ಮಾಜಿ ಪ್ರಿಯಕರನಿಂದ ಗೃಹಿಣಿ ಕೊಲೆ: 5 ವರ್ಷದ ಹೆಣ್ಣು ಮಗು ಎಸ್ಕೇಪ್!?

ದೊಡ್ಡಬಳ್ಳಾಪುರ: ಬಾಡಿಗೆ ಮನೆಯಲ್ಲಿ ರಕ್ತದ ಮಡುವಿನಲ್ಲಿ ಗೃಹಿಣಿಯೋರ್ವರ ಮೃತ ದೇಹ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕೋಳೂರು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

ಇದನ್ನೂ ಓದಿ: ಒಂದು ಸಣ್ಣ ತಪ್ಪು ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು. ಎಲ್ಲಿ? ಹೇಗೆ? ಕಾರಣ? ಯಾರು?

ಮೃತ ಮಹಿಳೆಯನ್ನು ಭಾರತಿ (27) ಎಂದು ಗುರುತಿಸಲಾಗಿದ್ದು, ಕೊಲೆಯಾದ ಬಳಿಕ ಸುಮಾರು 5 ವರ್ಷದ ಹೆಣ್ಣು ಮಗು ಸ್ಥಳದಿಂದ ಕಾಣೆಯಾಗಿದೆ ಎನ್ನಲಾಗುತ್ತಿದೆ. ಆದರೆ ಮೃತಳ ಪತಿ ಸ್ಥಳದಲ್ಲಿಯೇ ಇರುವ ಕಾರಣ ಏನಾಗಿರಬಹುದು ಎಂಬುದನ್ನೂ ಊಹಿಸುವುದು ಕಷ್ಟಸಹಜವಾಗಿದೆ.

ಇದನ್ನೂ ಓದಿ: ಭಾರಿ ಕಂದಕಕ್ಕೆ ಬಿದ್ದ ಲಾರಿ, ಪವಾಡ ಸದೃಶ ರೀತಿಯಲ್ಲಿ ಚಾಲಕ ಪಾರು

ಮೃತೆ ಭಾರತಿ ಈ ಹಿಂದೆ ಹರೀಶ್ ಎಂಬಾತನನ್ನು ಪ್ರೀತೊಸುತ್ತಿದ್ದ, ಮದುವೆಯ ಬಳಿಕ ದೂರ ಆಗಿದ್ದರು ಎನ್ನಲಗುತ್ತಿದೆ. ಇತ್ತೀಚೆಗೆ ಇವರಿಬ್ಬರು ಸಂಪರ್ಕಕ್ಕೆ ಬಂದಿದ್ದು ಈತನೆ  ಕೊಲೆ ಮಾಡಿ ಮಗುವನ್ನು ಅಪರಹಣ ಮಾಡಿರಬಹುದು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಶಂಕಿಸಲಾಗುತ್ತಿದೆ ಎಂದು ಮಾಹಿತಿ ತಿಳಿದುಬಂದಿದೆ. ಘಟನ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ  ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿನೀಡಿದ್ದು ತನಿಖೆ ಕೈಗೊಂಡಿದ್ದಾರೆ‌ .

Related posts

Leave a Comment