ಮದುವೆಗೆ ಹೋಗಿದ್ದ ಎಂಬಿಬಿಎಸ್ ವಿದ್ಯಾರ್ಥಿಗಳ ದಾರುಣ ಸಾವು; ಈಜಲು ಹೋದವರು ಮಸಣ ಸೇರಿದರು

ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದ ಐವರು ವಿದ್ಯಾರ್ಥಿಗಳ ಗುಂಪು ಗೆಳೆಯರ ಮದುವೆಗೆ ಭಾಗವಹಿಸಲು ಹೋಗಿತ್ತು. ಆಗ ಎಲ್ಲರೂ ಎಂಜಾಯ್ ಮಾಡಲು ಸಮುದ್ರದಲ್ಲಿ ಈಜಲು ಹೋಗಿದ್ದಾಗ ದಾರುಣ ಘಟನೆಯೊಂದು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚೆನ್ನೈ: ತಮಿಳುನಾಡಿನ (Tamil Nadu) ಖಾಸಗಿ ವೈದ್ಯಕೀಯ ಕಾಲೇಜಿನ ಐವರು ಎಂಬಿಬಿಎಸ್ ವಿದ್ಯಾರ್ಥಿಗಳು ತಮಿಳುನಾಡಿನ ಖಾಸಗಿ ಬೀಚ್‌ನಲ್ಲಿ ಸೋಮವಾರ ಈಜಲು ಹೋದಾಗ ಕನ್ಯಾಕುಮಾರಿಯ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅವರೆಲ್ಲರೂ ತಮ್ಮ ಗೆಳೆಯರೊಬ್ಬರ ಮದುವೆಯಲ್ಲಿ ಭಾಗವಹಿಸಲು ಹೋಗಿದ್ದರು. ಈ ನಡುವೆ ಸಮಯವಿದ್ದುದರಿಂದ ಅವರು ಸಮುದ್ರದಲ್ಲಿ (Beach) ಎಂಜಾಯ್ ಮಾಡಿ, ಸಮಯ ಕಳೆಯಲು ಹೋಗಿದ್ದರು. ಆಗ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ತಿರುಚಿರಾಪಳ್ಳಿಯ ಎಸ್‌ಆರ್‌ಎಂ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ಕೋರ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ತೆಂಗಿನ ತೋಟದ ಮೂಲಕ ಲೆಮೂರ್ ಬೀಚ್‌ಗೆ ರಹಸ್ಯವಾಗಿ ಪ್ರವೇಶಿಸಿದ್ದರು.…

Read More

‘ಅಧಿಪತ್ರ’ ಹೊರಡಿಸಿದ ರೂಪೇಶ್ ಶೆಟ್ಟಿ!! ಅಧಿಪತ್ರ ಸಿನಿಮಾಗೆ ಭರ್ಜರಿ ಡಿಮ್ಯಾಂಡ್,  ಭಾರೀ‌ ಮೊತ್ತಕ್ಕೆ ಸೇಲ್ ಆಯ್ತು ಆಡಿಯೋ ರೈಟ್ಸ್

ರೂಪೇಶ್ ಶೆಟ್ಟಿಯ ಅಧಿಪತ್ರ ಸಿನಿಮಾದ ಆಡಿಯೋ ಹಕ್ಕು ಖರೀದಿಸಿದ ಲಹರಿ ಆಡಿಯೋ ಸಂಸ್ಥೆ ಅಧಿಪತ್ರ ಸಿನಿಮಾದ ಆಡಿಯೋ ಹಕ್ಕು ಲಹರಿ ತೆಕ್ಕೆಗೆ…ರೂಪೇಶ್ ಶೆಟ್ಟಿ ಚಿತ್ರದ ಹವಾ‌ ನೋಡಿ ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಟನೆಯ‌ ಬಹು ನಿರೀಕ್ಷಿತ ಸಿನಿಮಾ ಅಧಿಪತ್ರ. ಈಗಾಗಲೇ ಮೇಕಿಂಗ್ ಹಾಗೂ ಕಂಟೆಂಟ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಆಡಿಯೋ ಹಕ್ಕು ಪ್ರತಿಷ್ಠಿತ ಆಡಿಯೋ‌ ಸಂಸ್ಥೆ ಲಹರಿ ಖರೀದಿ ಮಾಡಿದೆ. 2024 ಬಹು ನಿರೀಕ್ಷಿತ ಸಿನಿಮಾ ಸಾಲಿನಲ್ಲಿ ಅಧಿಪತ್ರ ಕೂಡ ಒಂದು ಮೇ‌ 10ಕ್ಕೆ ಅಧಿಪತ್ರ ಟೀಸರ್: ಅಧಿಪತ್ರ ಸಿನಿಮಾದ ಶೂಟಿಂಗ್ ಹಾಗೂ ಮೇಕಿಂಗ್ನಿಂದಲೂ ಎಲ್ಲರ ಗಮನ ಸೆಳದಿದೇ . ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ. ತೆರೆಗೆ ಬರಲು ರೆಡಿಯಾಗ್ತಿರುವ ಅಧಿಪತ್ರ ಸಿನಿಮಾದ ಟೀಸರ್ ಬಿಡುಗಡೆಗೆ ತಯಾರಿ ನಡೆದಿದೆ. ಇದೇ ತಿಂಗಳ 10ರಂದು ಲಹರಿ ಆಡಿಯೋದಲ್ಲಿ ಅಧಿಪತ್ರದ ಮೊದಲ…

