ಉ.ಪ್ರದೇಶ: ದಲಿತ ಮಹಿಳೆ ಮೇಲೆ ಅತ್ಯಾಚಾರ, ದೇಹ ತುಂಡರಿಸಿ ಆರೋಪಿಗಳು ನಾಪತ್ತೆ

40 ವರ್ಷದ ದಲಿತ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ, ಆನಂತರ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿರುವ ಘಟನೆ ಉತ್ತರ ಪ್ರದೇಶದ ಬಂಡಾದಲ್ಲಿ ನಡೆದಿದೆ. ಘಟನೆ ಕುರಿತು ಮಾಹಿತಿ ನೀಡಿದ ಸ್ಟೇಷನ್ ಹೌಸ್ ಆಫೀಸರ್ ಸಂದೀಪ್ ತಿವಾರಿ, ”ಮಂಗಳವಾರ ಮಹಿಳೆ ಆರೋಪಿ ರಾಜ್‌ಕುಮಾರ್ ಶುಕ್ಲಾ ಅವರ ಹಿಟ್ಟಿನ ಗಿರಣಿಯನ್ನು ಸ್ವಚ್ಛಗೊಳಿಸಲು ಮನೆಗೆ ತೆರಳಿದ್ದರು. ಸ್ವಲ್ಪ ಸಮಯದ ನಂತರ ಆ ಮಹಿಳೆಯ 20 ವರ್ಷದ ಮಗಳು ಶುಕ್ಲಾ ಅವರ ಮನೆಗೆ ಹೋಗಿದ್ದಾಳೆ, ಒಳಗಿನಿಂದ ಚಿಲಕ ಹಾಕಿದ ಕೊಠಡಿಯಿಂದ ತಾಯಿಯ ಕಿರುಚಾಟ ಕೇಳಿದೆ” ಎಂದು ತಿಳಿಸಿದರು. ಸ್ವಲ್ಪ ಸಮಯದ ನಂತರ ಕೋಣೆಯ ಬಾಗಿಲು ತೆರೆದಾಗ ಬಾಲಕಿ ತಾಯಿಯ ಶವ ಮೂರು ತುಂಡುಗಳಾಗಿ ಬಿದ್ದಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ರಾಜ್‌ಕುಮಾರ್ ಶುಕ್ಲಾ, ಅವರ ಸಹೋದರ ಬೌವಾ ಶುಕ್ಲಾ ಮತ್ತು ರಾಮಕೃಷ್ಣ ಶುಕ್ಲಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಸ್‌ಎಚ್‌ಒ…

Read More

ದಲಿತ ಯುವಕನಿಗೆ ಜಾತಿ ನಿಂದನೆ, ಕೊಲೆ: ಆರೋಪಿಗೆ ಜೀವಾವಧಿ ಶಿಕ್ಷೆ

ದಲಿತ ಕೂಲಿ ಕಾರ್ಮಿಕನೋರ್ವನಿಗೆ ಜಾತಿ ನಿಂದಿಸಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 72 ವರ್ಷದ ವ್ಯಕ್ತಿಗೆ ಉತ್ತರಪ್ರದೇಶದ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಭದೋಹಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಸದ್ ಅಹ್ಮದ್ ಹಶ್ಮಿ ಅವರು 2002ರಲ್ಲಿ ನಡೆದ ಅಜೀತ್ ಕುಮಾರ್ (32) ಕೊಲೆ ಪ್ರಕರಣದಲ್ಲಿ ದೇವಿಚರಣ್ ವಿಶ್ವಕರ್ಮ ದೋಷಿ ಎಂದು ತೀರ್ಪು ನೀಡಿದ್ದು, ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು ಮತ್ತು 52,000 ರೂ.ದಂಡವನ್ನು ವಿಧಿಸಿದ್ದಾರೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (SC-ST) ಅನಿಲ್ ಕುಮಾರ್ ಶುಕ್ಲಾ ಅವರು ಈ ಘಟನೆ 2022ರ ಜು.18ರಂದು ಸಂಭವಿಸಿದೆ. ಆಕಾಶ್ ಮಿಶ್ರಾ ಎಂಬವರು ಮನೆ ನಿರ್ಮಾಣ ಮಾಡುತ್ತಿದ್ದರು ಮತ್ತು ದೇವಿಚರಣ್ ವಿಶ್ವಕರ್ಮ ಮತ್ತು ಮೃತ ಅಜೀತ್ ಕುಮಾರ್ ಅಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಅಜೀತ್ ಕುಮಾರ್ ಇತರ ಕಾರ್ಮಿಕರಿಗೆ ಚಹಾ ನೀಡುತ್ತಿದ್ದಾಗ ವಿಶ್ವಕರ್ಮ ಜಾತಿ ನಿಂದನೆ ಮಾಡಿದ್ದಾನೆ. ಇದಕ್ಕೆ ಅಜೀತ್ ಕುಮಾರ್ ವಿರೋಧವನ್ನು…

