ಮಳೆಗಾಗಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು: ಜನರಲ್ಲಿ ಇದೆ ವಿಶಿಷ್ಟ ನಂಬಿಕೆ

ಧಾರವಾಡ: ಜಿಲ್ಲೆಯ ಕಲಘಟಗಿ ತಾಲೂಕಿನ ಸುರಶೆಟ್ಟಿಕೊಪ್ಪ ಗ್ರಾಮದಲ್ಲಿ ವಿಶಿಷ್ಟ ಆಚರಣೆ ನಡೆದಿದೆ, ಮಳೆ ಆರಂಭಕ್ಕೆ ತಡವಾದ ಬೆನ್ನೆಲ್ಲೇ ಗ್ರಾಮಸ್ಥರು ಕಪ್ಪೆಗಳ ಮದುವೆ ಮಾಡಿದ್ದಾರೆ. ಪೂರ್ವಜರ ನಂಬಿಕೆಯಲ್ಲಿ ವಿಶ್ವಾಸವಿಟ್ಟ ಗ್ರಾಮಸ್ಥರಿಂದ ಕಪ್ಪೆಗಳಿಗೆ ಮದುವೆ ಮಾಡಲಾಗಿದ್ದು, ಗ್ರಾಮದ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಉಡಿ ತುಂಬಿದ ಮುತ್ತೈದೆಯರುಕಪ್ಪೆಗಳಿಗೆ ಅರಿಶಿನ ಹಚ್ಚಿ, ಸುರಗಿ ನೀರೆರೆದು, ಹಾಸಕ್ಕಿ ಹಾಕಿ, ಕಪ್ಪೆಗಳಿಗೆ ತಾಳಿ ಕಟ್ಟಿಸಿದ್ದಾರೆ ಗ್ರಾಮಸ್ಥರು. ಭಕ್ತರಿಗೆ ಅನ್ನ ಪ್ರಸಾದವನ್ನ ಏರ್ಪಡಿಸಿ ‘ಮಳೆರಾಯ ಬೇಗ ಬಾ’ ಅಂತಾ ವಿಶೇಷ ನಮನ ಸಲ್ಲಿಸಿ ಅರಿಶಿಣಶಾಸ್ತ್ರ, ಹಂದರ ಶಾಸ್ತ್ರ ನೆರವೇರಿಸಿದ್ದಾರೆ. ವಿವಿಧ ವಾದ್ಯ ಮೇಳಗಳೊಂದಿಗೆ ಕಪ್ಪೆಗಳನ್ನ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ.

Read More

ನೆಲದಲ್ಲಿ ಅವಿತಿದ್ದ 25 ನಾಗರ ಹಾವಿನ‌ ಮರಿ ಪತ್ತೆ

ಧಾರವಾಡ: ಭೂಮಿ ಒಳಗೆ ಅವಿತಿದ್ದ 25 ನಾಗರ ಹಾವಿನ ಮರಿಗಳನ್ನ ಹೊರ ತೆಗೆದಿದ್ದು, ಹಾವಿನ ಮರಿಗಳನ್ನ ಕಂಡ ಜನ ಹೌಹಾರಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ನಡೆದ ಘಟನೆ ನಡೆದಿದ್ದು, ನಾಗರ ಹಾವಿನ ಮರಿಗಳು ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ತಾಯಿ ನಾಗರ ಹಾವಿನ ಹಿಂದೆಯೇ ನೆಲದಿಂದ 25ಕ್ಕೂ ಹೆಚ್ಚು ‌ಮರಿ ನಾಗರ ಹಾವುಗಳು ಹೊರಬಂದಿದ್ದು, ಈ ಎಲ್ಲ ದೃಶ್ಯ ಗ್ರಾಮಸ್ಥರು ಮೊಬೈಲ್‌ಗಳಲ್ಲಿ ಸೆರೆ ಹಿಡಿದಿದ್ದಾರೆ. ಹಿರೇಹರಕುಣಿ ಗ್ರಾಮದ ಬಸವರಾಜ ಕಟ್ಟಮನಿ ಎಂಬುವವರು ‌ಮನೆಯ ಹಿತ್ತಲಲ್ಲಿ ನಾಗರ ಹಾವಿನ‌ ಮರಿಗಳು ಕಂಡು ಬಂದಿವೆ. ಕಳೆದ ಹಲವು ದಿನಗಳಿಂದ ಕಟ್ಟಿಮನಿ ಎಂಬುವವರ ಮನೆ ಬಳಿ ನಾಗರ ಹಾವು ಓಡಾಡುತ್ತಿತ್ತು, ಇದನ್ನ ಕಂಡ ಬಸವರಾಜ ಕಟ್ಟಮನಿ ಅವರು ಉರಗ ತಜ್ಞನಿಗೆ ಕರೆಸಿ ಹಾವು ಹಿಡಿಸಿದ್ದಾರೆ. ಸಂರಕ್ಷಿಸಿದ ಹಾವನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ.

Read More

ಹಸೆಮಣೆ ಏರಬೇಕಿದ್ದ ವರ ಫಿನೀಶ್: ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ

ಹುಬ್ಬಳ್ಳಿ (ಜೂ 6): ಹುಬ್ಬಳ್ಳಿಯ ಕಲಘಟಗಿಯಲ್ಲಿ ಹಸಮಣೆ ಏರಬೇಕಿದ್ದ ವರ ಕೊಲೆಯಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕೇವಲ ಎರಡೇ ದಿನದಲ್ಲಿ ಕಲಘಟಗಿ ಪೊಲೀಸರು ಪ್ರಕರಣ ಭೇದಿಸಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ: ಹುಬ್ಬಳ್ಳಿಯ ಕಲಘಟಗಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಕಲಘಟಗಿ ತಾಲೂಕಿನ ಜಿನ್ನೂರು ಗ್ರಾಮದ ಹೊಲದಲ್ಲಿನ ದಬದ ಶೆಡ್‌ನಲ್ಲಿ ಇದೇ ಗ್ರಾಮದ 33 ವರ್ಷದ ನಿಂಗಪ್ಪ ನವಲೂರ ಎನ್ನುವ ಯುವಕನ ಕೊಲೆ ನಡೆದಿದ್ದು, ಕಣ್ಣಿಗೆ ಕಾರದ ಪುಡಿ ಎರಡಿ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿತ್ತು. ಎರಡು ದಿನದಲ್ಲಿ ಆರೋಪಿಗಳು ಪತ್ತೆ: ಮೃತ ಯುವಕ‌ ನಿಂಗಪ್ಪ ನವಲೂರ ಜೂನ್ 7 ರಂದು ಹಸೆಮಣೆ ಏರಬೇಕಿತ್ತು, ಆದ್ರೆ ವಿಧಿ ಅವನ ಬಾಳಲ್ಲಿ ಆಟ ಆಡ್ತು. ಹಸಮಣೆ ಏರಬೇಕಿದ್ದ ನವ ಯುವಕ ಸ್ನಶಾಣ ಸೇರಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಕಲಘಟಗಿ ಪೊಲೀಸರು ಕೇವಲ ಎರಡೇ ದಿನದಲ್ಲಿ ಆರೋಪಿಗಳನ್ನ ಸೆದೆ ಬಡಿದಿದ್ದಾರೆ. ಅನೈತಿಕ…

Read More