ತಂದೆಯನ್ನೇ ಕೊಲೆ ಮಾಡಿದ ಮಗ: ಕಾರಣ ಕೇಳಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ

ಆತ ಬಿಎಂಟಿಸಿಯಲ್ಲಿ ನಿವೃತ್ತ ನೌಕರ, ನಿವೃತ್ತಿ ದಿನದ ವರೆಗೂ ತನ್ನ ಕುಟುಂಬಕ್ಕಾಗಿ ಗಾಣದೆತ್ತಿನಂತೆ ದುಡಿದು ಮನೆ ಕಟ್ಟಿದ್ದ, ನಿವೃತ್ತಿ ನಂತರವೂ ಸ್ವಾಭಿಮಾನದಿಂದ ಆಟೋ ಓಡಿಸಲು ಮುಂದಾಗಿದ್ದ, ಆದ್ರೆ ಆತನ ಬದುಕಲ್ಲಿ ಮಗ ವಿಲನ್ ಆಗಿದ್ದು, ತಂದೆಯನ್ನ ಕೊಲೆ ಮಾಡಿ ಮುಗಿಸಿಬಿಟ್ಟಿದ್ದಾನೆ.

ಬೆಂಗಳೂರು ಉತ್ತರ ತಾಲೂಕು ಮಾದನಾಯಕನಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯ ವಡ್ಡರಹಳ್ಳಿ ನಿವಾಸಿ ಕೃಷ್ಣಮೂರ್ತಿ (63) ಹಣದ ವಿಚಾರದಲ್ಲಿ ತನ್ನ ಮಗ ಅರ್ಜುನ್ ಜತೆ ಜಗಳವಾಡಿ ಮಗ ಹೊಡೆದ ಏಟಿಗೆ ಉಸಿರುಚೆಲ್ಲಿದ್ದಾನೆ.

ಬಿಎಂಟಿಸಿ ನಿವೃತ್ತ ನೌಕರ ಕೃಷ್ಣಮೂರ್ತಿ ತನ್ನ ಸ್ವಂತ ಮಗ ಅರ್ಜುನ್‌ನಿಂದ ಕೊಲೆಯಾಗಿ ಹೋಗಿದ್ದಾನೆ. ಹೌದು ಮೃತ ಕೃಷ್ಣಮೂರ್ತಿ ಬಿಎಂಟಿಸಿಯಲ್ಲಿ ಹಿರಿಯ ಹುದ್ದೆಯಿಂದ ನಿವೃತ್ತಿ ಹೊಂದಿದ್ದರು.  ನಿವೃತ್ತಿ ವೇಳೆ ಬಂದ ಹಣದಲ್ಲಿ ವಡ್ಡರಹಳ್ಳಿಯಲ್ಲಿ ಸೈಟ್ ಖರೀದಿ ಮಾಡಿದ್ದಾನೆ. ಮನೆ ಕಟ್ಟಲು ಶುರು ಮಾಡಿದಾಗ ಹಣಕಾಸಿನ ತೊಂದರೆ ಉಂಟಾಗಿದೆ ಈ ವೇಳೆ ಹಣ ಹೊಂದಿಸುವಂತೆ ಮನನಿಗೆ ತಿಳಿಸಿದ್ದಾನೆ. ಹೇಗೂ ಅಪ್ಪ ಕಟ್ಟುವ ಮನೆ ನಮದೆ ಅಲ್ವ ಅಂತಾ ಅರ್ಜುನ್ ಸಹ ಸಂಬಂಧಿಕರಲ್ಲಿ ಸಾಲ ಮಾಡಿ ಅಪ್ಪನಿಗೆ 15 ಲಕ್ಷ ಹಣ ಕೊಟ್ಟಿದ್ದನಂತೆ.‌

ತನ್ನ ಒಬ್ಬನೇ ಮಗ ಚೆನ್ನಾಗಿ ಓದಬೇಕು, ಒಳ್ಳೆ ಕೆಲಸ ಸೇರಿ ಸೆಟಲ್ ಆಗಬೇಕು ಎಂದು ತಂದೆ ತನ್ನ ನೀವನವನ್ನ ಸವೆಸಿ ಮಗನಿಗೆ ಎಂಟೆಕ್ ಮಾಡಿಸಿ ಒಳ್ಳೆ ಉದ್ಯೋಗ ಸಹ ಕೊಡಿಸಿದ್ದ, ನೆರೆ ರಾಜ್ಯ ಕೇರಳದಲ್ಲಿ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನಂತೆ ಅರ್ಜುನ್, ಇತ್ತೀಚೆಗೆ ಮಾನಸಿಕ ಒತ್ತಡಕ್ಕೆ ಸಿಲುಕಿದ್ದ ಅರ್ಜುನ್ ಕಳೆದ ಆರು ತಿಂಗಳಿನಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದನಂತೆ. ಆದ್ರೆ ಮಗ ಮನೆಯಲ್ಲಿ ಇರೋ ವಿಚಾರ ಅಕ್ಕಪಕ್ಕದ ಜನರಿಗೆ ಗೊತ್ತಿರಲಿಲ್ಲವಂತೆ.

