ಮಗನಿಗೆ ಬೆಂಕಿ ಹಚ್ಚಿ ಕೊಂದ ತಾಯಿ, ಕೊಲೆಗೆ ನಡೆದದ್ದು ಹೇಗೆ? ಕೊಲೆಗೆ ಕಾರಣ ಏನು?

ಬೆಂಗಳೂರು: ಆತ ಕುಡಿತದ ದಾಸನಾಗಿದ್ದ, ಕುಡಿದ ಅಮಲಿನಲ್ಲಿ ರಸ್ತೆ ಚರಂಡಿ ಖಾಲಿ ನಿವೇಶನ ಎಲ್ಲೆಂದರಲ್ಲಿ ಬಿದ್ದು ಹೊರಳಾಡುತ್ತಿದ್ದ, ಇದನ್ನೆ ಕೇಳಿ ನೋಡಿ ಸರಿಮಾಡಿ ತಾಯಿಗೆ ಬೇಸತ್ತು ಹೋಗಿತ್ತು, ಇವತ್ತು ಮಗನ್ನ ಎದುರಿಸಸಲು ಹೋಗಿ ತಾಯಿ ಇಟ್ಟು ಬೆಂಕಿಗೆ ಮಗ ಆಹುತಿಯಾಗಿಬಿಟ್ಟ

ಸೂಫಿಯಾ ಬಿ ತನ್ನ ಮಗ ಚಾಂದ್ ಪಾಷನನ್ನ ಹೆದರಿಸಲು ಹೋಗಿ ಬೆಂಕಿಯೆ ಕೆನ್ನಾಲಿಗೆಗೆ ಮಗ ಚಾಂದ್ ಪಾಷ ಸುಟ್ಟು ಕರಕಲಾಗಿದ್ದಾನೆ. ಈ ಘಟನೆ ನಡೆದಿರೋದು ಬೆಂಗಳೂರು ಉತ್ತರ ತಾಲೂಕು ಸೋಲದೇವನಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯ ಚಿಕ್ಕಬಾಣವಾರ ಗ್ರಾಮದಲ್ಲಿ.

ಹೌದು ಎಷ್ಟೇ ಆಗಲಿ ಹೆತ್ತವರಿಗೆ ಹೆಗಣವೇ ಮುದ್ದು ಅನ್ನೊಂಗೆ ಈ ಮೃತ ಮಗನ ತನ್ನ ತಾಯಿ ಆರೋಪಿ ಸೂಫಿಯಾ ಭಿ ಗೆ ಎಲ್ಲಿಲ್ಲದ ಪ್ರೀತಿ. ಕುಡಿತದ ದಾಸನಾಗಿದ್ದ ಚಾಂದ್ ಪಾಷ ಕಳೆದ ಹತ್ತು ವರ್ಷಗಳ ಹಿಂದೆಯೇ ತನ್ನ ಹೆಂಡತಿಯನ್ನ ತೊರೆದು ಬಂದು ತಾಯಿ ಜೊತೆ ಸೇರಿಕೊಂಡಿದ. ನಿತ್ಯ ಕುಡಿಯುವುದನ್ನ ಅಭ್ಯಾಸ ಮಾಡಿಕೊಂಡಿದ ಈತ ಕುಡಿದು ಅಲ್ಲಿ ಇಲ್ಲಿ ಬೀಳುತ್ತಿದ್ದನಂತೆ, ಇದನ್ನ ಕಂಡ ಜನರು ಸೂಫಿಯಾ ಭೀ. ಗೆ ವಿಚಾರ ತಿಳಿಸಿದ ಬಳಿಕ ಎಷ್ಟೆ ಆಗ್ಲಿ ತಾಯಿ ಕರುಳು ಹೋಗಿ ಅವನನ್ನ ಮನೆಗೆ ಕರೆ ತರುತಿದ್ದಳಂತೆ.

ಅಷ್ಟೆ ಅಲ್ಲ ಅದೆಷ್ಟೋ ಭಾರಿ ಬೈದು ಬುದ್ದಿ ಹೇಳಿದ್ದಳಂತೆ. ಒಂದೊತ್ತಿನ ಊಟಕ್ಕೂ ಸಮಸ್ಯೆ ಇರುವಾಗ ಮಗನನ್ನೂ ಸಾಕಿಕೊಂಡು ತಾಯಿ ಕಾಲ ಕಳೆಯುತ್ತಿದ್ದಾಗ ಮಗನ ಕುಡಿತ ಜಾಸ್ತಿಯಾಯಿತಂತೆ. ಹೇಗಾದ್ರು ಮಾಡಿ ಕುಡಿತ ಬಿಡಿಸಬೇಕು ಎಂದು ಇಂದು ಹೆದರಿಸಲು ಸೀಮೆ ಎಣ್ಣೆ ಸುರಿದ ಬೆಂಕಿ ಹಚ್ಚುವ ನಾಟಕ ಆಡುವ ವೇಳೆ ಬೆಂಕಿ ಹೊತ್ತಿಕೊಂಡು ಚಾಂದ್ ಪಾಷ್ ಧಗಧಗಿಸಿ ಹೋಗಿದ್ದಾನೆ.

ಸದ್ಯ ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಸೂಫಿಯಾಳನ್ನ ವಶಕ್ಕೆ ಪಡೆದು ತನಿಖೆಗೆ ಮುಂದಾಗಿದ್ದಾರೆ.

Related posts

Leave a Comment