Read More

Good News : ಸಾರ್ವಜನಿಕರಿಗ ಸಿಹಿ ಸುದ್ದಿ ; ಈ ವಸ್ತಗಳ ಬೆಲೆ ಭಾರಿ ಇಳಿಕೆ

ನವದೆಹಲಿ : ಪ್ರತಿ ಬಾರಿ ನಾವು ಯಾವುದೇ ವಸ್ತುವನ್ನ ತೆಗೆದುಕೊಂಡಾಗ, ಏನನ್ನಾದರೂ ತಿನ್ನುವಾಗ ಅಥವಾ ಕುಡಿಯುವಾಗ, ಪಾವತಿ ಮಾಡಿದಾಗ, ಜಿಎಸ್ಟಿ ನಮ್ಮನ್ನ ತೊಂದರೆಗೊಳಿಸುತ್ತದೆ. ಅದೇ ರೀತಿ ಹಳೆಯ ತೆರಿಗೆ ವ್ಯವಸ್ಥೆಯ ಪ್ರಕಾರ, ಪ್ರತಿ ರಾಜ್ಯವು ವಿಭಿನ್ನ ರೀತಿಯಲ್ಲಿ ತೆರಿಗೆಗಳನ್ನ ಸಂಗ್ರಹಿಸುತ್ತಿತ್ತು. ಕೇಂದ್ರ ಸರ್ಕಾರವು ಈ ನೀತಿಯನ್ನ ಕೊನೆಗೊಳಿಸಿದೆ ಮತ್ತು ದೇಶಾದ್ಯಂತ ಒಂದೇ ತೆರಿಗೆ ವ್ಯವಸ್ಥೆಯನ್ನ ತಂದಿದೆ. 2016ರಲ್ಲಿ, ಈ ಸಂಬಂಧ ತಿದ್ದುಪಡಿಯನ್ನ ಜಾರಿಗೆ ತರಲಾಯಿತು ಮತ್ತು 2017ರಲ್ಲಿ, ಕಾಯ್ದೆಯನ್ನು ಜಾರಿಗೆ ತರಲಾಯಿತು. ಮೋದಿ ನೇತೃತ್ವದ ಕೇಂದ್ರವು ಇದನ್ನು ನಾಲ್ಕು ಸ್ಲ್ಯಾಬ್ಗಳಾಗಿ ವಿಂಗಡಿಸಿ ತೆರಿಗೆ ಸಂಗ್ರಹಿಸುತ್ತದೆ. ಅಂದಿನಿಂದ, ಸ್ಲ್ಯಾಬ್’ಗಳಲ್ಲಿ ಹಲವಾರು ಬದಲಾವಣೆಗಳನ್ನ ಮಾಡಲಾಗಿದೆ. ಆದಾಗ್ಯೂ, ಮತ್ತೊಮ್ಮೆ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜಿಎಸ್ಟಿಯ 50ನೇ ಸಭೆಯಲ್ಲಿ, ಸ್ಲ್ಯಾಬ್ಗಳಲ್ಲಿನ ಬದಲಾವಣೆಗಳೊಂದಿಗೆ ಅವುಗಳಲ್ಲಿ ಕೆಲವನ್ನ ತೆರಿಗೆಯಿಂದ ವಿನಾಯಿತಿ ನೀಡಲಾಯಿತು. ಆರೋಗ್ಯ ಮತ್ತು ಆರೈಕೆ ಕ್ಷೇತ್ರಕ್ಕೆ ಪ್ರಮುಖ ಉತ್ತೇಜನವಾಗಿ, ಕ್ಯಾನ್ಸರ್ ವಿರುದ್ಧ ಹೋರಾಡುವ ಔಷಧಿಗಳು…

