ಬಸ್ಸಿಗೆ ಬೆಂಕಿ ಹಾಕುತ್ತೇನೆ, ವಿಧಾನಸೌಧಕ್ಕೆ ಕಲ್ಲು ಎಸೆಯುತ್ತೇನೆʼ -ಪುನೀತ್ ಕೆರೆಹಳ್ಳಿ

”ರಾಜ್ಯ ಸರಕಾರ ನನ್ನ ಮನವಿ ಸ್ವೀಕರಿಸದಿದ್ದರೆ ಬಸ್ಸಿಗೆ ಬೆಂಕಿ ಹಾಕುತ್ತೇನೆ, ವಿಧಾನಸೌಧಕ್ಕೆ ಕಲ್ಲು ಎಸೆಯುತ್ತೇನೆ” ಎಂದು ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಹೇಳಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬೆಂಗಳೂರು ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ವಿಧಾನಸೌಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ರಾಜ್ಯ ಸರಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪುನೀತ್ ಕೆರೆಹಳ್ಳಿಯನ್ನು ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ಪೊಲೀಸರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ತನ್ನ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದ್ದ ಪುತ್ತೂರು‌ ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರ ನಿಯೋಗದೊಂದಿಗೆ ಮಾತನಾಡುತ್ತಿದ್ದ ಪುನೀತ್‌, ”ನಾನು ನಿಮಗೆ ನಿಮ್ಮ ತಮ್ಮನಾಗಿ ಬೇಕು ಅಂದ್ರೆ, ಕಾಂಗ್ರೆಸ್‌ ಸರಕಾರದ ಯಾವುದಾದರೂ ಪ್ರತಿನಿಧಿ ನನ್ನನ್ನು ಭೇಟಿಯಾಗಿ, ನನ್ನ ಮನವಿಯನ್ನು ಸೀಕರಿಸಬೇಕು. ಅವರು ಬರದೇ ಇದ್ದರೆ ಬಸ್ಸಿಗೆ ಬೆಂಕಿ ಹಾಕುವ… ಪೊಲೀಸರನ್ನು ಜಾಗ ಬಿಡಲಿಕ್ಕೆ ಹೇಳಿ,…

Read More

ವಿಚಾರಣೆ ವೇಳೆ ಶಂಕಿತ ಉಗ್ರರಿಂದ ಸ್ಪೋಟಕ ಹೇಳಿಕೇ : ಕೇವಲ ಬೆಂಗಳೂರು ಅಲ್ಲ ಇಡೀ ಕರ್ನಾಟಕವೇ ಟಾರ್ಗೆಟ್

ಬೆಂಗಳೂರು: ಬಂಧಿತ ಶಂಕಿತ ಉಗ್ರರ ಪಾತಕಿ ಕೃತ್ಯಗಳ ಪ್ಲಾನ್‍ಗಳು ಬಗೆದಷ್ಟೂ ಬಯಲಾಗ್ತಿದೆ. ಶಂಕಿತ ಉಗ್ರರ ಟಾರ್ಗೆಟ್ ಬೆಂಗಳೂರು ಮಾತ್ರ ಅಲ್ಲ, ಇಡೀ ಕರ್ನಾಟಕದಲ್ಲೇ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಕೋಮುಗಲಭೆ ಸೃಷ್ಟಿಸಿ ನರಮೇಧಕ್ಕೆ ಷಡ್ಯಂತ್ರ ರೂಪಿಸಿರುವುದು ಎಂಬಂತಹ ಒಂದೊಂದೇ ಸ್ಫೋಟಕ ಸತ್ಯಗಳು ಕೇಂದ್ರ ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸಿದ ವೇಳೆ ಹೊರ ಬರುತ್ತಿರುವುದಾಗಿ ತಿಳಿದು ಬಂದಿದೆ. ಶಂಕಿತ ಉಗ್ರರು ರಾಜ್ಯಾದ್ಯಂತ ರಕ್ತಪಾತ, ನರಮೇಧ, ಪೈಶಾಚಿಕ ಕೃತ್ಯಕ್ಕೆ ಪಿತೂರಿ ಹೂಡಿದ್ದರು. ಕರಾವಳಿ, ಮಧ್ಯ ಕರ್ನಾಟಕದ ಮೇಲೂ ಶಂಕಿತ ಉಗ್ರರ ವಕ್ರದೃಷ್ಟಿ ಬಿದ್ದಿದೆ. ಕೋಮುಗಲಭೆ ನಡೆಯೋ ಸ್ಥಳಗಳನ್ನೇ ಶಂಕಿತರು ಹೆಚ್ಚು ಟಾರ್ಗೆಟ್ ಮಾಡಿದ್ದರು. ಬೆಂಗಳೂರು, ಮಂಗಳೂರು, ಶಿವಮೊಗ್ಗ, ಉಡುಪಿ, ಕಲಬುರಗಿ ಹಾಗೂ ಹುಬ್ಬಳಿಯಂತಹ ಕಡೆ ಟಾರ್ಗೆಟ್ ಮಾಡಿದ್ದರು. ಇದಕ್ಕಾಗಿ ಈ ಹಿಂದೆ ಎಲ್ಲೆಲ್ಲಿ ಕೋಮುಗಲಭೆ ನಡೆದಿದೆ ಅನ್ನೋ ಮಾಹಿತಿ ಸಂಗ್ರಹಿಸುತ್ತಿದ್ದರು. ಅಂತಹ…

