Nelamangala: ಎರಡು ಬೈಕ್‌ಗಳ ನಡುವೆ ಭಿಕರ ಅಪಘಾತ, ಓರ್ವ ಸಾವು ಇಬ್ಬರು ಪಾರಾಗಿದ್ದೆ ಅಚ್ಚರಿ

ನೆಲಮಂಗಲ: ಎರಡು ಬೈಕ್ ಗಳ ನಡುವೆ ಮುಖಾ ಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೊಂದು ಬೈಕ್‌ನಲ್ಲಿದ್ದ ಇಬ್ಬರು ಸವಾರರಿಗೆ ಗಂಭೀರ ಗಾಯಗಳಾಗಿ ಆಸ್ಪತ್ರಗೆ ದಾಖಲಾಗಿದ್ದಾರೆ. ಮಧುಗಿರಿ ಮೂಲದ ನರಸಿಂಹರಾಜು (24) ಮೃತ ಬೈಕ್ ಸವಾರ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಕೆಂಗಲ್ ಕೆಂಪೋಹಳ್ಳಿ ಬಳಿ ಘಟನೆ ನಡೆಇದದ್ದು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕೆಲ ಕಾಲ ಟ್ರಾಫಿಕ್‌ ಜಾಂ ಉಂಟಾಗುತ್ತು.

ಮತ್ತೊಂದು ಬೈಕ್ ಸಚಾರ ಶಿವಪ್ರಸಾದ್ ಹಾಗೂ ಮತ್ತೋರ್ವನಿಗೆ ಗಂಭೀರ ಗಾಯ ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ, ಘಟಮೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Related posts

Leave a Comment