Read More

ನಿಶ್ಚಿತಾರ್ಥ ಆದ ಮೇಲೆ ಮತ್ತೆ ರದ್ದಾಯ್ತು, ಯುವತಿಯನ್ನ ಕೊಚ್ಚಿ ಕೊಲೆ ಮಾಡಿದ ಯುವಕ. ಎಲ್ಲಿ? ಹೇಗೆ? ನೋಡಿ

ಗುರುಗ್ರಾಮ: ನಿಶ್ಚಿತಾರ್ಥ ಮುರಿದು ಬಿದ್ದ ಸಿಟ್ಟಿನಿಂದ ಯುವಕನೊಬ್ಬನೆರೆಮನೆಯ ಯುವತಿಯನ್ನು ನಡು ರಸ್ತೆಯಲ್ಲೇ ಇರಿದು ಸಾಯಿಸಿದ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಸೆಕ್ಟರ್ 22 ಗ್ರಾಮದಲ್ಲಿ 19 ವರ್ಷದ ಯುವತಿಗೆ ಹಲವು ಬಾರಿ ಇರಿದಿದ್ದು ಯುವತಿ ತನ್ನ ತಾಯಿಯ ತೋಳಲ್ಲೇ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದು ಬಂದಿದೆ.‌ ರಾಜುಮಾರ್ (23) ಎಂಬ ವ್ಯಕ್ತಿ ಖಾಸಗಿ ಕಂಪನಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ನಿಶ್ಚಿತಾರ್ಥ ಮುರಿದು ಬಿದ್ದಸಿಟ್ಟಿನಿಂದ ಈತ ನೇಹಾ ಎಂಬ ಯುವತಿಯನ್ನು ಚಾಕುವಿನಿಂದ ಪದೇ ಪದೇ ಇರಿಯುತ್ತಿದ್ದಾಗ ಯುವತಿಯ ತಾಯಿ ನೆರವಿಗಾಗಿ ಅಕ್ಕಪಕ್ಕದವರ ಬಳಿ ಸಹಾಯ ಯಾಚಿಸಿದ್ದಾರೆ. ಆದರೆ ಘಟನೆಯನ್ನು ಕಿಟಕಿ ಹಾಗೂ ಬಾಲ್ಕನಿಯಿಂದ ನೋಡುತ್ತಿದ್ದ ನೆರೆಯವರು ಮಧ್ಯಪ್ರವೇಶಿಸುವ ಧೈರ್ಯ ತೋರಲಿಲ್ಲ ಎಂದು ಹೇಳಲಾಗಿದೆ. ರಾಜ್‌ ಹಾಗೂ ನೇಹ ಒಂದೇ ಕುಟುಂಬದವರಾಗಿದ್ದು ಉತ್ತರ ಪ್ರದೇಶದ ಬದುವಾನ್‌ ಜಿಲ್ಲೆಯ ಒಂದೇ ಗ್ರಾಮದವರಾಗಿದ್ದು, ಯುವತಿ ಅಕ್ಕಪಕ್ಕದ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದಳು ಎಂದು ಎಸಿಪಿ…

Read More