Read More

ತಂದೆಯನ್ನೇ ಕೊಲೆ ಮಾಡಿದ ಮಗ: ಕಾರಣ ಕೇಳಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ

ಆತ ಬಿಎಂಟಿಸಿಯಲ್ಲಿ ನಿವೃತ್ತ ನೌಕರ, ನಿವೃತ್ತಿ ದಿನದ ವರೆಗೂ ತನ್ನ ಕುಟುಂಬಕ್ಕಾಗಿ ಗಾಣದೆತ್ತಿನಂತೆ ದುಡಿದು ಮನೆ ಕಟ್ಟಿದ್ದ, ನಿವೃತ್ತಿ ನಂತರವೂ ಸ್ವಾಭಿಮಾನದಿಂದ ಆಟೋ ಓಡಿಸಲು ಮುಂದಾಗಿದ್ದ, ಆದ್ರೆ ಆತನ ಬದುಕಲ್ಲಿ ಮಗ ವಿಲನ್ ಆಗಿದ್ದು, ತಂದೆಯನ್ನ ಕೊಲೆ ಮಾಡಿ ಮುಗಿಸಿಬಿಟ್ಟಿದ್ದಾನೆ. ಬೆಂಗಳೂರು ಉತ್ತರ ತಾಲೂಕು ಮಾದನಾಯಕನಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯ ವಡ್ಡರಹಳ್ಳಿ ನಿವಾಸಿ ಕೃಷ್ಣಮೂರ್ತಿ (63) ಹಣದ ವಿಚಾರದಲ್ಲಿ ತನ್ನ ಮಗ ಅರ್ಜುನ್ ಜತೆ ಜಗಳವಾಡಿ ಮಗ ಹೊಡೆದ ಏಟಿಗೆ ಉಸಿರುಚೆಲ್ಲಿದ್ದಾನೆ. ಬಿಎಂಟಿಸಿ ನಿವೃತ್ತ ನೌಕರ ಕೃಷ್ಣಮೂರ್ತಿ ತನ್ನ ಸ್ವಂತ ಮಗ ಅರ್ಜುನ್‌ನಿಂದ ಕೊಲೆಯಾಗಿ ಹೋಗಿದ್ದಾನೆ. ಹೌದು ಮೃತ ಕೃಷ್ಣಮೂರ್ತಿ ಬಿಎಂಟಿಸಿಯಲ್ಲಿ ಹಿರಿಯ ಹುದ್ದೆಯಿಂದ ನಿವೃತ್ತಿ ಹೊಂದಿದ್ದರು.  ನಿವೃತ್ತಿ ವೇಳೆ ಬಂದ ಹಣದಲ್ಲಿ ವಡ್ಡರಹಳ್ಳಿಯಲ್ಲಿ ಸೈಟ್ ಖರೀದಿ ಮಾಡಿದ್ದಾನೆ. ಮನೆ ಕಟ್ಟಲು ಶುರು ಮಾಡಿದಾಗ ಹಣಕಾಸಿನ ತೊಂದರೆ ಉಂಟಾಗಿದೆ ಈ ವೇಳೆ ಹಣ ಹೊಂದಿಸುವಂತೆ ಮನನಿಗೆ ತಿಳಿಸಿದ್ದಾನೆ.…