Read More

ಪ್ರಧಾನಿ ಮೋದಿ ಮಣಿಪುರಕ್ಕಿಂತ ಇಸ್ರೇಲ್‌ ಬಗ್ಗೆ ಕಳವಳಗೊಂಡಿದದ್ದಾರೆ – ರಾಹುಲ್‌ ಗಾಂಧಿ

ಐಜೋಲ್(ಮಿಜೋರಾಂ): ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕಿಂತ ಇಸ್ರೇಲ್ ನಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಹೆಚ್ಚು ಕಳವಳಗೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಟೀಕಿಸಿದ್ದಾರೆ. ಐಜೋಲ್ನ ರಸ್ತೆಗಳಲ್ಲಿ 2 ಕಿ.ಮೀ. ಪಾದಯಾತ್ರೆ ಕೈಗೊಂಡ ಬಳಿಕ ರಾಜಭವನದ ಸಮೀಪ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೆರೆಯ ಮಣಿಪುರ ಏಕೀಕೃತ ರಾಜ್ಯವಾಗಿ ಉಳಿದಿಲ್ಲ. ಬದಲಾಗಿದೆ, ಅದು ಜನಾಂಗೀಯ ನೆಲೆಯಲ್ಲಿ ಎರಡು ರಾಜ್ಯಗಳಾಗಿ ವಿಭಜನೆಗೊಂಡಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತ ಸರಕಾರ ಇಸ್ರೇಲ್ ನಲ್ಲಿ ಏನು ಸಂಭವಿಸುತ್ತಿದೆ ಎಂಬುದರ ಬಗ್ಗೆ ಆಸಕ್ತಿ ಹೊಂದಿದೆ. ಆದರೆ, ಜನರು ಹತ್ಯೆಗೀಡಾದ, ಮಹಿಳೆಯರು ಅತ್ಯಾಚಾರಕ್ಕೆ ಒಳಗಾದ, ಮಕ್ಕಳು ಕೊಲ್ಲಲ್ಪಟ್ಟ ಮಣಿಪುರದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಆಸಕ್ತಿ ಇಲ್ಲ. ಇದು ನನಗೆ ಅಚ್ಚರಿ ಉಂಟು ಮಾಡಿದೆ ಎಂದು ಅವರು ಹೇಳಿದರು.

Read More

Devanahalli: ಹೆಂಡತಿಯ ಶೀಲ ಶಂಕಿಸಿ ಗಂಡನಿಂದ ಕೊಲೆ: ಹೆಂಡತಿ ಮಾಡಿದ್ದಾದರು ಏನು?

