ಸ್ಯಾಂಡಲ್‌ವುಡ್‌ ಮೇರುನಟನ ಪತ್ನಿ ಸಾವು: ಕಣ್ಣೀರಲ್ಲಿ ಚಂದನವನ

ಸ್ಯಾಂಡಲ್‌ವುಡ್‌ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರು ಹೃದಯಾಘಾತದಿಂಧ ನಿಧನರಾಗಿದ್ದಾರೆ. ಬೆಂಗಳೂರು (ಆ.7):ಸ್ಯಾಂಡಲ್‌ವುಡ್‌ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರು ಹೃದಯಾಘಾತದಿಂಧ ನಿಧನರಾಗಿದ್ದಾರೆ. ಪತಿ ವಿಜಯ್ ಅವರ ಜೊತೆಗೆ ಬ್ಯಾಂಕಾಕ್ ಗೆ ತೆರಳಿದ್ದಾಗ ಅಲ್ಲಿ ಹಾರ್ಟ್ ಅಟ್ಯಾಕ್ ಆಗಿ  ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಸುದ್ದಿ ಇಡೀ ಕನ್ನಡ ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿಯಾಗಿದೆ. ದಂಪತಿಗೆ ಇವರಿಗೆ ಶೌರ್ಯ ಎಂಬ ಓರ್ವ ಪುತ್ರನಿದ್ದಾನೆ. 2016ರಲ್ಲಿ ಬಿಡುಗಡೆಯಾದ ಅಪೂರ್ವ ಸಿನೆಮಾದಲ್ಲಿ ಅತಿಥಿ ಪಾತ್ರದಲ್ಲಿ ಸ್ಪಂದನಾ ನಟಿಸಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಶಿವರಾಂ ಅವರ ಪುತ್ರಿಯಾಗಿರುವ ಸ್ಪಂದನಾ ಅವರನ್ನು ವಿಜಯ ರಾಘವೇಂದ್ರ 2007, ಆಗಸ್ಟ್ 26 ರಲ್ಲಿ  ಪ್ರೀತಿಸಿ  ಮದುವೆಯಾಗಿದ್ದರು. ಇವರ 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಕೇವಲ 19 ದಿನಗಳು ಬಾಕಿ ಇರುವಂತೆ ಈ ದುರಂತ ನಡೆದಿದೆ. ರಾತ್ರಿ ಮಲಗಿದ್ದ ಜಾಗದಲ್ಲೆ ಸ್ಪಂದನಾಹೆ ಹೃದಯಾಘಾತವಾಗಿದ್ದು ವಿಜಯರಾಘವೇಂದ್ರ ನೋಡಿಕೊಳ್ಳುವಷ್ಟರಲ್ಲಿ…

Read More

ಮಗಳು ವಂಶಿಕಾ ಹೆಸರು ಬಳಸಿ ಹಣ ವಸೂಲಿ ಪ್ರಕರಣ: ನಟ ಆನಂದ್‌ ಏನಂದ್ರು!?