Read More

ಮಗನಿಗೆ ಬೆಂಕಿ ಹಚ್ಚಿ ಕೊಂದ ತಾಯಿ, ಕೊಲೆಗೆ ನಡೆದದ್ದು ಹೇಗೆ? ಕೊಲೆಗೆ ಕಾರಣ ಏನು?

ಬೆಂಗಳೂರು: ಆತ ಕುಡಿತದ ದಾಸನಾಗಿದ್ದ, ಕುಡಿದ ಅಮಲಿನಲ್ಲಿ ರಸ್ತೆ ಚರಂಡಿ ಖಾಲಿ ನಿವೇಶನ ಎಲ್ಲೆಂದರಲ್ಲಿ ಬಿದ್ದು ಹೊರಳಾಡುತ್ತಿದ್ದ, ಇದನ್ನೆ ಕೇಳಿ ನೋಡಿ ಸರಿಮಾಡಿ ತಾಯಿಗೆ ಬೇಸತ್ತು ಹೋಗಿತ್ತು, ಇವತ್ತು ಮಗನ್ನ ಎದುರಿಸಸಲು ಹೋಗಿ ತಾಯಿ ಇಟ್ಟು ಬೆಂಕಿಗೆ ಮಗ ಆಹುತಿಯಾಗಿಬಿಟ್ಟ ಸೂಫಿಯಾ ಬಿ ತನ್ನ ಮಗ ಚಾಂದ್ ಪಾಷನನ್ನ ಹೆದರಿಸಲು ಹೋಗಿ ಬೆಂಕಿಯೆ ಕೆನ್ನಾಲಿಗೆಗೆ ಮಗ ಚಾಂದ್ ಪಾಷ ಸುಟ್ಟು ಕರಕಲಾಗಿದ್ದಾನೆ. ಈ ಘಟನೆ ನಡೆದಿರೋದು ಬೆಂಗಳೂರು ಉತ್ತರ ತಾಲೂಕು ಸೋಲದೇವನಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯ ಚಿಕ್ಕಬಾಣವಾರ ಗ್ರಾಮದಲ್ಲಿ. ಹೌದು ಎಷ್ಟೇ ಆಗಲಿ ಹೆತ್ತವರಿಗೆ ಹೆಗಣವೇ ಮುದ್ದು ಅನ್ನೊಂಗೆ ಈ ಮೃತ ಮಗನ ತನ್ನ ತಾಯಿ ಆರೋಪಿ ಸೂಫಿಯಾ ಭಿ ಗೆ ಎಲ್ಲಿಲ್ಲದ ಪ್ರೀತಿ. ಕುಡಿತದ ದಾಸನಾಗಿದ್ದ ಚಾಂದ್ ಪಾಷ ಕಳೆದ ಹತ್ತು ವರ್ಷಗಳ ಹಿಂದೆಯೇ ತನ್ನ ಹೆಂಡತಿಯನ್ನ ತೊರೆದು ಬಂದು ತಾಯಿ ಜೊತೆ ಸೇರಿಕೊಂಡಿದ. ನಿತ್ಯ…

Read More

ಟೆಕ್ಕಿ ಗಾಜು ಪುಡಿ ಪುಡಿ ಮಾಡಿದ ಪುಂಡರು: ಕಾರಣ ಇಷ್ಟು ಸಿಲ್ಲಿನಾ?