ದೇವನಹಳ್ಳಿ: ಗಂಡ ಹೆಂಡತಿ ಜಗಳ‌ ಉಂಡು ಮಲಗೋ ವರೆಗೆ ಎನ್ನುವ ಗಾದೆ ಮಾತಿದೆ. ಆದರೆ ಇಲ್ಲೊಬ್ಬ ೧೨ ವರ್ಷ ದಾಂಪತ್ಯ ಜೀವನ ಕಳೆದು, ಈಗ ಹೆಂಡತಿ ಶೀಲ ಶಂಕಿಸಿ, ಮನಸೋಯಿಚ್ಚೆ ತಿವಿದು ತಿವಿದು ಸಾಯಿಸಿರುವ ಘಟನೆ ನಡೆದಿದೆ. ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಘಟನೆಯ ಬಗ್ಗೆ ಪೊಲೀಸರಿಗೆ ವಿವರವಾಗಿ ಹೇಳುತ್ತಿದೆ ಮಗು, ಈ ಎಲ್ಲಾ ಘಟನೆಗಳು ನಡೆದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ದೊಡ್ಡಸಣ್ಣೆ ಎಂಬ ಗ್ರಾಮದಲ್ಲಿ. ೧೨ ವರ್ಷಗಳ ಹಿಂದೆ ತನ್ನ ಅಕ್ಕನ ಮಗಳಾದ ರಜನಿಯನ್ನು ಆಂಜಿನಪ್ಪ ಎಲ್ಲರ ಸಮ್ಮುಖದಲ್ಲಿ ಮದುವೆಯಾದ. ಇವರಿಬ್ಬರ ದಾಂಪತ್ಯ ಒಂದು ಗಂಡು, ಒಂದು ಹೆಣ್ಣು ಮಗು ಕೂಡ ಇದೆ. ಹೀಗೆ ೧೨ ವರ್ಷ ದಾಂಪತ್ಯ ಜೀವನ ಸಾಗಿಸಿದ ಇಬ್ಬರು, ಒಂದೂವರೆ ವರ್ಷದಿಂದ ಜಗಳ ಆರಂಭವಾಗಿದೆ. ಈ ಜಗಳ ಇಂದು ಕೊಲೆಯಲ್ಲಿ ಅಂತ್ಯವಾಗಿದೆ‌. ಇದನ್ನೂ ಓದಿ: ಮಾಲೀಕನ ಹೆಂಡತಿಯ ಮೇಲೆ…

Read More

ಭಾರಿ ಕಂದಕ್ಕಕ್ಕೆ ಬಿದ್ದ ಲಾರಿ, ಪವಾಡ ಸದೃಡ್ಯ ರೀತಿಯಲ್ಲಿ ಪಾರಾದ ಚಾಲಕ

ನೆಲಮಂಗಲ: ತುಮಕೂರಿನಿಂದ ಬೆಂಗಳೂರು ಮಾರ್ಗವಾಗಿ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕಂದಕ್ಕೆ ಬಿದ್ದಿದ್ದು ಲಾರಿ ಸಹಾಯಕನಿಗೆ ಗಂಭೀರ ಗಾಯವಾಗಿದ್ದು ಚಾಲಕ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಟಿ.ಬೇಗೂರು ಬಳಿ ಘಟನೆ ನಡೆದಿದ್ದು, ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದ ರಸ್ತೆ ಕಂದಕಕ್ಕೆ ಲಾರಿ ಉರುಳಿ ಬಿದ್ದಿದೆ. ಘಟನೆ ವೇಳೆ ಲಾರಿ ಎಡಭಾಗದಲ್ಲಿ ಕುಳಿತಿದ್ದ ಸಹಾಯಕ ಗಂಭೀರ ಗಾಯಕ್ಕೆ ತುತ್ತಾಗಿದ್ದಾದ್ದು, 28 ವರ್ಷದ ಸಂತೋಷ್‌ನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕಾಮಗಾರಿ ವಿಳಂಭ ಆರೋಪ: ಇನ್ನೂ ಹೆದ್ದಾರಿ ಅಗಲೀಕರಣ ಕಾಮಗಾರಿ ಆರಂಭವಾಗಿದ್ದು ನಾಲ್ಕು ಪಥದ ರಸ್ತೆಯಿಂದ ಹತ್ತು ಪಥದ ರಸ್ತೆಗೆ ಮೇಲ್ದರ್ಜೆಗೆ ಏರಿಸಲು ಕಾಮರಾರಿ ಆರಂಭವಾಗಿದೆ. ಕಳೆದ ಎರಡು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು ಕೆಲಸ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿದೆ. ಹೆಚ್ಚಾದ ಅಪಘಾತಗಳು: ರಸ್ತೆ ಕಾಮಗಾರಿ ಆರಂಭವಾದಾಗಿನಿಂದಲೂ ಅಪಘಾತಗಳ…

