ಯಾವ ಬ್ರಾಹ್ಮಣರು ಒಂದು ರೂಪಾಯಿ ಕೊಟ್ಟು ಹೂವು, ಊದಿನಕಡ್ಡಿ ತರೋದಿಲ್ಲ: ಕೆ.ಎನ್ ರಾಜಣ್ಣ

k n rajanna digital varthe

ದಾವಣಗೆರೆ: ಯಾವ ಬ್ರಾಹ್ಮಣರು ಕೂಡ ಒಂದು ರೂಪಾಯಿ ಕೊಟ್ಟು ಊದಿನಕಡ್ಡಿ ತರೋದಿಲ್ಲ, ಹಚ್ಚೋದಿಲ್ಲ ಎಂದು  ಸಹಕಾರ ಸಚಿವ ಕೆ.ಎನ್‌. ರಾಜಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದಾವಣಗೆರೆ ಜಿಲ್ಲೆ, ಹರಿಹರ ತಾಲೂಕಿನ ರಾಜನಹಳ್ಳಿ‌ ವಾಲ್ಮೀಕಿ ಪೀಠದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಯಾರನ್ನೂ ಮೇಲ್ವರ್ಗದವರೆಂದು ಕರೆಯಬಾರದು, ಹಾಗೆ ಕರೆದರೆ ನಾವು ಕೆಳವರ್ಗದವರು ಎಂದಾಗುತ್ತದೆ. ನಾವೇನು ಕೆಳವರ್ಗದವರಾ ಎಂಬಿತ್ಯಾದಿ ವ್ಯಾಖ್ಯಾನಗಳನ್ನು ಮಾಡಿದ ಅವರು ಈಗಿನ ಸಾಮಾಜಿಕ ಸ್ಥಿತಿಗತಿಗಳನ್ನು ವಿವರಿಸುತ್ತಾ ಮೇಲಿನ ಮಾತನ್ನು ಹೇಳಿದರು. ಬ್ರಾಹ್ಮಣರು ಈಗ ಹೋಮ ಹವನ ಕಡಿಮೆ ಮಾಡಿದ್ದಾರೆ. ಆದರೆ ನಾವೇ ಶೂದ್ರರೇ ಹೆಚ್ಚು ಹೋಮ, ಹವನ ಮಾಡುತ್ತಿದ್ದೇವೆ. . ಅವರು ಒಂದು ರೂಪಾಯಿ ಖರ್ಚು ಮಾಡಿ ಹೂವ, ಊದುಬತ್ತಿ ತರಲ್ಲ, ಬೇರೆಯವರು ತಂದಿದ್ದರಲ್ಲಿ ಪೂಜೆ ಮಾಡ್ತಾರೆ, ಹೀಗೆ ಹೇಳಿದರೆ ನಾನು ಬ್ರಾಹ್ಮಣರ ವಿರೋಧಿ ಅಂತ ಅಲ್ಲ, ಇದು ನಾನು ಹೇಳಿದ್ದಲ್ಲ ನನ್ನ ಸ್ನೇಹಿತರು ಹೇಳಿದ್ದು ಎಂದರು.…

Read More

ಕ್ಯಾನ್ಸರ್ ಕಾರಣದಿಂದ ಪೊಲೀಸ್ ಇಲಾಖೆಯಲ್ಲಿ ಮತ್ತೊಂದು ಸಾವು – Digital Varthe

ಬೆಂಗಳೂರು: ಕ್ಯಾನ್ಸರ್ ಕಾರಣದಿಂದ ಬೆಂಗಳೂರಿನಲ್ಲಿ ಮತ್ತೋಂದು ಸಾವಿನ‌ ಪ್ರಕರಣ‌ ದಾಖಲಾಗಿದೆ, ಅಶೋಕನಗರ ಸಂಚಾರಿ ಠಾಣೆಯ ಹೆಡ್ ಕಾನ್ಸ್‌ಟೆಬಲ್ ಕುಮಾರ್ ತಾನು ವಾಸವಿದ್ದ ಕ್ವಾಟ್ರಸ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.‌ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಹೆಡ್ ಕಾನ್ಸ್ ಟೇಬಲ್ ಕುಮಾರ್  ನನ್ನಿಂದ ಮಗಳಿಗೂ ಕಾಯಿಲೆ ಹರಡಿದೆ ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಮಾರ್‌ರಿಂದ ತಮ್ಮ ಮಗಳಿಗೂ ಕ್ಯಾನ್ಸರ್ ರೋಗ ಹರಡಿತ್ತು ಎನ್ನಲಾಗುತ್ತಿದೆ, ತಾನು ಚಿಕಿತ್ಸೆ ಪಡೆಯೋ ಜೊತೆಯಲ್ಲಿ ಸಹ ಮಗಳಿಗೆ ಟ್ರೀಟ್ಮೆಂಟ್ ಕೊಡಿಸಿದ್ದರು. ಕುಮಾರ್ ಮಗಳು ಇತ್ತೀಚೆಗೆ ಚೇತರಿಸಿಕೊಳ್ಳುತ್ತಿದ್ದರು.ಆದರು ಸಹ ನನ್ನಿಂದಲೇ ಮಗಳಿಗೆ ಕ್ಯಾನ್ಸರ್ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಮೃತದೇಹದ ಅಂತ್ಯಕ್ರಿಯೆಯನ್ನು ಕುಟುಂಬಸ್ಥರ ನಿರ್ಧಾರದಂತೆ ದಾವಣಗೆರೆ ಜಿಲ್ಲೆ ಚೆನ್ನಗಿರಿಗೆ ತೆಗೆದುಕೊಂಡು ಹೋಗಲಾಗಿದೆ.

Read More