ಆ ಪುಂಡರು ಕಂಡ ಕಂಡವರನ್ನ ರೇಗಿಸೋದೆ ಕೆಲಸ ಮಾಡ್ಕೊಂಡಿದ್ರು, ಟೆಕ್ಕಿಯೊಬ್ಬರನ್ನ ಮಾತನಾಡಿಸೋಕೆ ಹೋಗಿ ನಂಬರ್ ಕೇಳಿದ್ದಾರೆ, ನಂಬರ್ ಕೊಡಲ್ಲ ಎಂದಿದ್ದಕ್ಕೆ ಮನೆ ಬಳಿ ತೆರಳ್ಳಿ ಅವರ ಕಾರಿನ ಗ್ಲಾಸ್ ಪೀಸ್ ಪೀಸ್ ಮಾಡಿದ್ದಾರೆ. ಆ ಏರಿಯಾದಲ್ಲಿ ಒಮ್ಮೆ ನಡೆದುಕೊಂಡು ಬರುವ ಇಬ್ಬರು ವ್ಯಕ್ತಿಗಳು ಕಲ್ಲು ತೆಗೆದುಕೊಂಡು ಕಾರಿನ ಗಾಜಿನ ಹಿಂಬದಿಗೆ ತೂರಿ ಒಡೆಯುತ್ತಾರೆ ಇದಾದ ಐದೇ ನಿಮಿಷಗಳಲ್ಲಿ ಮತ್ತಿಬ್ಬರು ಬಂದು ಬೈಕ್‌ನಲ್ಲಿ ತಂದ ಇಂದು ಕಲ್ಲ‌ನ್ನ ಕಾರಿನ‌ ಗಾಜಿನ ಮೇಲೆ ಎಸೆಸು ಪರಾರಿಯಾಗ್ತಾರೆ,  ಇದ್ಯಾವ್ದೋ ಹಳೇ ದ್ವೇಷ ರೋಷ ಆವೇಷ ಆಕ್ರೋಶ ಅನ್ಸುತ್ತೆ, ಈ ರೀತಿ ಪುಂಡರು ಗಾಜು ಹೊಡೆದಿರುವುದು ಒಂದು ಸಿಲ್ಲಿ ರೀಸನ್‌ಗೆ. ಘಟನೆ ನಡೆದಿರುವುದು ಪೀಣ್ಯ ಪೊಲೀಸ್ ಠಾಣ ವ್ಯಾಪ್ತಿಯ ಬೃಂದಾವನ ಬಡಾವಣೆಯಲ್ಲಿ, ಒಂದು ಮೊಬೈಕ್ ನಂಬರ್ ವಿಚಾರಕ್ಕೆ ಈಗೆ ಗಾಜು ಹೊಡೆದು ಪುಡಿ ಪುಡಿ ಮಾಡಿದ್ದಾರೆ. ಮಹಿಳಾ ಟೆಕ್ಕಿಯೊಬ್ಬರು ಕೆಲಸ ಮುಗಿಸಿಕೊಂಡು ಮನಗೆ…