Read More

ವಿವಾಹ ವಾರ್ಷಿಕೋತ್ಸವದಂದು ಕೊಲೆ, ಶಿಷ್ಯನನ್ನೆ ಕೊಂದ ಗುರು

ಬೆಂಗಳೂರು: ಹೆಂಡತಿ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಳ್ಳಲು ತಮಿಳುನಾಡಿನಿಂದ ಬಂದು ಮನೆಯಲ್ಲಿ ಕಾಯುತ್ತಿದ್ದಳು, ರಾತ್ರಿಯಾದರು ಗಂಡ ಮನೆಗೆ ಬರಲೇ ಇಲ್ಲ, ಇಡೀ ರಾತ್ರಿ ಆಕೆ ಅರೆ ನಿದ್ರೆಯಲ್ಲಿ ಕೊರಗಿದರೆ ಇತ್ತ ಗಂಡೆ ಸ್ನೇಹಿತರು ಹಚ್ಚಿದ ಚಿತೆಯಲ್ಲಿ ಬೆಂದುಹೋಗಿದ್ದ. ಜುಲೈ 2:  ಧಗಧಗಿಸಿ ಉರಿಯುತ್ತಿರುವ ಬೆಂಕಿ ವಿಚಾರ ತಿಳಿದು ಸ್ಥಳಕ್ಕೆ ದೌಡಯಿಸಿದ ಪೊಲೀಸರಿಗೆ ಟೆಂಷನ್ ಗ್ರಾಮಸ್ಥರಲ್ಲಿ ಆತಂಕ. ಬೆಂಕಿ ಸ್ವಲ್ಪ ಹತೋಟಿಗೆ ಬರುತ್ತಿದ್ದಂತೆ ತಿಳಿದದ್ದು ಅ ಸ್ಥಳದಲ್ಲಿ ಇಷ್ಟು ಹೊತ್ತು ಸುಟ್ಟಿರುವುದು ಓರ್ವ ವ್ಯಕ್ತಿಯ ಮೃತ ದೇಹ ಎಂದು. ಮೃತ ದೇಹ ಕಾಣುತ್ತಲೇ ಪೊಲೀಸರ ಟೆಂಷನ್ ಮತ್ತಷ್ಟು ಜಾಸ್ತಿಯಾಯ್ತು, ಆದ್ರೆ ಆಕ್ಷಣಕ್ಕೆ ಪೊಲೀಸರು ಅದನ್ನ ಅಪರಿಚಿತ ವ್ಯಕ್ತಿಯ ಶವ ಎಂದು ಸ್ಥಳ ಮಹಜರ್ ಮಾಡಿ ಮೃತ ದೇಹವನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ರು. ಅಡುಗೆ ಕಾಂಟ್ರ್ಯಾಕ್ಟರ್ ಮಟಾಷ್: ಈ ಭೀಕರ ಭೀಬತ್ಸ ಘಟನೆ ನಡೆದದ್ದು ಪೀಣ್ಯಾ ಪೊಲೀಸ್…

Read More

ತ್ಯಾಮಗೊಂಡ್ಲು ಲಕ್ಶ್ಮಿನಾರಾಯಣ ಟಿ ಎನ್ ರವರಿಗೆ ಡಾಕ್ಟರೇಟ್ ಪದವಿ.

ನೆಲಮಂಗಲ: ತ್ಯಾಮಗೊಂಡ್ಲು ಗ್ರಾಮದ ನಿವಾಸಿಗಳಾದ ನರಸಿಂಹಮೂರ್ತಿ.ಎಲ್ ಮತ್ತು ಲಕ್ಷ್ಮಮ್ಮ ದಂಪತಿಗಳ ಪುತ್ರರಾದ ಮತ್ತು ತುಮಕೂರಿನ ಶ್ರೀ ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಲಕ್ಷ್ಮಿನಾರಾಯಣ ಟಿ ಎನ್ ರವರಿಗೆ ತುಮಕೂರು ವಿಶ್ವವಿದ್ಯಾನಿಲಯ ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ಘೋಷಿಸಿದೆ. ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಚಿಕ್ಕಣ್ಣರವರ ಮಾರ್ಗದರ್ಶನದಲ್ಲಿ ಮಂಡಿಸಿದ “ಆದಿಚುಂಚನಗಿರಿ ಕ್ಷೇತ್ರವು ಮಹಿಳಾ ಸಬಲೀಕರಣಕ್ಕಾಗಿ ನೀಡಿರುವ ಕೊಡುಗೆಗಳು” ಎಂಬ ವಿಷಯದ ಮೇಲಿನ  ಸಂಶೋಧನಾ ಮಹಾ ಪ್ರಬಂಧಕ್ಕೆ ತುಮಕೂರು ವಿಶ್ವವಿದ್ಯಾನಿಲಯ ಪಿಎಚ್‌ಡಿ ಪ್ರಧಾನ ಮಾಡಿ ಗೌರವಿಸಿದೆ. ಗ್ರಾಮಸ್ಥರು ಮತ್ತು ವಿದ್ಯಾರ್ಥಿ ವೃಂದ, ಪ್ರಾಧ್ಯಾಪಕ ವರ್ಗದವರು ಲಕ್ಷ್ಮಿನಾರಾಯಣರನ್ನು ಅಭಿನಂದಿಸಿದ್ದಾರೆ.