ಬೆಂಗಳೂರು: ಕಿರುತೆರೆ ರಿಯಾಲಿಟಿ ಶೋ ಸ್ಟಾರ್‌, ಸೋಷಿಯಲ್‌ ಮೀಡಿಯಾದಲ್ಲಿ ದೂಳೆಬ್ಬಿಸಿರುವ ಪುಟಾಣಿ ವಂಶಿಕ ಹೆಸರು ಬಳಸಿಕೊಂಡು ಹಣ ವಸೂಲಿ ಮಾಡಿರುವ ಆರೋಪದಲ್ಲಿ ವಂಶಿಕ ತಂದೆ ಮಾಸ್ಟರ್‌ ಆನಂದ್‌ ಸದಾಶಿವನಗರ ಪೊಲೀಸ್‌ ಠಾಣೆಯ ಬಳಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ದುಡ್ಡು ಇಸ್ಕೊಂಡ್ ಚಾನ್ಸ್ ಕೊಡೊದು ಈ ಪ್ರಪಂಚದಲ್ಲೇ, ಆರೋಪಿಗಳು ಇನ್ಸಾಟ್ರಾಗಾಮ್ ನಲ್ಲಿ ಎಲ್ಲರಿಗೂ ಮೇಸೆಜ್ ಮಾಡಿದ್ದಾರೆ, ನಿಶಾ ನರಸಪ್ಪ ಮೇಸೆಜ್ ಮಾಡಿ ಆಸೆ ತೋರಿಸಿದ್ದಾರೆ ಇದನ್ನು ನಂಬಿ ಜನರು ಹಣ ಹಾಕಿದ್ದಾರೆ. ನಮ್ಮ ಮಗಳ ಹೆಸರು ಮೀಸ್ ಯೂಸ್ ಆಗಿದೆ ಪೋಷಕರು ಕಣ್ಣು ಮುಚ್ಚಿ ಸಹಿ ಹಾಕಿದ್ದಾರೆ ನಾನ್ ರಿಪೆಂಡ್ ಮಾಡಲ್ಲ ಅಂತ ಕಂಡಿಷನ್ ಇರುತ್ತೆ ಸೊಷಿಯಲ್ ಮೀಡಿಯಾ ನಂಬಿ ಮೋಸ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ. ನನ್ನ ಮಗಳು ಪತ್ನಿ ಯಶಸ್ವಿನಿ ಎರಡು ಇವೆಂಟ್ ಗೆ ಹೋಗಿದ್ದಾರೆ ಯಾರು ಹಣ ಕೊಟ್ರೇ, ಸಿನಿಮಾದಲ್ಲಿ ಚಾನ್ಸ್ ಕೊಡ್ತಾರೇ ಅನ್ನೋದು…

Read More

ಗಡಿಪಾರು ಭೀತಿಯಲ್ಲಿದ್ದ ನಟ ಚೇತನ್ ಅಹಿಂಸಾಗೆ ಹೈಕೋರ್ಟ್ ಮತ್ತೆ ಬಿಗ್ ರಿಲೀಫ್

ಬೆಂಗಳೂರು (ಜೂ. 2): ನಟ ಚೇತನ್ ಗೆ ನೀಡಿದ್ದ ಒಸಿಐ ಮಾನ್ಯತೆ ರದ್ದು ಮಾಡಿದ ವಿಚಾರದಲ್ಲಿ ಜೂನ್.20 ರವರೆಗೆ ತಡೆಯಾಜ್ಞೆ ಹೈಕೋರ್ಟ್ ವಿಸ್ತರಿಸಿದೆ. 2018 ರಲ್ಲಿ ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡ್ ಪಡೆದು ಚೇತನ್ ಭಾರತದಲ್ಲಿ ವಾಸಿಸುತ್ತಿದ್ದರು. ಈ ವೇಳೆ ಅನೇಕ ಕ್ರಾಂತಿಕಾರಿ ಚಟುವಟಿಕೆಗಳನ್ನ ಚೇತನ್ ಅಹಿಂಸಾ ರಾಜ್ಯದಲ್ಲಿ ಹಮ್ಮಿಕೊಂಡಿದ್ದರು. ಈ ರೀತಿಯ ಕ್ರಾಂತಿಕಾರಿ ಚಟುವಟಿಕೆಗಳ ವಿಚಾರದಲ್ಲಿ ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಯತ್ನ, ಭಾರತ ವಿರೋಧಿ ಚಟುವಟಿಕೆ ಆರೋಪಗಳು ಕೇಳಿ ಬಂದ ಹಿನ್ನೆಲೆ ಕೇಂದ್ರ ಸರ್ಕಾರ ನಟ ಚೇತನ್ ಅಹಿಂಸಾಗೆ ನೋಟೀಸ್ ನೀಡಿ ಉತ್ತರ ಪಡೆದಿತ್ತು ಚೇತನ್ ಉತ್ತರ ಸಮಾಧಾನಕಾರವಿಲ್ಲ‌ ಎಂದು ಕೇಂದ್ರ ನಟ ಚೇತನ್ ಪಡೆದಿದ್ದ ಒಸಿಐ ಕಾರ್ಡ್ ರದ್ದು ಮಾಡಿತ್ತು. ಇದನ್ನು ಹೈಕೋರ್ಟ್ ನಲ್ಲಿ ನಟ ಚೇತನ್ ಪ್ರಶ್ನಿಸಿದ್ದರು, ಏ.21 ರಂದು ಚೇತನ್‌ಗೆ ಹೈಕೋರ್ಟ್ ಷರತ್ತುಬದ್ದ ರಿಲೀಫ್ ನೀಡಿ ಚೇತನ್ ಅರ್ಜಿಗೆ…

