ವಿವಾಹ ವಾರ್ಷಿಕೋತ್ಸವದಂದು ಕೊಲೆ, ಶಿಷ್ಯನನ್ನೆ ಕೊಂದ ಗುರು

ಬೆಂಗಳೂರು: ಹೆಂಡತಿ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಳ್ಳಲು ತಮಿಳುನಾಡಿನಿಂದ ಬಂದು ಮನೆಯಲ್ಲಿ ಕಾಯುತ್ತಿದ್ದಳು, ರಾತ್ರಿಯಾದರು ಗಂಡ ಮನೆಗೆ ಬರಲೇ ಇಲ್ಲ, ಇಡೀ ರಾತ್ರಿ ಆಕೆ ಅರೆ ನಿದ್ರೆಯಲ್ಲಿ ಕೊರಗಿದರೆ ಇತ್ತ ಗಂಡೆ ಸ್ನೇಹಿತರು ಹಚ್ಚಿದ ಚಿತೆಯಲ್ಲಿ ಬೆಂದುಹೋಗಿದ್ದ.

ಜುಲೈ 2:  ಧಗಧಗಿಸಿ ಉರಿಯುತ್ತಿರುವ ಬೆಂಕಿ ವಿಚಾರ ತಿಳಿದು ಸ್ಥಳಕ್ಕೆ ದೌಡಯಿಸಿದ ಪೊಲೀಸರಿಗೆ ಟೆಂಷನ್ ಗ್ರಾಮಸ್ಥರಲ್ಲಿ ಆತಂಕ. ಬೆಂಕಿ ಸ್ವಲ್ಪ ಹತೋಟಿಗೆ ಬರುತ್ತಿದ್ದಂತೆ ತಿಳಿದದ್ದು ಅ ಸ್ಥಳದಲ್ಲಿ ಇಷ್ಟು ಹೊತ್ತು ಸುಟ್ಟಿರುವುದು ಓರ್ವ ವ್ಯಕ್ತಿಯ ಮೃತ ದೇಹ ಎಂದು. ಮೃತ ದೇಹ ಕಾಣುತ್ತಲೇ ಪೊಲೀಸರ ಟೆಂಷನ್ ಮತ್ತಷ್ಟು ಜಾಸ್ತಿಯಾಯ್ತು, ಆದ್ರೆ ಆಕ್ಷಣಕ್ಕೆ ಪೊಲೀಸರು ಅದನ್ನ ಅಪರಿಚಿತ ವ್ಯಕ್ತಿಯ ಶವ ಎಂದು ಸ್ಥಳ ಮಹಜರ್ ಮಾಡಿ ಮೃತ ದೇಹವನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ರು.

ಅಡುಗೆ ಕಾಂಟ್ರ್ಯಾಕ್ಟರ್ ಮಟಾಷ್: ಈ ಭೀಕರ ಭೀಬತ್ಸ ಘಟನೆ ನಡೆದದ್ದು ಪೀಣ್ಯಾ ಪೊಲೀಸ್ ಠಾಣ ವ್ಯಾಪ್ತಿಯ ಚನ್ನನಾಯಕನ ಪಾಳ್ಯದಲ್ಲಿ, ಹೌದು ಜುಲೈ 2 ರಂದು ಚನ್ನನಾಯಕನ ಪಾಳ್ಯ ಜನರು ಈ ಶವ ಹುರಿಯುತ್ತಿರುವುದನ್ನ ನೋಡಿ ಬೆಚ್ಚಿ ಬಿದ್ದಿದ್ರು ಪ್ರಕರಣ ನಡೆದು ಮರುದಿನ ಈ ಶವದ ಗುರುತು ಪತ್ತೆಯಾಗಿದ್ದು ಅಲ್ಲಿ ಸುಟ್ಟಿರುವುದು ಹೆಗ್ಗನಹಳ್ಳಿ ನಿವಾಸಿ ಅಡುಗೆ ಕಾಂಟ್ರ್ಯಾಕ್ಟರ್ 38 ವರ್ಷದ ಆನಂದನದು.

ವಿವಾಹ ವಾರ್ಷಿಕೋತ್ಸವದಂದು ಕೊಲೆ: ಜುಲೈ ಎರಡರಂದು ತಮಿಳುನಾಡಿನಿಂದ ಬಂದಿದ್ದ ಹೆಂಡತಿಯೊಂದಿಗೆ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಳ್ಳಬೇಕಿದ್ದ ಆನಂದ ತನ್ನ ಸ್ನೇಹಿತರಿಂದ ಕೊಲೆಯಾಗಿ, ಅವರೇ ಹಚ್ಚಿದ ಚಿತೆಯಲ್ಲಿ ಬೆಂದು ಹೋಗಿದ್ದಾನೆ.  ವಿವಾಹ ವಾರ್ಷಿಕೋತ್ಸದ ದಿನವೇ ಎಂತ ದುರಂತ ನಡೆದಿದೆ.