Read More

ಮಾನಸಿಕ ಅಸ್ವಸ್ಥತೆಯನ್ನ ಬಿಡದೆ ಹತ್ಯಾಚಾರ ಮಾಡಿದ್ದ ಆರೋಪಿ: 10 ಪಟ್ಟು ಶಿಕ್ಷೆ ಹೆಚ್ಚಳ

ಬೆಂಗಳೂರು: ಮಾನಸಿಕ ಅಸ್ವಸ್ಥೆ ಮತ್ತು ಮಾತು ಬಾರದ ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಂತ್ರಸ್ತ ಪರಿಹಾರ ಯೋಜನೆಯಡಿ ಕರ್ನಾಟಕ ಉಚ್ಚ ನ್ಯಾಯಾಲಯವು 10.50 ಲಕ್ಷ ರು. ಪರಿಹಾರ ಹೆಚ್ಚಿಸಿ ತೀರ್ಪು ನೀಡಿದೆ. ಮಾನಸಿಕ ಅಸ್ವಸ್ಥೆ ಮತ್ತು ಮಾತು ಬಾರದ ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಂತ್ರಸ್ತ ಪರಿಹಾರ ಯೋಜನೆಯಡಿ ಕರ್ನಾಟಕ ಉಚ್ಚ ನ್ಯಾಯಾಲಯವು 10.50 ಲಕ್ಷ ರು. ಪರಿಹಾರ ಹೆಚ್ಚಿಸಿ ತೀರ್ಪು ನೀಡಿದೆ. ಪೋಕ್ಸೊ ಕಾಯಿದೆಯ ಅಡಿಯಲ್ಲಿ ಬಾಲಕಿಗೆ ಪರಿಹಾರ ನೀಡಬೇಕು ಎಂದಿರುವ ಹೈಕೋರ್ಟ್,ವಿಶೇಷ ನ್ಯಾಯಾಲಯದ ಆಶಯಗಳು ಮತ್ತು ಕಲ್ಪನೆಗಳನ್ನು ಆಧರಿಸಿರಬಾರದು. 2020 ರ ನಿಯಮ 9 ರ ಆಧಾರದ ಮೇಲೆ ನಿರ್ಧರಿಸಬೇಕು ಮತ್ತು ರಾಷ್ಟ್ರೀಯ ಕಾನೂನ ಸೇವೆಗಳ ಪ್ರಾಧಿಕಾರದ ನಿಯಮವನ್ನು ಅನುಸರಿಸಬೇಕು ಎಂದು ನ್ಯಾಯಮೂರ್ತಿ ಅನಿಲ್ ಬಿ ಕಟ್ಟಿ ಹೇಳಿದ್ದಾರೆ. ಕಾರವಾರದ ವಿಶೇಷ ನ್ಯಾಯಾಲಯವು…

Read More

ಮಗಳು ವಂಶಿಕಾ ಹೆಸರು ಬಳಸಿ ಹಣ ವಸೂಲಿ ಪ್ರಕರಣ: ನಟ ಆನಂದ್‌ ಏನಂದ್ರು!?

ಬೆಂಗಳೂರು: ಕಿರುತೆರೆ ರಿಯಾಲಿಟಿ ಶೋ ಸ್ಟಾರ್‌, ಸೋಷಿಯಲ್‌ ಮೀಡಿಯಾದಲ್ಲಿ ದೂಳೆಬ್ಬಿಸಿರುವ ಪುಟಾಣಿ ವಂಶಿಕ ಹೆಸರು ಬಳಸಿಕೊಂಡು ಹಣ ವಸೂಲಿ ಮಾಡಿರುವ ಆರೋಪದಲ್ಲಿ ವಂಶಿಕ ತಂದೆ ಮಾಸ್ಟರ್‌ ಆನಂದ್‌ ಸದಾಶಿವನಗರ ಪೊಲೀಸ್‌ ಠಾಣೆಯ ಬಳಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ದುಡ್ಡು ಇಸ್ಕೊಂಡ್ ಚಾನ್ಸ್ ಕೊಡೊದು ಈ ಪ್ರಪಂಚದಲ್ಲೇ, ಆರೋಪಿಗಳು ಇನ್ಸಾಟ್ರಾಗಾಮ್ ನಲ್ಲಿ ಎಲ್ಲರಿಗೂ ಮೇಸೆಜ್ ಮಾಡಿದ್ದಾರೆ, ನಿಶಾ ನರಸಪ್ಪ ಮೇಸೆಜ್ ಮಾಡಿ ಆಸೆ ತೋರಿಸಿದ್ದಾರೆ ಇದನ್ನು ನಂಬಿ ಜನರು ಹಣ ಹಾಕಿದ್ದಾರೆ. ನಮ್ಮ ಮಗಳ ಹೆಸರು ಮೀಸ್ ಯೂಸ್ ಆಗಿದೆ ಪೋಷಕರು ಕಣ್ಣು ಮುಚ್ಚಿ ಸಹಿ ಹಾಕಿದ್ದಾರೆ ನಾನ್ ರಿಪೆಂಡ್ ಮಾಡಲ್ಲ ಅಂತ ಕಂಡಿಷನ್ ಇರುತ್ತೆ ಸೊಷಿಯಲ್ ಮೀಡಿಯಾ ನಂಬಿ ಮೋಸ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ. ನನ್ನ ಮಗಳು ಪತ್ನಿ ಯಶಸ್ವಿನಿ ಎರಡು ಇವೆಂಟ್ ಗೆ ಹೋಗಿದ್ದಾರೆ ಯಾರು ಹಣ ಕೊಟ್ರೇ, ಸಿನಿಮಾದಲ್ಲಿ ಚಾನ್ಸ್ ಕೊಡ್ತಾರೇ ಅನ್ನೋದು…