Read More

ಕೊರಗಜ್ಜನಲ್ಲಿ ಹರಕೆ ಮಾಡಿಕೊಂಡ ರಚಿತಾ: ಕೊರಗಜ್ಜ ಕ್ಷೇತ್ರಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ಭೇಟಿ

ಮಂಗಳೂರು (ಮೆ. 31): ಮಂಗಳೂರು ಹೊರವಲಯದ ಕುತ್ತಾರಿನಲ್ಲಿರುವ ಕೊರಗಜ್ಜ  ಕ್ಷೇತ್ರಕ್ಕೆ ಸ್ಯಾಂಡಲ್ ವುಡ್ ಬೆಡಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಭೇಟಿ ನೀಡಿ ಕೊರಗಜ್ಜನ ಆಶಿರ್ವಾದ ಪಡೆದಿದ್ದಾರೆ. ಮುಂಬರುವ ಚಿತ್ರಗಳಾದ ಮ್ಯಾಟ್ನಿ, ಬ್ಯಾಡ್ ಮ್ಯಾನರ್ಸ್, ಸೇರಿದಂತೆ ಹಲವು ಚಿತ್ರಗಳ ಯಶಸ್ಸಿಗೆ ನಟಿ ರವಿತಾ ರಾಮ್ ಪ್ರಾರ್ಥನೆ ಸಲ್ಲಿಸಿದ್ದಾರೆ. ಕೊರಗಜ್ಜ ಕ್ಷೇತ್ರದ ಭೇಟಿ ಬಳಿಕ ನಟಿ ರಚಿತಾ ರಾಮ್ ಮಾತನಾಡಿ ನನ್ನ ಸ್ನೇಹಿತರೆಲ್ಲರೂ ಕೊರಗಜ್ಜ ದೈವದ ಕಾರಣೀಕದ ಬಗ್ಗೆ ಹೇಳಿದ್ರು ಹಾಗಾಗಿ ನನಗೂ ಕೊರಗಜ್ಜ ದೈವದಲ್ಲಿ ಭಕ್ತಿಯಿಂದ ಪ್ರಾರ್ಥಿಸಬೇಕು ಅನ್ನಿಸಿತು. ಈ ಕ್ಷೇತ್ರ ಪ್ರಾಕೃತಿಕ ಸೌಂದರ್ಯವನ್ನು ಒಳಗೊಂಡು ತುಂಬಾ ಚೆನ್ನಾಗಿದೆ ನನ್ನ ಮುಂಬರುವ ಚಿತ್ರಗಳ ಬಗ್ಗೆ ಪ್ರಾರ್ಥಿಸಿದ್ದೇನೆ, ಕುತ್ತಾರು ಕೊರಗಜ್ಜ ಕ್ಷೇತ್ರದಲ್ಲಿ ನಟಿ ರಚಿತಾ ರಾಮ್ ಹೇಳಿಕೆ.

Read More