ಇತ್ತ ಕೃಷ್ಣಮೂರ್ತಿ ನಿವೃತ್ತಿ ಜೀವನವನ್ನು ವಿಶ್ರಾಂತಿ ಪಡೆದು ಅನುಭವಿಸಲು ಇಚ್ಚಿಸಿರಲಿಲ್ಲ, ನಿವೃತ್ತಿಯ ನಂತರ ಮನೆ ನಿರ್ಮಾಣ ಸಹ ಪೂರ್ಣಗೊಂಡ ಬಳಿಕ ಒಂದು ವಿಧ್ಯುತ್ ಚಾಲಿತ ಆಟೋ ತೆಗೆದುಕೊಂಡು ಪ್ರತಿದಿನ ಆಟೋ ಓಡಿಸುತ್ತಿದ್ದರಂತೆ. ಹೇಗೋ ಖುಷಿಯ ಜೀವನ ನಡೆಸುತ್ತಿದ್ದರಂತೆ, ಅಕ್ಕಪಕ್ಕದ ಜನರೊಂದಿಗೆ ಬಹಳ‌ ಆತ್ಮೀಯತೆ ವಿಶ್ವಾಸದಿಂದ ಇರುತ್ತಿದ್ದರಂತೆ.

ಮೃತ ಕೃಷ್ಣಮೂರ್ತಿ ನಿರ್ಮಾಣ ಮಾಡಿದ್ದ ಮನೆಯಲ್ಲಿ ಮೂರು ಅಂಗಡಿ ಮಳಿಗೆಗಳು ಸಹ ಇದ್ದವು, ಇದರಲ್ಲಿ ಒಂದು ಅಂಗಡಿ ಮಳಿಗೆ ಬಾಡಿಗೆಗೆ ನೀಡಿದ್ದಾರೆ. ಈ ಅಂಗಡಿಯ ಬಾಡಿಗೆ ವಿಚಾರದಲ್ಲಿ ಆದ ಜಗಳದಿಂದ ಈ ಸಾವು ಸಂಭವಿಸಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ ಎನ್ನಲಾಅಗುತ್ತುದೆ.

ಕಳೆದ ಒಂದು ವಾರದ ಹಿಂದೆಯಷ್ಟೆ ತಂದೆ ಮಗನ ನಡುವೆ ಜಗಳವಾಗಿತ್ತಂತೆ. ಈಗ ಮತ್ತೊಮ್ಮೆ ಜಗಳವಾಗಿದೆ. ತಮ್ಮ ಕಟ್ಟಡದ ಬಾಡಿಗೆ ಹಣವನ್ನ ತಂದೆ ಸಾಲ ಮರುಪಾವತಿ ಮಾಡಲು ಕೊಡುತ್ತಿಲ್ಲ ಎನ್ನುವ ವಿಚಾರಕ್ಕೆ ಜಗಳ ಆರಂಭವಾಗಿದೆ. ಈ ವೇಳೆ ಅರ್ಜುನ್ ತನ್ನ ತಂದೆ ಕಷ್ಣಮೂರ್ತಿಗೆ ಬಲವಾಗಿ ಹೊಡೆದಿದ್ದು ಕೃಷ್ಣಮೂರ್ತಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

ಈ ವೇಳೆ ಕೃಷ್ಣಮೂರ್ತಿ ಹೆಂಡತಿ ಇಂದಿರಮ್ಮ ಆಂಬುಲೆನ್ಸ್‌ ಕರೆಸಿ ಕೃಷ್ಣಮೂರ್ತಿಯನ್ನ ಆಸ್ಪತ್ರೆಗೆ ಸಾಗಿಸಿದ್ದು, ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ರಕ್ತವನ್ನ ಹೊರೆಸಿ ಸಾಕ್ಷ ನಾಶ ಮಾಡಿದ್ದಾರೆ. ಸದ್ಯ ಆರೋಪಿಯನ್ನ ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದು ಪೊಲೀಸ್ ಠಾಣೆಯಲ್ಲಿ  ಹುಚ್ಚನಂತೆ ವರ್ತಿಸುತ್ತಿದ್ದಾನಂತೆ ಆರೋಪಿ ಅರ್ಜುನ್

ಸದ್ಯ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನ ವಶಕ್ಕೆ ಪಡೆದಿರುವ ಮಾದನಾಯಕನಹಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಅದೇನೆ ಆಗ್ಲಿ ಸಣ್ಣ ಸಣ್ಣ ವಿಚಾರಗಳಿಗೆ ಮಗನೇ ತಂದೆಯನ್ನ ಕೊಲ್ಲುವುದು ಶೋಚನೀಯ ಸಂಗತಿ, ಇಂತಹ ಘಟನೆಗಳು ಮರುಕಳಿಸದಿರಲಿ ಎನ್ನುವುದು ನಮ್ಮ ಆಶಯ

Related posts

Leave a Comment