Read More

ಪ್ರೀತಿಸಿ ಮದುವೆಯಾದ ಯುವಕನಿಗೆ ಯುವತಿ ಕುಟುಂಬಸ್ಥರಿಂದ ಹಲ್ಲೆ

ಬೆಂಗಳೂರು: ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಜೋಡಿಗೆ ಯುವತಿಯ ಪೋಷಕರು ನಿರಂತರ ಕಿರುಕುಳ ನೀಡುತ್ತಿದ್ದು, ಇದೇ ವಿಚಾರದಲ್ಲಿ ಯುವಕನಿಗೆರ ಯುವತಿಯ ಪೋಷಕರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ವರ್ತೂರು ಪೊಲೀಸ್‌ ಠಾಣ ವ್ಯಾಪ್ತಿಯ ಮುರುಳಿ(25)ಕೃತಿಕಾ(19) ಪ್ರೀತಿಸಿ ಮದುವೆ ಮಾಡಿಕೊಂಡಿದ್ದರು. ಇದೇ ವಿಚಾರಕ್ಕೆ ಎರಡು ದಿನಗಳ ಹಿಂದೆ ಯುವತಿ ಸೋದರ ಮಾವ ಸೋದರ ಮಾವ ನಾಗರಾಜು,ಸಂಬಂಧಿ ಮಂಜುನಾಥ್ ಸೇರಿ ಮೂವರಿಂದ ಯುವಕನ ಮುರುಳಿ ಮೇಲೆ ಲಾಂಗ್‌ ನಿಂದ ಹಲ್ಲೆ ನಡೆದಿದೆ. ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರೋ ಘಟನೆ ನಡೆದಿದ್ದು ಯುವಕನಿಗೆ ಮಾರಣಾಂತಿಕ ಹಲ್ಲೆಯಾಗಿದೆ ಎಂದು ಯುವತಿ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ಸದ್ಯ ಆರೋಪಿ ಮಂಜುನಾಥ್ ನನ್ನು ವರ್ತೂರು ಪೊಲೀಸರು ಬಂಧಿಸಿದ್ದು ಪ್ರಮುಖ ಆರೋಪಿ ನಾಗರಾಜ್ ಎಸ್ಕೇಪ್ ಆಗಿರುವ ಹಿನ್ನೆಲೆ ಹುಡುಕಾಟ ನಡೆಸಿದ್ದಾರೆ.

Read More

ಲಾರಿ ಕಳ್ಳತನ ಮಾಡುತ್ತಿದ್ದವನು ಅರೆಸ್ಟ್!? ಕದ್ದ ಲಾರಿಯನ್ನ ಮಾರಾಟ ಮಾಡುತ್ತಿದ್ದದು ಹೇಗೆ!?

