪೆಗೌಡರ ಭಾವಚಿತ್ರಕ್ಕೆ ಮಸಿ, ನೆಲಮಂಗಲದಲ್ಲಿ ಬುಗಿಲೆದ್ದ ಜನಾಕ್ರೋಶ”

Leave a Comment