ಸ್ನೇಹಿತನಿಂದಲೇ ಕೊಲೆ!?: ಅಸಲಿಗೆ ವಿಷಯ ಏನಂದ್ರೆ ಇಲ್ಲಿ ಕೊಲೆ ಮಾಡಿರಿವುದು ಮೃತ ಆನಂದನ ಸ್ನೇಹಿತ ಕಮ್‌ ಅಡುಗೆ ಗುರು ಸತೀಶ, ಪುಟ್ಟ ಹಾಗೂ ದಯಾನಂದ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ!? ಎನ್ನಲಾಗುತ್ತಿದೆ. ಮೃತ ಆನಂದ ಆರೋಪಿ ಸತೀಶನ ಬಳಿ ಅಡುಗೆ ಕೆಲಸ ಮಾಡುತ್ತಿದ್ದನಂತೆ, ಬಳಿಕ ಆನಂದನ ಸ್ವಂತ ಅಡುಗೆ ಕಾಂಟ್ರ್ಯಾಕ್ಟ್ ಆರಂಭಿಸಿದ್ದಾನೆ, ಈ ವೇಳೆ ಸತೀಶನಿಗೆ ಬ್ಯುಸಿನೆಸ್ ಡಲ್ ಆಗಿತ್ತಂತೆ ಈ ವಿಚಾರವಾಗಿ ಸತೀಶ್ ಕುಪಿತನಾಗಿದ್ದನಂತೆ.

ಆನಂದನ ಮನೆಯಲ್ಲಿ ಸ್ನ್ಯಾಕ್ಸ್ ತಯಾರಿ: ಏನಾದ್ರ್ರೂ ಮಾಡ್ಬೇಕು ಎಂದು ಪ್ಲಾನ್ ಮಾಡಿದ್ದ ಪುಟ್ಟ, ಸತೀಶ್ ಹಾಗೂ ದಯಾನಂದ ಮೂವರು ಮೃತ ಆನಂದ‌ನೊಂದಿಗೆ ಪಾರ್ಟಿ  ಪ್ಲಾನ್ ಮಾಡಿ ಆನಂದನ ಮನೆಯಲ್ಲಿ ಮಟನ್ ಮಾಡಿಸಿಕೊಂಡು ಅಲ್ಲಿನಿಂದ ಚನ್ನನಾಯಕನಪಾಳ್ಯದಲ್ಲಿ  ಮೀನಾ ಬಾರ್‌ನಲ್ಲಿ ಎಣ್ಣೆ ತರಿಸಿಕೊಂಡು ಕುಡಿಯುತ್ತಾ ಕುಳಿತಿರುತ್ತಾರೆ. ಬಳಿಕ ಮಾತಿಗೆ ಮಾತು ಬೆಳೆದು ಆನಂದ ಹಾಗೂ ಸತೀಶನ ನಡುವೆ ಜಗಳ ಶುರುವಾಗಿದೆ, ಆರೋಪಿ ಸತೀಶ ಆನಂದನ ಮರ್ಮಾಂಗಕ್ಕೆ ಒದ್ದೆ ಬಳಿಕ ಅಲ್ಲೆ ಇದ್ದ ಕಲ್ಲಿನಿಂದ ಆನಂದನ ತಲೆ ಜಜ್ಜಿದ್ದಾನೆ. ನಂತರ ಪೆಟ್ರೋಲ್ ಅಥವಾ ಎಣ್ಣೆಯಿಂದ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಮನೆಯಲ್ಲಿ ದಾರಿ ಕಾಯುತ್ತಿದ್ದ ಪತ್ನಿ: ಇದೇ ಸಮಯದಲ್ಲಿ ಗಂಡ ಹೇಳಿದಂತೆ ತಮಿಳುನಾಡಿನಿಂದ ಬಂದು ಕೆಂಗೇರಿ ಬಸ್ ನಿಲ್ದಾಣದಿಂದ ಎಷ್ಟು ಭಾರಿ ಫೋನ್ ಮಾಡಿದರು ಗಂಡ ಫೋನ್ ತೆಗೆದಿರಲಿಲ್ಲ. ಅಂದು ರಾತ್ರಿಯಿಡಿ ಮನೆಯಲ್ಲಿ ಕೊರಗಿ ಮರುದಿನ ರಾಜಗೋಪಾಲನಗರ ಠಾಣೆಗೆ ದೂರು ನೀಡಲು ಹೋದಾಗ ಠಾಣಾಧಿಕಾರಿಯ ಸೂಚನೆಯಂತೆ ಪೀಣ್ಯ ಠಾಣೆಗೆ ತೆರಳಿದ ಪವಿತ್ರ ತನ್ನ ಗಂಡ ದರಿಸಿದ್ದ ಚಪ್ಪಲಿ, ಕೈಬಳೆ, ಉಂಗುರ ಇವೆಲ್ಲವನ್ನ ನೋಡಿ ತನ್ನ ಗಂಡನ ಮೃತದೇಹವೆಂದು ಗುರುತಿಸಿದ್ದಾಳೆ.

ಆರೋಪಿಗಳಿಗಾಗಿ ಶೋದ: ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೀಣ್ಯ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಇತ್ತ ವಿವಾಹ ವಾರ್ಷಿಕೋತ್ಸವಸ ದಿನವೇ ಗಂಡನನ್ನ ಕಳೆದುಕೊಂಡ ಹೆಂಡತಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದು ಒಂದು ಕುಟುಂಬವೇ ಬೀದಿಗೆ ಬಂದಿದೆ.

Related posts

Leave a Comment