ಬೆಂಗಳೂರು: ಲಾರಿಗಳನ್ನ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಅರೊಪಿಯನ್ನ ವಿವಿ ಪುರಂ ಪೊಲೀಸರು ಬಂದಿಸಿದ್ದು ತಮಿಳುನಾಡು ಮೂಲದ  ಮುತ್ತುರಾಜ್ ಬಂಧಿತ ಆರೋಪಿ, ಪಾರ್ಕಿಂಗ್ ಲಾಟ್‌ಗಳಲ್ಲಿ ನಿಲ್ಲಿಸುವ ಲಾರಿಗಳನ್ನೆ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಐನಾತಿ ಕಳ್ಳನ ಬಂಧನವಾಗಿದೆ. ಎಂಜಿನ್ ಟ್ಯಾಪರಿಂಗ್: ಬೆಂಗಳೂರಿನ ಹಲವೆಡೆ ಪಾರ್ಕಿಂಗ್‌ಗಳಲ್ಲಿ ಕಳ್ಳತನ ಮಾಡುತ್ತಿದ್ದ ಮುತ್ತುರಾಜ್ ಕದ್ದ ಲಾರಿಗಳನ್ನ ಸ್ನೇಹಿತರ ಮೂಲಕ ಮಾರಾಟ ಮಾಡುತ್ತಿದ್ದ. ಆರೋಪಿ ಮುತ್ತುರಾಜ್‌ನ ಓರ್ವ ಸ್ಬೇಹಿತ ಇಂಜಿನ್ ಮತ್ತು ಚಾಸಿಸ್ ನಂಬರ್ ಟ್ಯಾಂಪರಿಂಗ್ ಮಾಡುತ್ತಿದ್ದ ಹಾಗೂ ಮತ್ತೊಬ್ಬ ಅಸಾಮಿ ಲಾರಿಗೆ ಸಂಬಂಧಿಸಿದ ನಕಲಿ ದಾಖಲೆ ಸೃಷ್ಟಿಸುತ್ತಿದ್ದೆ‌. ಐಷಾರಾಮಿ ಜೀವನಕ್ಕೆ ಕಳ್ಳತನ: ಕ್ಷಣಾರ್ಧದಲ್ಲಿ ಲಾರಿ ಕಳ್ಳತನ ಮಾಡುತ್ತಿದ್ದ ಮುತ್ತುರಾಜ್ ಹಾಗೂ ಗ್ಯಾಂಗ್ ಬಂದ ಹಣದಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದರು.ಬಂಧಿತನಿಂದ 1.5 ಕೋಟಿ ಮೌಲ್ಯದ ಮೂರು ಲಾರಿಗಳು ವಶಕ್ಕೆ ಪಡೆಯಲಾಗಿದೆ. 1000ಕ್ಕೂ ಅಧಿಕ ಸಿಸಿ ಕ್ಯಾಮೆರಾ ಪರಿಶೀಲನೇ: ಇನ್ನೂ ಲಾರಿ ಕಳ್ಳತನ ಪ್ರಕರಣ…

Read More

Bengaluru: ಒಂದು ಸಣ್ಣ ತಪ್ಪು ಇಬ್ಬರ ಪ್ರಾಣ ಕಳೀತು, ಏನು? ಎಲ್ಲಿ? ಹೇಗೆ? ಕಾರಣ? ಯಾರು?

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ವಿದ್ಯುತ್ ಕಂಬಕ್ಕೆ (Electric pole) ಬೈಕ್ ಡಿಕ್ಕಿ (Bike Accident) ಹೊಡೆದ ಹಿನ್ನೆಲೆ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರೂಣ ಘಟನೆಗೆ ನಡೆದಿದೆ. ದುಡಿದು ಕುಟುಂಬಕ್ಕೆ ಆಧಾರಸ್ಥಂಭ ಆಗಬೇಕಿದ್ದ ಚಂದು (21) (Chandu), ಮೋಹನ್ ಕುಮಾರ್ (21) (Mohan Kumar), ಇಬ್ಬರು ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಸುಂಕದಕಟ್ಟೆಯ (Sunkadakatte) ಕಾಲೇಜು ಬಸ್ ಸ್ಟಾಪ್ (College Bus Stop) ಬಳಿ ಅಪಘಾತ ಸಂಭವಿಸಿದೆ.‌ ಹೆಲ್ಮೆಟ್ ಇಲ್ಲದ್ದಕ್ಕೆ ಸಾವು: ಹೆಲ್ಮಟೆ ಇಲ್ಲದೇ (without Helmet) ಪಲ್ಸರ್ ಬೈಕ್ (Pulsur Bike) ನಲ್ಲಿ ವೇಗವಾಗಿ ತೆರಳುತಿದ್ದ ಸವಾರರು, ನೈಸ್ ರಸ್ತೆ (Nice Road) ಕಡೆಯಿಂದ ಸುಂಕದಕಟ್ಟೆ ಕಡೆಗೆ ತೆರಳುತಿದ್ದರು, ಈ ವೇಳೆ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ ಇಬ್ಬರು ಸವಾರರ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.…

Read More