PARKING PROBLEM ಖಾಸಗಿ ವಾಹನಗಳಿಕೆ ನಿಲ್ದಾಣವಾಗಿದೆ ಸರ್ಕಾರಿ ಆಸ್ಪತ್ರೆ ಆವರಣ: ಆಸ್ಪತ್ರೆಗೆ ಬರುವ ಆಂಬುಲೆನ್ಸ್‌, ರೋಗಿಗಳ ಪರದಾಟ

ನೆಲಮಂಗಲ (ಜೂ 05): ಸರ್ಕಾರಿ ಆಸ್ಪತ್ರೆ ಆವರಣ ಖಾಸಗಿ ವಾಹನಗಳಿಗೆ ನಿಲ್ದಾಣವಾಗಿದ್ದು ಆಸ್ಪತ್ರೆಗೆ ಬರುವ ಆಂಬುಲೆನ್ಸ್‌ಗಳಿಗೆ ದಾರಿ ಇಲ್ಲದೆ ಪರದಾಡುವಂತಾಗಿದೆ.

ಆಂಬುಲೆನ್ಸ್‌ ಪರದಾಟ: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದಲ್ಲಿರುವ ನೆಲಮಂಗಲ ತಾಲೂಕೂ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸಮಸ್ಯೆ ಎದುರಾಗಿದ್ದು, ನಿತ್ಯ ಆಸ್ಪತ್ರೆಗೆ ಬರುವ ಆಂಬುಲೆನ್ಸ್‌ಗಳಿಗೆ ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದೆ ಒಂದೆಡೆ ಆಂಬುಲೆನಸ್ಸ ಸವಾರರು ಪರದಾಡುತ್ತಿದ್ದರೆ ಮತ್ತೊಂದೆಡೆ ತಮ್ಮ ಸ್ವಂತ ವಾಹನಗಳಲ್ಲಿ ಆಸ್ಪತ್ರಗೆ ಬರುವ ರೋಗಿಗಳಿಗೆ ವಾಹನ ನಿಲ್ಲಿಸಲು ಸಮಸ್ಯೆ ಎದುರಾಗಿದೆ.

ಸರ್ಕಾರಿ ಕಚೇರಿಗೆ ಬರುವವರೆ ಹೆಚ್ಚು: ತಾಲೂಕು ಸಾರ್ವಜನಿಕ ಆಸ್ಪತ್ರೆ ಸಮೀಪದಲ್ಲಿ ಹಲವಾರು ಸರ್ಕಾರಿ ಆಸ್ಪತ್ರೆಗಳಿದ್ದು ನಿತ್ಯ ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನ ಆಸ್ಪತ್ರೆ ಆವರಣದಲ್ಲಿ ಬಿಟ್ಟು ತೆರಳುತ್ತಾರೆ. ಇದರಿಂದ ಆಸ್ಪತ್ರೆ ಆವರಣದಲ್ಲಿ ವಾಹನ ದಟ್ಟಣೆ ಹೆಚ್ಚಳವಾಗುತ್ತದೆ.

ನೆಲಮಂಗಲ ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಖಾಸಗಿ ವಾಹನಗಳನ್ನು ನಿಲ್ಲಿಸಿರುವ ಚಿತ್ರ

ಇಲಾಖ ಸಿಬ್ಬಂಧಿಗಳ ವಾಹನ: ತಾಲೂಕು ದಂಡಾಧಿಕಾರಿಗಳ ಕಚೇರಿ, ನೆಲಮಂಗಲ ಟೌನ್‌ ಪೊಲೀಸ್‌ ಠಾಣೆ, ನೆಲಮಂಗಲ ಡಿವೈಎಸ್ಪಿ ಕಚೇರಿ ಸೇರಿದಂತೆ ಹಲವು ಕಚೇರಿಗೆ ಬರುವ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ತಮ್ಮ ಬೈಕ್‌ ಹಾಗೂ ಕಾರುಗಳನ್ನು ತಂದು ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿರುತ್ತಾರೆ.

ಸಾರ್ವಜನಿಕ ಬೈಕ್‌ ಪಾರ್ಕಿಂಗ್:‌ ಅಷ್ಟೆ ಅಲ್ಲ ಪ್ರತಿನಿತ್ಯ ಹಳ್ಳಿಗಳಿಂದ ಬೆಂಗಳೂರು ನಗರಕ್ಕೆ ಕರ್ತವ್ಯ ನಿಮಿತ್ತ ತೆರಳುವ ನಾಗರೀಕರು ಹಳ್ಳಿಗಳಿಂದ ತಮ್ಮ ಬೈಕ್‌ಗಳಲ್ಲಿ ಬಂದು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬೈಕ್‌ ನಿಲ್ಲಿಸಿ ನೆಲಮಂಗಲ ಬಸ್‌ ನಿಲ್ದಾಣದಿಂದ ಬಸ್‌ ಮುಖಾಂತರ ಬೆಂಗಳೂರಿಗೆ ತೆರಳಿ ವಾಪಸ್‌ ಮನಗೆ ಬರುವ ವೇಳೆ ಆಸ್ಪತ್ರೆ ಆವರಣದಲ್ಲಿ ನಿಲ್ಲಿಸುವ ಬೈಕ್‌ ತೆಗೆದುಕೊಂಡು ಮನೆಗೆ ಹೋಗುತ್ತಾರೆ.

