ಪ್ರತಿಯೊಬ್ಬ ನಾಗರೀಕರು ಭಾಷಾಭಿಮಾನವನ್ನು ಬೆಳೆಸಿಕೊಂಡಾಗ ಮಾತ್ರ ಭಾಷೆ ಮತ್ತಷ್ಟು ಉಳಿಯಲು ಸಾಧ್ಯ: ಮಣ್ಣೆಮೋಹನ್

ನೆಲಮಂಗಲ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ಸಾಹಿತ್ಯ ಪರಿಷತ್‌ನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರವನ್ನು ಉದ್ಧೇಶಿಸಿ ಮಾತನಾಡಿದರು.

ಕನ್ನಡ ಭಾಷೆ ವಿಶ್ವಮಟ್ಟದಲ್ಲಿ ವಿಶೇಷ ಸ್ಥಾನಮಾನವನ್ನು ಪಡೆದುಕೊಂಡಿದ್ದು ಅದಾ ಗೌರವ ಪೂರಕವಾಗಿ ಕನ್ನಡ ಸಾಹಿತ್ಯ ಪರಿಷತ್ ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಬ್ಬರು ಭಾಷಾಭಿಮಾನವನ್ನು ಬೆಳೆಸಿಕೊಂಡಾಗ ಮಾತ್ರ ಭಾಷೆ ಮತ್ತಷ್ಟು ಪ್ರಭಲಗೊಳ್ಳಲು ಸಾಧ್ಯವಾಗಿದೆ. ನೆರೆಹೊರೆ ರಾಜ್ಯದಲ್ಲಿ ಭಾಷಾಭಿಮಾನ ಹೆಚ್ಚಾಗಿದ್ದು ನಮ್ಮ ರಾಜ್ಯ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬೇಕು. ರಾಜ್ಯದ ನಗರದ ಪ್ರದೇಶದಲ್ಲಿ ಕನ್ನಡ ಭಾಷೆಯನ್ನು ಬಳಕೆ ಮಾಡುವ ಜನ ಕಡಿಮೆ ಇದ್ದಾರೆ. ಸಮಾಜದ ಅಭಿವೃದ್ಧಿ ಸೇರಿದಂತೆ ಕನ್ನಡ ಅಭಿವೃದ್ಧಿ ಪ್ರತಿಯೊಬ್ಬರು ಶ್ರಮಿಸಬೇಕಿದೆ. ಸಾಹಿತ್ಯ ಪರಿಷತ್ ಸಂಸ್ಥಾಪಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಲೋಚನೆ ಪ್ರತಿಯೊಬ್ಬ ಅರ್ಥ ಮಾಡಿಕೊಳ್ಳಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ ರಾಜ್ಯಪ್ರತಿನಿಧಿ ಡಾ.ಎಲ್.ಕೃಷ್ಣಮೂರ್ತಿ ಮಾತನಾಡಿ ಭಾಷೆಗೆ ಯಾವುದೇ ಜಾತಿ ತರತಮ್ಯ ವಿಲ್ಲ. ಪ್ರತಿಯೊಬ್ಬರು ಭಾವನೆಯನ್ನು ವ್ಯಕ್ತ ಪಡಿಸುವ ಸಾಧನೆವಾಗಿ ಭಾಷೆ ಕರ್ತವ್ಯನಿರ್ವಹಿಸುತ್ತಿದೆ. ಸಾಹಿತ್ಯ ಎಂಬುದು ಮನುಷ್ಯನ ಜೀವನದ ಪ್ರತಿಬಿಂಬವಾಗಿ ಮಾರ್ಪಟ್ಟಿದೆ. ರಾಜ್ಯದಲ್ಲಿ ಜನತೆ ಹೊರ ರಾಜ್ಯದ ಜನರಿಗೆ ವ್ಯವಹಾರದ ಜತೆಗೆ ಕನ್ನಡ ಕಲಿಯೋ ಕಲಿಸುವ ಕೆಲಸ ಮಾಡಬೇಕಿದೆ. ಮಧ್ಯಮ ಶೈಕ್ಷಣಿಕ ಸ್ಥಿತಿಯಲ್ಲಿ ವ್ಯಕ್ತಿಗಳು ಮಾತ್ರ ಕನ್ನಡವನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡಿದ್ದಾರೆ. ಸಾಹಿತ್ಯ ಮನಸುಗಳನ್ನ ಹೆಚ್ಚಿಸುವ ಕಾರ್ಯ ಸಾಹಿತ್ಯ ಪರಿಷತ್ ಮುಂದಿನ ದಿನಗಳಲ್ಲಿ ಮಾಡಬೇಕಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪ್ರಕಾಶ್‌ಮೂರ್ತಿ ಮಾತನಾಡಿ ಕನ್ನಡ ಭಾಷೆ, ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯ ಮಹತ್ವವಾದದ್ದು. ತಾಲೂಕಿನಲ್ಲಿ ಸಾಕಷ್ಟು ಮಂದಿ ಸಾಹಿತಿಗಳು ಪುಸ್ತಕ ಬರೆದಿದ್ದು ಪುಸ್ತಕ ಪ್ರಕಟಿಸುವಷ್ಟು ಅಸಹಾಯಕರಾಗಿದ್ದಾರೆ. ಅದ್ದರಿಂದ ಕೇಂದ್ರ ಘಟಕದಿಂದ ತಾಲೂಕಿನಲ್ಲಿ ಪ್ರತಿ ವರ್ಷಕ್ಕೆ ಇಬ್ಬರಿಗೆ ಉಚಿತ ಪುಸ್ತಕವನ್ನು ಪ್ರಕಟಿಸುವ ಕಾರ್ಯ ಮಾಡಬೇಕು. ಜತೆಗೆ ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಸರ್ಕಾರದಿಂದ ನಿವೇಶನ ಕೊಡಿಸಿ ಕಚೇರಿ ನಿರ್ಮಾಣ ಮಾಡಲು ಅವಕಾಶ ಮಾಡಿದಲ್ಲಿ ಸಾಕಷ್ಟು ಅನುಕೂಲವಾಗುತ್ತದೆಂದು ಮನವಿ ಮಾಡಿದರು.

ನೆಲಮಂಗಲದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ಸಾಹಿತ್ಯ ಪರಿಷತ್‌ನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದ ಸಾಧಕರನ್ನು ಗುರುತಿಸಿ ಅಭಿನಂದಿಸಲಾಯಿತು. ರಾಜ್ಯಪ್ರತಿನಿಧಿ ಡಾ.ಎಲ್.ಕೃಷ್ಣಮೂರ್ತಿ, ಸಾಹಿತಿ ಮಣ್ಣೆಮೋಹನ್ ಮತ್ತಿತರರು ಇದ್ದರು.

ಸಾಧಕರಿಗೆ ಸನ್ಮಾನ ಹಾಗೂ ಉಪನ್ಯಾಸ: ಸಾಹಿತ್ಯ ಪರಿಷತ್‌ನ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ವೈದ್ಯ ಡಾ.ಹಿರೇಗೌಡ, ನಿವೃತ್ತ ಸರ್ಕಾರಿ ನೌಕರರ ಹೆಚ್.ನರಸಿಂಹಯ್ಯ, ಸಾವಯವ ಕೃಷಿಕ ಕೆರೆಕತ್ತಿಗನೂರುಗಂಗಣ್ಣ, ರಂಗಭೂಮಿ ಕಲಾವಿದ ಬೂದಿಹಾಲ್‌ಕಿಟ್ಟಿ, ಹರಿಕಥೆ ವಿದ್ವಾನಗ ಗೊಲ್ಲರಹಟ್ಟಿಚಿಕ್ಕಮಾಳಯ್ಯ, ಜಾನಪದ ಕಲಾವಿದೆ ಮುನಿಲಕ್ಷö್ಮಮ್ಮ, ಪೌರ ಕಾರ್ಮಿಕರು ಶಿವಮ್ಮ, ಶವ ಪರೀಕ್ಷಕ ಸದಾಶಿವಯ್ಯ ಸೇರಿದಂತೆ ಶಿಕ್ಷಕ ಪ್ರಕಾಶ್ ಅವರನ್ನು ವೇಧಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಜತೆಗೆ ಶ್ರೀ ಸಿದ್ದಗಂಗಾ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಪಕಿ ಆರ್.ವನಜಾಕ್ಷಿ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ಹಾದಿ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು.

ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಪ್ರತಿನಿಧಿ ರಾಮಕೃಷ್ಣಪ್ಪ, ತಾಲೂಕು ಗೌರವ ಕಾರ್ಯದರ್ಶಿ ಸದಾನಂದಾರಾಧ್ಯ, ಭಾನುಪ್ರಕಾಶ್, ಕೋಶಾದ್ಯಕ್ಷ ಎಂ.ನಾರಾಯಣ್‌ಗೌಡ, ನಿಕಟಪೂರ್ವ ಅಧ್ಯಕ್ಷ ಪ್ರದೀಪ್‌ಕುಮಾರ್, ನಗರ ಅಧ್ಯಕ್ಷ ಮಲ್ಲೇಶ್, ತಾಲೂಕು ಕಲಾವಿದ ಬಳಗದ ಅಧ್ಯಕ್ಷ ಡಾ.ಜಿ.ಗಂಗರಾಜು, ವಕೀಲ ಡಾ.ಜಿ.ಎನ್.ಕನಕರಾಜು, ಸಾಹಿತಿ ಡಾ.ಶಿವಲಿಂಗಯ್ಯ, ಎನ್.ಆರ್.ನಾಗರಾಜು, ಕಲಾವಿದ ಚಿಕ್ಕಮಾರನಹಳ್ಳಿದಿನೇಶ್, ದೊಡ್ಡರಾಮಯ್ಯ, ಆರ್.ಜೀವನ್, ಮನು, ಮತ್ತಿತರರು ಉಪಸ್ಥಿತರಿದರು.

ನೆಲಮಂಗಲದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ಸಾಹಿತ್ಯ ಪರಿಷತ್‌ನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದ ಸಾಧಕರನ್ನು ಗುರುತಿಸಿ ಅಭಿನಂದಿಸಲಾಯಿತು. ರಾಜ್ಯಪ್ರತಿನಿಧಿ ಡಾ.ಎಲ್.ಕೃಷ್ಣಮೂರ್ತಿ, ಸಾಹಿತಿ ಮಣ್ಣೆಮೋಹನ್ ಮತ್ತಿತರರು ಇದ್ದರು.

Related posts

Leave a Comment