ಹಸಿರುವಳ್ಳಿ ಪಂಚಾಯ್ತಿಯಲ್ಲಿ ಜೆಡಿಎಸ್ ಪ್ರಾಬಲ್ಯ: 10 ಜನ ಕಾಂಗ್ರೆಸ್ ಬೆಂಬಲಿತರಿದ್ರು ಕೈ ತಪ್ಪಿದ್ದು ಹೇಗೆ?

ಸರ್ಕಾರದ ಸುತ್ತೋಲೆಯಂತೆ ಗ್ರಾಮ ಪಂಚಾಯ್ತಿಗಳಿಗೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆಯಿತು. ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿದ್ದ ಆಪರೇಷನ್, ಈಗ ಗ್ರಾಮ ಪಂಚಾಯ್ತಿಗೆ ಇಳೀದಿದೆ. ಇತ್ತ ಬೆಂಗಳೂರು ಗ್ರಾಮಾ ಜಿಲ್ಲೆ ನೆಲಮಂಗಲ ತಾಲೂಕಿನ ಹಸಿರುವಳ್ಳಿ ಗ್ರಾಮ ಪಂಚಾಯತಿಯಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲೂ ಹಸ್ತಕ್ಷೇಪ ಕೇಳಿಬಂದಿದೆ.

ಪಂಚಾಯ್ತಿಯಲ್ಲು ಕಳೆದ ಭಾರಿ ಕಾಂಗ್ರೆಸ್ ಬೆಂವಲಿತರು ಅಧಿಕಾರದ ಗದ್ದುದ್ಗೆ ಹಿಡಿದಿದ್ರು, 16 ಜನ ಸದಸ್ಯರಲ್ಲಿ 10 ಜನ ಕಾಂಗ್ರೆಸ್ ಬೆಂಬಲಿತರಿದ್ದು, ಮೊದಲ ಅವದಿಗೆ ಕಾಂಗ್ರೆಸ್ ಬೆಂಬಲಿತರೆ ಅಧಿಕಾರ ವಹಿಸಿಕೊಂಡಿದ್ದರು. ಆದ್ರೆ ಈಗ ಕಥೆ ಬೇರೆಯಾಗಿದೆ.‌.

ಕೈ ಬಿಟ್ಟು ತೆನೆ ಹೊತ್ತ ಸದಸ್ಯರು
ಶಾಸಕರ ಜೊತೆಯಲ್ಲಿ ಇದ್ದು ಎಸ್ಕೇಪ್

ತೆನೆ ಹೊರಿಸುವಲ್ಲಿ ಕೈ ಮುಖಂಡನ ಪಾತ್ರ

ಹೌದು ಎಂಗೋ ನಾವೆ ಅಧಿಕಾರಕ್ಕೆ ಬರೋದು ಅಂತ ಸುಮ್ಮದಿನ್ನ ಕಾಂಗ್ರೆಸಿಗರಿಗೆ ಪಂಚಾಯ್ತಿ ಸದಸ್ಯರು ಶಾಕ್ ನೀಡಿದ್ದಾರೆ. ವರದನಾಯಕನಹಳ್ಳಿ ವಾರ್ಡ್, ವಾದಕುಂಟೆ ವಾರ್ಡ್, ಬೈರನಾಯಕನಹಳ್ಳಿ ವಾರ್ಡ್, ಜಕ್ಕನಹಳ್ಳಿ ಸೇರಿದಂತೆ ನಾಲ್ಕು ಜನ ಕಾಂಗ್ರೆಸ್ ಬೆಂಬಲಿತರು ಕೈಕೊಟ್ಟು ತೆನೆ ಹೊತ್ತಿದ್ದಾರೆ.

ಶಾಸಕರ ಒಡನಾಟದಲ್ಲಿದ್ದ ಸದಸ್ಯ ರಾಜಮ್ಮ ಅಧ್ಯಕ್ಷ ಗಾದಿಯಾಸೆಗೆ ಕೈಬಿಟ್ಟು ತೆನೆ ಒತ್ತಿದ್ದಾರೆ. ಈ ಬೆಳವಣಿಗೆಗೆಯ ಹಿಂದೆ ಕಾಂಗ್ರೆಸ್ ಪಕ್ಷ ಮುಂಚೂಣಿ ನಾಯಕರೊಬ್ಬರ ಕೈವಾಡ ಸಹ ಕೇಳಿ ಬಂದಿದೆ.

ಒಟ್ಟಾರೆ ಉಂಡ ಮನೆಗೆ ದ್ರೋಹ ಬಗೆಯೋದು ಅನ್ನೋ ಮಾತಿಗೆ ಈ ಪ್ರಕರಣ ಒಂದು ನೈಜ್ಯ ಉದಾಹರಣೆ ಎಂದರೆ ತಪ್ಪಾಗಲಾರದು.. ಅಧಿಕಾರದ ಗದ್ದುಗೆಗೆ ಈ ರೀತಿ ಪಕ್ಷಾಟಣೆ ಮಾಡೋದು ಎಷ್ಟು ಸರಿ ಅನ್ನೋದು ಪ್ರಶ್ನೆ…

Related posts

Leave a Comment