ವಿಚಾರಣೆ ವೇಳೆ ಶಂಕಿತ ಉಗ್ರರಿಂದ ಸ್ಪೋಟಕ ಹೇಳಿಕೇ : ಕೇವಲ ಬೆಂಗಳೂರು ಅಲ್ಲ ಇಡೀ ಕರ್ನಾಟಕವೇ ಟಾರ್ಗೆಟ್

ಬೆಂಗಳೂರು: ಬಂಧಿತ ಶಂಕಿತ ಉಗ್ರರ ಪಾತಕಿ ಕೃತ್ಯಗಳ ಪ್ಲಾನ್‍ಗಳು ಬಗೆದಷ್ಟೂ ಬಯಲಾಗ್ತಿದೆ. ಶಂಕಿತ ಉಗ್ರರ ಟಾರ್ಗೆಟ್ ಬೆಂಗಳೂರು ಮಾತ್ರ ಅಲ್ಲ, ಇಡೀ ಕರ್ನಾಟಕದಲ್ಲೇ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಕೋಮುಗಲಭೆ ಸೃಷ್ಟಿಸಿ ನರಮೇಧಕ್ಕೆ ಷಡ್ಯಂತ್ರ ರೂಪಿಸಿರುವುದು ಎಂಬಂತಹ ಒಂದೊಂದೇ ಸ್ಫೋಟಕ ಸತ್ಯಗಳು ಕೇಂದ್ರ ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸಿದ ವೇಳೆ ಹೊರ ಬರುತ್ತಿರುವುದಾಗಿ ತಿಳಿದು ಬಂದಿದೆ.

ಶಂಕಿತ ಉಗ್ರರು ರಾಜ್ಯಾದ್ಯಂತ ರಕ್ತಪಾತ, ನರಮೇಧ, ಪೈಶಾಚಿಕ ಕೃತ್ಯಕ್ಕೆ ಪಿತೂರಿ ಹೂಡಿದ್ದರು. ಕರಾವಳಿ, ಮಧ್ಯ ಕರ್ನಾಟಕದ ಮೇಲೂ ಶಂಕಿತ ಉಗ್ರರ ವಕ್ರದೃಷ್ಟಿ ಬಿದ್ದಿದೆ. ಕೋಮುಗಲಭೆ ನಡೆಯೋ ಸ್ಥಳಗಳನ್ನೇ ಶಂಕಿತರು ಹೆಚ್ಚು ಟಾರ್ಗೆಟ್ ಮಾಡಿದ್ದರು. ಬೆಂಗಳೂರು, ಮಂಗಳೂರು, ಶಿವಮೊಗ್ಗ, ಉಡುಪಿ, ಕಲಬುರಗಿ ಹಾಗೂ ಹುಬ್ಬಳಿಯಂತಹ ಕಡೆ ಟಾರ್ಗೆಟ್ ಮಾಡಿದ್ದರು.

ಇದಕ್ಕಾಗಿ ಈ ಹಿಂದೆ ಎಲ್ಲೆಲ್ಲಿ ಕೋಮುಗಲಭೆ ನಡೆದಿದೆ ಅನ್ನೋ ಮಾಹಿತಿ ಸಂಗ್ರಹಿಸುತ್ತಿದ್ದರು. ಅಂತಹ ಜಾಗಗಳಲ್ಲಿ ಮತ್ತೆ ಗಲಭೆ ರೀತಿ ಸೀನ್ ರೀಕ್ರಿಯೇಟ್‍ಗೆ ಸಂಚು ರೂಪಿಸಿದ್ದರು. ಈ ಮೂಲಕ ಗಲಭೆ ಮಾಡಿ ಪ್ಲಾನ್ ಎಕ್ಸಿಕ್ಯೂಟ್ ಮಾಡಲು ಚಿಂತನೆ ನಡೆಸಿದ್ದರು. ಈ ರೀತಿ ಮಾಡಿದ್ರೆ ಡೌಟ್ ಬರಲ್ಲ, ದೇಶ ದ್ರೋಹ ಕೇಸ್ ಹಾಕಲ್ಲ ಅನ್ನೋ ಪ್ಲಾನ್ ಶಂಕಿತ ಉಗ್ರರದ್ದಾಗಿತ್ತು ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

Related posts

Leave a Comment