ಸೆಕ್ಯುರಿಟಿ ಅಲಭ್ಯತೆ: ಇನ್ನೂ ನೆಲಮಂಗಲ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸರ್ಕಾರಿ ಭದ್ರತಾ ಸಿಬ್ಬಂದಿಗಳನ್ನ ನೇಮಕ ಮಾಡಿಲ್ಲ, ಈಗಾಗಿ ಆಸ್ಪತ್ರೆ ಆವರಣದಲ್ಲಿ ನಿಲ್ಲುವ ವಾಹನಗಳಿಗೆ ಹೇಳೋರು ಕೇಳೋರು ಯಾರು ಇಲ್ಲದಂತಾಗಿದೆ. ಸದ್ಯ ಸ್ವಚ್ಚತಾ ಸಿಬ್ಬಂದಿಗಳು ಆಸ್ಪತ್ರೆ ಆಚರಣದಲ್ಲಿ ಕೆಲ ನಿರ್ವಹಣೆ ಮಾಡುತ್ತಿದ್ದು, ಸ್ವಚ್ಚತಾ ಸಿಬ್ಬಂದಿಗಳು ವಾಹನ ಪಾರ್ಕ್‌ ಮಾಡುವವರನ್ನ ಕೇಳೋಕೆ ಹೋದ್ರೆ “ನಿನ್ನ ಕೆಲಸ ಏನಿದೆ ಅದನ್ನ ಮಾಡೋ” ಎಂದು ಏಕ ವಚನದಲ್ಲಿ ಮಾತನಾಡೋರೆ ಹೆಚ್ಚು.

ಸಿಬ್ಬಂದಿ ಕೊರತೆ: ಈ ಕುರಿತು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ|| ಸೋನಿಯಾ ಮಾತನಾಡಿ ನಮ್ಮ ಸಿಬ್ಬಂದಿಗಳ್ಯಾರು ಅಡ್ಡದಿಡ್ಡಿ ಪಾರ್ಕಿಂಗ್‌ ಮಾಡುವುದಿಲ್ಲ, ನಗರಕ್ಕೆ ನಿತ್ಯ ಬರುವ ಸಾರ್ವಜನಿಕರು ವಾಹನ ನಿಲುಗಡೆ ಮಾಡಿ ತೆರಳುತ್ತಾರೆ, ನಮ್ಮಲ್ಲಿ ಕಾವಲುಗಾರ ಸಿಬ್ಬಂದಿ ಇಲ್ಲದಿರುವುದರಿಂದ ಸಮಸ್ಯೆ ಎದುರಾಗಿದ್ದು ಆಸ್ಪತ್ರೆ ಆವರಣಕ್ಕೆ ಬರುವ ಸಾರ್ವಜನಿಕ ವಾಹನಗಳನ್ನ ತಡೆಗಟ್ಟಲಾಗುತ್ತಿಲ್ಲ. ಸಿಬ್ಬಂದಿ ನೇಮಿಸುವ ಬಗ್ಗೆ ಈಗಾಗಲೆ ಪತ್ರ ಬರೆದಿದ್ದು ಸರ್ಕಾರ ಸಿಬ್ಬಂದಿ ನಿಯೋಜನೆ ಮಾಡಿದರೆ ಸಮಸ್ಯೆಯನ್ನ ಸಂಪೂರ್ಣ ಬಗೆಹರಿಸಲಾಗುವು. ಅಲ್ಲದೆ ತಕ್ಷಣದಿಂದ ಸಮಸ್ಯೆಗೆ ತಾತ್ಕಲಿಕ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು.

ಒಟ್ಟಾರೆ ಆಸ್ಪತ್ರೆ ಆವರಣದಲ್ಲಿನ ನಿತ್ಯ ಅವೈಜ್ಞಾನಿಕ ಪಾರ್ಕಿಂಗ್‌ನಿಂದ ಆಂಬುಲೆನ್ಸ್‌ ಸವಾರರು ಹಾಗೂ ಇತರೆ ರೋಗಿಗಳು ಸೇರಿಂದ ಆಸ್ಪತ್ರೆ ಸಿಬ್ಬಂದಿಗಳಿಗೂ ಸಮಸ್ಯೆ ಎದುರಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗರಹರಿಸಬೇಕಿದೆ.

Related posts

Leave a Comment