ಜೀವನಾಂಶ ಕೋರುವ ವಿಚ್ಚೇದಿತ ಪತ್ನಿಗೆ ಶಾಕ್ ನೀಡ ನ್ಯಾಯಾಲಯ

ಬೆಂಗಳೂರು: ಹಿಂದೂ ಸೇರಿದಂತೆ ವಿವಿಧ ಧರ್ಮಗಳ ಧಾಮ್ರಿಕ ಕಾನೂನಿನಂತೆ ಹಾಗೂ ಸಾಂವಿಧಾನಿಕ ಕಾನೂನಿನಡಿ ವಿವಾಹ ಆಗಿರುವ ಸಂಪತಿಗಳು ಯಾವುದೋ ಒಂದು ಸೂಕ್ತ ಕಾರಣಗಳಿಗೆ ಸಾಂಸರಿಕ ಜೀವನದಲ್ಲಿ ಬಿರುಕು ಉಂಟಾಗಿರುತ್ತದೆ.

ಈ ಹಿಂದೆ ಸಾಂಸಾರಿಕ ಜೀವನದ ಬಿರುಕು ಬಂದರೆ ಹಿರಿಯ ಸಮ್ಮುಖದಲ್ಲಿ ಪಂಚಾಯ್ತಿ ಕಟ್ಟೆಗಳಲ್ಲಿ ನ್ಯಾಯ ತೀರ್ಮಾನ ಮಾಡಿ ಗಂಡ ಹೆಂಡತಿಯನ್ನು ಒಂದು ಮಾಡುತ್ತಿದ್ದರು, ಆದ್ರೆ ಭಾರತದಲ್ಲಿ ಗಣತಂತ್ರ ವ್ಯವಸ್ಥೆ ಜಾರಿಯಾದ ಬಳಿಕ ಎಲ್ಲವೂ ಕಾನೂನಿನ ವ್ಯಾಪ್ತಿಯಲ್ಲಿ ಒಳಪಡುತ್ತದೆ. ವಿವಾಹ ವಿಚ್ಚೇದನವೂ ಕಾನೂನಿನ ಅಡಿಯಲ್ಲಿ ಒಳಪಡುವುದರಿಂದ ಒಮ್ಮೆ ಮದುವೆಯಾದ ದಂಪತಿಗಳು ವಿಚ್ಚೇದನ ತೆಗೆದುಕೊಳ್ಳಬೇಕೆಂದರೇ ಕಾನೂನಿನ ಚೌಕಟ್ಟಿನಲ್ಲಿ ಪಡೆದ ವಿಚ್ಚೇದನ ಅಧಿಕೃತ ಆಗಿರುತ್ತದೆ.

ಬಿಜೆಪಿಗೆ ಯಗ್ಗಾಮುಗ್ಗಾ ತರಾಟೆಗೆ ತೆಗೆದುದುಕೊಂಡ ಶಾಸಕ ಶಿವಲಿಂಗೆಗೌಡ, ಬಿಜೆಪಿ ಪರ ಕುಮಾರಸ್ವಾಮಿ ಬ್ಯಾಟ್‌, ಶಿವಲಿಂಗೆಗೌರಿಗೆ ಟಾಂಗ್‌, ಇಬ್ಬರ ಜಟಾಪಟಿ

ಕಾನೂನಿ ಚೌಕಟ್ಟಿನಲ್ಲಿ ವಿಚ್ಚೇದನ ಪಡೆದಾಗ ಗಂಡ ತನ್ನ ವಿಚ್ಚೇದಿತ ಹೆಂಡತಿಗೆ ಜೀವನಾಂಶ ಒದಗಿಸಬೇಕೆಂದಿ ಕಾನೂನು ರೂಪಿಸಲಾಗಿತ್ತು. ಆಸ್ತಿ ಪಾಲು ಸೇರಿದಂತೆ ಪ್ರತಿ ತಿಂಗಳು ಜೀವನ ನಡೆಸಲು 10 ಸಾವಿರ ಹಣ ನೀಡಬೇಕೆಂದು ಈ ಹಿಂದೆ ನ್ಯಾಯಾಲಯದಲ್ಲಿ ಕಾನೂನು ಜಾರಿಯಲ್ಲಿತ್ತು ಆದ್ರೆ ಈಗ ಆ ಕಾನೂನು ಮತ್ತಷ್ಟು ಸರಳೀಕರಣವಾಗಿದ್ದು ತಿಂಗಳ ವಂತಿಕೆ ಹಣದ ಮೌಲ್ಯವನ್ನು ಇಳಿಸಿದ್ದಾರೆ.

ದುಡಿಯಲು ಸಮರ್ಥ ಪತ್ನಿ ಹೆಚ್ಚಿನ ಜೀವನಾಂಶ ಕೋರುವಂತಿಲ್ಲ ಎಂದು ಕೋರ್ಟ್ ಆದೇಶ ಹೊರಡಿಸಿದೆ. ಅಲ್ಲದೆ ಪತ್ನಿಯ ಜೀವನಾಂಶದ ಹಣ ಕಡಿಮೆ ಮಾಡಿದ್ದು ಮಾಸಿಕ ಜೀವನಾಂಶದ  ಮೊತ್ತ 10 ಸಾವಿರದಿಂದ 5 ಸಾವಿರಕ್ಕೆ ಇಳಿಕೆ ಮಾಡಲಗಿದೆ. ಪತಿಯೊಂದಿಗೆ ವಿವಾಹಕ್ಕೆ ಮುನ್ನ ಉದ್ಯೋಗದಲ್ಲಿದ್ದ  ಪತ್ನಿ ಈಗ ಮತ್ತೆ ಕೆಲಸಕ್ಕೆ ಸೇರದಿರಲು ಸಮರ್ಪಕ ಕಾರಣಗಳನ್ನ ನೀಡಿಲ್ಲ, ಆಲಸ್ಯದಿಂದ ಕುಳಿತು ಪತಿಯಿಂದಲೇ ಸಂಪೂರ್ಣ ಜೀವನಾಂಶ ಕೇಳುವಂತಿಲ್ಲ,  ತನ್ನ ಜೀವನ ನಿರ್ವಹಣೆಗೆ ಪತ್ನಿ ಪ್ರಯತ್ನಿಸಬೇಕು ಪೂರಕ ಜೀವನಾಂಶವನ್ನಷ್ಟೇ ಪತಿಯಿಂದ ಪತ್ನಿ ಕೇಳಬಹುದು ಎಂದು ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಪೀಠದ ಹೈಕೋರ್ಟ್ ಆದೇಶ ಮಾಡಿದೆ.

Related posts

Leave a Comment