ಇಷ್ಟಕ್ಕೆಲ್ಲ ಕುತ್ತಿಗೆಗೆ ಮಚ್ಚು ಇಡೋದ!? ಯಾವ ಪುರುಷಾರ್ತಕ್ಕಾಗಿ!?

ನೆಲಮಂಗಲ: ಸೇಲ್ಸ್ ಮ್ಯಾನ್ ಕುತ್ತಿಗೆಗೆ ಲಾಂಗ್ ಇಟ್ಟು  ಹಣದ ಜೋತೆ ಚೆಕ್ ದರೋಡೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಇಸ್ಲಾಂಪುರ ಕ್ರಾಸ್‌ನಲ್ಲಿ ನಡೆದಿದೆ. 

ಇದನ್ನೂ ಓದಿ: ಒಂದಲ್ಲ ಎರಡಲ್ಲ ಮೂರು ದರೋಡೆ ಸ್ವರೂಪ ಮಾತ್ರ ಬೇರೆ ಬೇರೆ

SMS ಏಜೆನ್ಸಿ‌ಗೆ ಸೇರಿದ್ದ ಕುಮಾರ್ ಹಿಂದೂಸ್ಮಾನ್ ಯೂನಿವರ್ಸಲ್ಸ್‌ನಲ್ಲಿ ಸೇಲ್ಸ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ, ಕೆಲದ ನಿಮಿತ್ತ ಇಸ್ಲಾಂಪುರ ಕ್ರಾಸ್ ಬಳಿ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿದ್ದ ದುಷ್ಕರ್ಮಿಗಳು ಸೇಲ್ಸ್ ಮ್ಯಾನ್ ಕುಮಾರ್ ಬಳಿ 10ಸಾವಿರ ನಗದು 20ಸಾವಿರ ಮೌಲ್ಯದ ಚೆಕ್ ಕಿತ್ತು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಪ್ರತ್ಯೇಕ ಎರಡು ಬೈಕ್ ನಲ್ಲಿ ಬಂದಿದ್ದರು ಎನ್ನಲಾಗುತ್ತಿದ್ದು ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌. 

Related posts

One Thought to “ಇಷ್ಟಕ್ಕೆಲ್ಲ ಕುತ್ತಿಗೆಗೆ ಮಚ್ಚು ಇಡೋದ!? ಯಾವ ಪುರುಷಾರ್ತಕ್ಕಾಗಿ!?”

Leave a Comment