ರಾಜ್ಯದಾದ್ಯಂತ ಪತ್ರಕರ್ತರ ಕಲ್ಯಾಣಕ್ಕಾಗಿ ಕಾರ್ಯನಿರತ ಪತ್ರಕರ್ತರ ಸಂಘ ನಿರಂತರ ಶ್ರಮಿಸುತ್ತಿದೆ: ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್

ಸುಮಾರು ೯೦ ವರ್ಷ ಇತಿಹಾಸ ಹೊಂದಿರುವ ರಾಜ್ಯದ ಏಕೈಕ ಪತ್ರಕರ್ತರ ಸಂಘಟನೆಯಾಗಿದ್ದು ಪತ್ರಕರ್ತರ ಶ್ರೇಯೋಭಿವೃದ್ಧಿ ಹಗಲಿರುಳು ಶ್ರಮಿಸುತ್ತಿದೆ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಗ್ರಾಮಾಂತರ ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಗ್ರಾಮಾಂತರ ಜಿಲ್ಲಾ ಸಮಿತಿಯಿಂದ ಮಂಗಳವಾರ ಆಯೋಜಿಸಿದ್ದ ಸದಸ್ಯರ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಇದನ್ನೂ ಓದಿ: ಬಿಜೆಪಿಗೆ ಯಗ್ಗಾಮುಗ್ಗಾ ತರಾಟೆಗೆ ತೆಗೆದುದುಕೊಂಡ ಶಾಸಕ ಶಿವಲಿಂಗೆಗೌಡ


ರಾಜ್ಯದಾದ್ಯಂತ ಪತ್ರಕರ್ತರ ಕಲ್ಯಾಣಕ್ಕಾಗಿ ಕಾರ್ಯನಿರತ ಪತ್ರಕರ್ತರ ಸಂಘ ನಿರಂತರ ಶ್ರಮಿಸುತ್ತಿದೆ. ಪತ್ರಕರ್ತರು ಸಮಾಜಮುಖಿ ಕಾರ್ಯಕ್ಕೂ ಹೆಚ್ಚಿನ ಅಧ್ಯತೆ ನೀಡಬೇಕು. ಸಂಘದ ಕಚೇರಿ ನಿರ್ಮಾಣಕ್ಕೆ ಅಗತ್ಯವಿರುವ ಜಾಗದ ವ್ಯವಸ್ಥೆ ಮುಂದಾಗಬೇಕು. ಸಂಘದ ರಾಜ್ಯಾಧ್ಯಕ್ಷ ಶಿವಾನಂದತಗಡೂರು ಅವರ ನೇತೃತ್ವದಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಪತ್ರಕರ್ತರಿಗೆ ಸರ್ಕಾರದಿಂದ ಸಾಕಷ್ಟು ಅನುದಾನವನ್ನು ನೀಡಲಾಗುತ್ತಿದೆ ಎಂದರು.

ಇದನ್ನೂ ಓದಿ: ಜಾದು ಮಾಡಲು ಹೋಗಿ ನಡೆಯಿತು ಅವಘಡ, ಕುತ್ತಿಗೆಗೆ ಚಾಕು ಹಿರಿದ ಜಾದುಗಾರ


ಜಿಲ್ಲಾ ಪತ್ರಕರ್ತರ ಸಮಾವೇಶ: ಜೂ.೦೩ರಂದು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಗ್ರಾಮಾಂತರ ಜಿಲ್ಲಾ ಸಮಿತಿ ಸಭೆಯಲ್ಲಿ ಈ ಬಾರಿಯ ಜಿಲ್ಲಾ ಪತ್ರಕರ್ತರ ಸಮಾವೇಶವನ್ನು ನೆಲಮಂಗಲ ತಾಲೂಕಿನಲ್ಲಿ ನಡೆಸಲು ತೀರ್ಮಾನ ಮಾಡಿದ್ದು ರಾಜ್ಯಾಧ್ಯಕ್ಷರ ಗಮನಕ್ಕೆ ತಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುವುದು ಎಂದು ಗ್ರಾಮಾಂತರ ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್ ಮಾಹಿತಿ ನೀಡಿದರು.

ಇದನ್ನೂ ಓದಿ: ಉತ್ತರ ಪ್ರದೇಶ ಮೂಲದ ಅಂತರಾಜ್ಯ ಕಳ್ಳರನ್ನು ಬಂಧಿಸಿದ ಮಾದನಾಯಕನಹಳ್ಳಿ ಪೊಲೀಸರು


ತಾಲೂಕು ಅಧ್ಯಕ್ಷ ಆರ್.ಪ್ರಮೋದ್‌ಕುಮಾರ್ ಮಾತನಾಡಿ ತಾಲೂಕಿನಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ಚುನಾವಣೆ ಸೇರಿದಂತೆ ವಿವಿಧ ಸಮಸ್ಯೆಯಿಂದ ಸಂಘ ಸಕ್ರೀಯಗೊಳಿಸಲು ಸಾಧ್ಯವಾಗಿಲ್ಲ. ಈ ಬಾರಿ ತಾಲೂಕಿನಲ್ಲಿ ಜಿಲ್ಲಾ ಪತ್ರಕರ್ತರ ಸಮಾವೇಶವನ್ನು ನಡೆಸಲು ನಿರ್ಧರಿಸಿದ್ದು ಸಂತೋಷಕರ ಸಂಗತಿ. ಎಲ್ಲಾರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಅತ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲಾಗುವುದು ಎಂದರು.


ಸಂದರ್ಭದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಗ್ರಾಮಾಂತರ ಜಿಲ್ಲಾ ಪ್ರಧಾನಕಾರ್ಯದರ್ಶಿ ಆರ್.ರಮೇಶ್, ಜಿಲ್ಲಾ ನಿರ್ದೇಶಕ ಜಿ.ಕೆ.ಸುಗ್ಗರಾಜು, ದೇವರಾಜು, ಸತೀಶ್, ಬಿ.ಎಸ್.ರಾಘವೇಂದ್ರಚಾರ್, ವೈ.ಆನಂದ, ಜಿಲ್ಲಾ ನಾಮ ನಿರ್ದೇಶಕ ಬೂದಿಹಾಲ್‌ಕಿಟ್ಟಿ, ಜಿ.ಎಚ್.ರಾಜು, ತಾಲೂಕು ಉಪಾಧ್ಯಕ್ಷ ಚಿಕ್ಕರಾಜು, ಪಿ.ನಾರಾಯಣಸ್ವಾಮಿ, ಖಜಾಂಚಿ ಮಹಂತೇಶ್, ಕಾರ್ಯದರ್ಶಿ ಶಾಂತರಾಜು, ಸದಸ್ಯ ಲಕ್ಷ್ಮಿಕಾಂತ್‌, ಹೆಚ್.ಜಿ.ರಾಜು, ಎನ್.ಎಸ್.ಮೂರ್ತಿ, ರಾಜಶೇಖರ್, ಹೆಚ್.ಪಿ.ಮಹೇಶ್, ಹೆಚ್.ಮರಿಯಪ್ಪ, ಆರ್.ರಂಗನಾಥ್, ಪಿ.ಗಂಗಾಧರ್, ವೆಂಕಟೇಶ್.ಆರ್.ಚೌಥಾಯಿ, ಹರೀಶ್, ಕಿರಣ್, ವಿಜಯ್‌ವೀಳ್ಯದೆಲೆ, ಸುಮಿತ್ರಾ, ಜಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದರು.

Related posts

Leave a Comment