Read More

ಕ್ಯಾನ್ಸರ್ ಕಾರಣದಿಂದ ಪೊಲೀಸ್ ಇಲಾಖೆಯಲ್ಲಿ ಮತ್ತೊಂದು ಸಾವು – Digital Varthe

ಬೆಂಗಳೂರು: ಕ್ಯಾನ್ಸರ್ ಕಾರಣದಿಂದ ಬೆಂಗಳೂರಿನಲ್ಲಿ ಮತ್ತೋಂದು ಸಾವಿನ‌ ಪ್ರಕರಣ‌ ದಾಖಲಾಗಿದೆ, ಅಶೋಕನಗರ ಸಂಚಾರಿ ಠಾಣೆಯ ಹೆಡ್ ಕಾನ್ಸ್‌ಟೆಬಲ್ ಕುಮಾರ್ ತಾನು ವಾಸವಿದ್ದ ಕ್ವಾಟ್ರಸ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.‌ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಹೆಡ್ ಕಾನ್ಸ್ ಟೇಬಲ್ ಕುಮಾರ್  ನನ್ನಿಂದ ಮಗಳಿಗೂ ಕಾಯಿಲೆ ಹರಡಿದೆ ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಮಾರ್‌ರಿಂದ ತಮ್ಮ ಮಗಳಿಗೂ ಕ್ಯಾನ್ಸರ್ ರೋಗ ಹರಡಿತ್ತು ಎನ್ನಲಾಗುತ್ತಿದೆ, ತಾನು ಚಿಕಿತ್ಸೆ ಪಡೆಯೋ ಜೊತೆಯಲ್ಲಿ ಸಹ ಮಗಳಿಗೆ ಟ್ರೀಟ್ಮೆಂಟ್ ಕೊಡಿಸಿದ್ದರು. ಕುಮಾರ್ ಮಗಳು ಇತ್ತೀಚೆಗೆ ಚೇತರಿಸಿಕೊಳ್ಳುತ್ತಿದ್ದರು.ಆದರು ಸಹ ನನ್ನಿಂದಲೇ ಮಗಳಿಗೆ ಕ್ಯಾನ್ಸರ್ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಮೃತದೇಹದ ಅಂತ್ಯಕ್ರಿಯೆಯನ್ನು ಕುಟುಂಬಸ್ಥರ ನಿರ್ಧಾರದಂತೆ ದಾವಣಗೆರೆ ಜಿಲ್ಲೆ ಚೆನ್ನಗಿರಿಗೆ ತೆಗೆದುಕೊಂಡು ಹೋಗಲಾಗಿದೆ.

Read More

ಅಂಬೇಡ್ಕರ್ ಅನ್ನುವ ಹೆಸರು ಬ್ರಾಹ್ಮಣ ಶಿಕ್ಷಕನ ಕೊಡುಗೆನಾ? ಈ ಬಗ್ಗೆ ರಾಜರತ್ನ ಅಂಬೇಡ್ಕರ್ ಏನಂದ್ರು

