ಹಸೆಮಣೆ ಏರಬೇಕಿದ್ದ ವರ ಫಿನೀಶ್: ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ

ಹುಬ್ಬಳ್ಳಿ (ಜೂ 6): ಹುಬ್ಬಳ್ಳಿಯ ಕಲಘಟಗಿಯಲ್ಲಿ ಹಸಮಣೆ ಏರಬೇಕಿದ್ದ ವರ ಕೊಲೆಯಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕೇವಲ ಎರಡೇ ದಿನದಲ್ಲಿ ಕಲಘಟಗಿ ಪೊಲೀಸರು ಪ್ರಕರಣ ಭೇದಿಸಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣ: ಹುಬ್ಬಳ್ಳಿಯ ಕಲಘಟಗಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಕಲಘಟಗಿ ತಾಲೂಕಿನ ಜಿನ್ನೂರು ಗ್ರಾಮದ ಹೊಲದಲ್ಲಿನ ದಬದ ಶೆಡ್‌ನಲ್ಲಿ ಇದೇ ಗ್ರಾಮದ 33 ವರ್ಷದ ನಿಂಗಪ್ಪ ನವಲೂರ ಎನ್ನುವ ಯುವಕನ ಕೊಲೆ ನಡೆದಿದ್ದು, ಕಣ್ಣಿಗೆ ಕಾರದ ಪುಡಿ ಎರಡಿ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿತ್ತು.

ಎರಡು ದಿನದಲ್ಲಿ ಆರೋಪಿಗಳು ಪತ್ತೆ: ಮೃತ ಯುವಕ‌ ನಿಂಗಪ್ಪ ನವಲೂರ ಜೂನ್ 7 ರಂದು ಹಸೆಮಣೆ ಏರಬೇಕಿತ್ತು, ಆದ್ರೆ ವಿಧಿ ಅವನ ಬಾಳಲ್ಲಿ ಆಟ ಆಡ್ತು. ಹಸಮಣೆ ಏರಬೇಕಿದ್ದ ನವ ಯುವಕ ಸ್ನಶಾಣ ಸೇರಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಕಲಘಟಗಿ ಪೊಲೀಸರು ಕೇವಲ ಎರಡೇ ದಿನದಲ್ಲಿ ಆರೋಪಿಗಳನ್ನ ಸೆದೆ ಬಡಿದಿದ್ದಾರೆ.

ಅನೈತಿಕ ಸಂಬಂಧ: ಮದುವೆಯಾಗಿ ಸಂಸಾರ ನಡೆಸಬೇಕಿದ್ದ ನಿಂಗಪ್ಪ ನವಲೂರ ಅರೊಪಿ ಮುತ್ತಪ್ಪಳ ಪತ್ನಿಯಿಂದಿಗೆ ಅನೈತಿಕ ಸಂಬಂಧವನ್ನ ಗಟ್ಟಿಗೊಳಿಸಿಕೊಂಡಿದ್ದನಂತೆ, ಇದೇ ವಿಚಾರವಾಗಿ ಆರೋಪಿ ತನ್ನ ಪತ್ನಿಗೆ ಸಾಕಷ್ಟು ಭಾರಿ ಬುದ್ದಿ ಹೇಳಿದರು ಕೇಳಿರಲಿಲ್ಲವ್ವಂತೆ, ಇವರಿಬ್ಬರ ಒಡನಾಟ ಹೆಚ್ಚಾದ ವಿಚಾರ ತಿಳಿದ ಆರೋಪಿ ಮುತ್ತಪ್ಪ ಹುಲ್ಲೋಳಿ ಹಾಗೂ ಆತನ ಸಹೋದರ ವೀರಭದ್ರ ಜಾಲಿಹಾಳ ಇಬ್ಬರು ಸೇರಿಸಿ ನಿಂಗಪ್ಪ ನವಲೂರನನ್ನ ಕೊಲೆಗೈದಿದ್ದಾರೆ.‌

ಹೆಚ್ಚಿನ ತನಿಖೆ: ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಘಟಗಿ ಇನ್ಸ್‌ಪೆಕ್ಟರ್ ಶ್ರೀಶೈಲ ಕೌಜಲಗಿ ನೇತೃತ್ವದ ತಂಡದಿಂದ ಆರೋಪಿಗಳ ಬಂಧನವಾಗಿದ್ದು, ಪ್ರಾಥಮಿಕ ಮಾಹಿತಿಯ ಪ್ರಕಾರ ಇದೊಂದು ಅನೈತಿಕ ಸಂಬಂಧದಿಂದ ನಡೆದಿರುವ ಕೊಲೆ ಎನ್ನಲಾಗುತ್ತಿದ್ದು ಮತ್ತಷ್ಟು ತನಿಖೆಯಿಂದಷ್ಟೆ ಪ್ರಕರಣದ ಸತ್ಯಾಸತ್ಯೆತೆ ತಿಳಿದು ಬರಬೇಕಿದೆ.‌

Related posts

Leave a Comment