ಪ್ರೇಮ ವಿವಾಹಕ್ಕೆ ಪೋಷಕರ ಅಡ್ಡಿ: ಪೊಲೀಸರ ಜೊತೆ ಪೋಷಕರ ವಾಗ್ವಾದ: ಮುಂದೇನಾಯ್ತು ನೋಡಿ

ಚಿಕ್ಕಬಳ್ಳಾಪುರ : ಪ್ರೇಮಿಗಳ ಅಂತರ್ಜಾತಿ ಪ್ರೀತಿಗೆ ಪೋಷಕರಿಂದಲೇ ವಿರೋಧ ವ್ಯಕ್ತಪಡಿಸಿ ಪೊಲೀಸ್ ಠಾಣೆ ಎದುರೇ ಹೈಡ್ರಾಮಾ ನಡೆದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪೊಲೀಸ್ ಠಾಣೆ ಎದುರು ನಡೆದಿದೆ. ಹೌದು ಚಿಕ್ಕಬಳ್ಳಾಪುರ ತಾಲ್ಲೂಕಿನ ಕಾಮಶೆಟ್ಟಿಹಳ್ಳಿಯ ಕೆ ಎಂ ಮಧುಸೂದನ್ ಹಾಗೂ ಗುಡಿಬಂಡೆ ತಾಲೂಕಿನ ಜಂಬಿಗೇಮರದ ಹಳ್ಳಿಯ ಜೆ ಎಸ್ . ಭಾನುಶ್ರೀ ಜೋಡಿ ಚಿಕ್ಕಬಳ್ಳಾಪುರ ನಗರದ ಮಹೇಶ್ವರಿ ಡಿಗ್ರಿ ಕಾಲೇಜಿನಲ್ಲಿ ಬಿಕಾಂ ಓದುತ್ತಿರುವ ವೇಳೆ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದಾರೆ.

ಪೊಲೀಸ್‌ ಠಾಣೆ ಬಳಿ ನಿಂತಿರುವ ಯುವತಿಯ ಪೋಷಕರು

ಆದರೆ ಅನ್ಯ ಕೋಮಿನ ಯುವಕನ ಜೊತೆಗಿನ ಪ್ರೀತಿ ಹಾಗೂ ಮಧುವೆಗೆ ಯುವತಿಯ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ಗುಡಿಬಂಡೆ ಪೊಲೀಸ್ ಠಾಣೆ ಎದುರೇ ಕೂಗಾಟ ರಂಪಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಪೊಲೀಸರ ಮೇಲೆಯೇ ವಾಗ್ವಾದಕ್ಕಿಳಿದಿದು ಯುವತಿಯನ್ನ ತಮ್ಮೊಂದಿಗೆ ಕಳಿಸುವಂತೆ ಒತ್ತಾಯಿಸಿದರು. ಈ ವೇಳೆ ಪೊಲೀಸರು ಯುವತಿಯ ಹೇಳಿಕೆಯನ್ನು ಪಡೆದ ವೇಳೆ ಪ್ರೀತಿಸಿದ ಯುವಕನೊಂದಿಗೆ ಹೋಗುವುದಾಗಿ ಯುವತಿ ಹೇಳಿಕೆ ಪಡೆದ ನಂತರ ಪೊಲೀಸರು ಎಷ್ಟೇ ವಿರೋಧ ವ್ಯಕ್ತವಾದರೂ ಯುವಕನೊಂದಿಗೆ ಹೋಗಲು ಪೊಲೀಸ್ ಬಂದೋಬಸ್ತ್ ನಲ್ಲಿ ಕಳಿಸಿಕೊಟ್ಟು ಪ್ರೇಮಿಗಳ ಪ್ರೀತಿಗೆ ಸಾಥ್ ನೀಡಿದರು.

Related posts

Leave a Comment