ಬಾಬಾ ಸಾಹೇಬ್ ಭೀಮ್ ರಾವ್ ರಾಮ್‌ಜಿ ಅಂಬೇಡ್ಕರ್ ಅವರಿಗೆ ಅಂಬೇಡ್ಕರ್ ಎನ್ನುವ ಹೆಸರು ಬಂದದ್ದು ಅವರ ಶಿಕ್ಷಕರು ಇಟ್ಟ ಹೆಸರು ಎಂದು ನಾವು ಇಷ್ಟು ದಿನ ತಿಳಿದಿದ್ದೊ, ಇತಿಹಾಸಜಾರರು ಸಹ ನಮಗೆ ಅದನ್ನೆ ಹೇಳಿದ್ದರು, ಆದ್ರೆ ಅದು ನಿಜವಾದ ಸತ್ಯ ಅಲ್ಲ ಅಂತಾ ಹೇಳ್ತಿದ್ದಾರೆ ಅಂಬೇಡ್ಕರ್ ವಂಶಸ್ಥರಾದ ರಾಜರತ್ನ ಅಂಬೇಡ್ಕರ್. ರಾಜರತ್ನ ಅಂಬೇಡ್ಕರ್ ಅವರು ಬರೆದ ಒಂದು ಲೇಖನವನ್ನು ಇಲ್ಲಿ ಪ್ರಕಟಿಸಲಾಗಿದೆ. ಇಲ್ಲ ಖಂಡಿತವಾಗಿಯೂ ಇಲ್ಲ.ಇದು ಬಾಬಾಸಾಹೇಬರ ಮತ್ತು ಆನಂದರಾವ್ ತಂದೆ ಸುಬೆದಾರ್ ಮೇಜರ್ ರಾಮಜಿ ಸಕ್ತ್ಪಾಲ್ (ಅಂಬೇಡ್ಕರ್) ಅವರ ಕೊಡುಗೆ ಆಗಿದೆ. ನನಗೆ (ರಾಜ ರತ್ನ ಅಂಬೇಡ್ಕರ್ )1950 ಕ್ಕಿಂತ ಮುಂಚಿನ ಕೆಲವು ದಾಖಲೆಗಳು ಬೇಕಾಗಿದ್ದವು.ಆದ್ದರಿಂದ ನಾನು 7 ಸೆಪ್ಟೆಂಬರ್ 2022 ರಂದು ನನ್ನ ಮುತ್ತಾತ ಆನಂದರಾವ್ ಮತ್ತು ಭೀಮರಾವ್ ಅಂದ್ರೆ,ವಿಶ್ವ ರತ್ನ ಬೋಧಿಸತ್ವ ಡಾ. ಭೀಮರಾವ್ ರಾಮಜಿ ಅಂಬೇಡ್ಕರ್ ಅವರು ಯಾವ ಶಾಲೆಯಲ್ಲಿ ಕಲಿತಿದ್ದರೋ,…

Read More

2 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಬಿದ್ದ ಪಿಡಿಓ -Digital Varthe

ನೆಲಮಂಗಲ (ಜೂ08): ಭೂಮಿ ಖಾತೆ ಮಾಡಿಕೊಡಲು ಸಾರ್ವಜನಿಕರಿಂದ 2 ಲಕ್ಷ ಲಂಚಕ್ಕೆ ಭೇಡಿಕೆ ಇಟ್ಟಿದ್ದ ಭ್ರಷ್ಟ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎನ್. ನರಸಿಂಹಮೂರ್ತಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅಗಳಕುಪ್ಪೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಖಾರಿ ಎನ್.ನರಸಿಂಹಮೂರ್ತಿ ಸಾರ್ವಜನಿಕರೊಬ್ಬರಿಗೆ ಖಾತೆ ಮಾಡಿಕೊಡಲು 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು, ಈ ಹಣವನ್ನ ಇಂದು ನೆಲಮಂಗಲ ಪರಿವೀಕ್ಷಣ ಮಂದಿರ ಬಳಿ ಇಂದು ತಂದು ಕೊಡಲು ತಿಳಿಸಿದ್ದರು. ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಸರಣಿ ಕಳ್ಳತನ ಪಿಡಿಒ ಲಂಚಕ್ಕೆ ಭೇಡಿಕೆ ಇಟ್ಟಿದ್ದ ವಿಚಾರವನ್ನ ಲೋಕಾಯುಕ್ತರಿಗೆ ದೂರು ನೀಡಲಾಗಿತ್ತು, ದೂರಿನನ್ವಯ ಲೋಕಾಯುಕ್ತ ಡಿವೈಎಸ್‌ಪಿ ರೇಣುಕಾಪ್ರಸಾದ್‌ ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಪಿಡಿಒ ನರಸಿಂಹಮೂರ್ತಿ ಲೋಕಾ ಬಲೆಗೆ ಬಿದ್ದಿದ್ದಾರೆ.

Read More