ಹಾಲಿನ ಪ್ರೋತ್ಸಾಹ ಧನ‌ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ: ಮೈದಹಳ್ಳಿ ಕಾಂತರಾಜು

ಮಧುಗಿರಿ : ರಾಜ್ಯದ ಹಾಲು ಉತ್ಪಾದಕರ ಹಿತದೃಷ್ಟಿಯಿಂದ 5 ರೂ ಹಾಗೂ ಪ್ರೋತ್ಸಾಹ ಧನವನ್ನು 2 ರೂಪಾಯಿಗಳಿಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೆ.ಎಂ.ಎಫ್ ನಿರ್ದೇಶಕ ಮೈದನಹಳ್ಳಿ ಕಾಂತರಾಜು (Maidahalli Kantharaju) ತಿಳಿಸಿದರು. ಪಟ್ಟಣದ ಹಿಂದೂಪುರ (Hindupura) ರಸ್ತೆಯ ಸಮೀಪವಿರುವ ಹಾಲು (Milk) ಶೀಥಲೀಕರಣ ಕೇಂದ್ರಕ್ಕೆ ಪ್ರಥಮಬಾರಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಬೆಲೆ ಹೆಚ್ಚಳದಿಂದಾಗಿ ಹಾಲು ಉತ್ಪಾದನೆಯಲ್ಲಿ ತೊಡಗಿರುವ ರೈತರು ಇತ್ತೀಚೆಗೆ ನಿರಾಸಕ್ತಿ ತೋರುತ್ತಿದ್ದು ಅವರ ಅಭಿವೃದ್ಧಿಗಾಗಿ ಸದಾ ರೈತರ ಪರವಾಗಿ ಕಾಳಜಿ ಹೊಂದಿರುವ ಸಹಕಾರ ಸಚಿವರಾದ ಕೆ.ಎನ್ ರಾಜಣ್ಣ (K N Rajanna) ನವರು ನೇರವಾಗಿ ಉತ್ಪಾದಕರ ಖಾತೆಗೆ ಹೆಚ್ಚಳದ ಹಣವನ್ನು ನೀಡುವ ಬಗ್ಗೆ ಪ್ರಮುಖವಾಗಿ ಸಭೆಯಲ್ಲಿ ಚರ್ಚಿಸಿದ್ದು ಶೀಘ್ರವಾಗಿ ಮುಖ್ಯ ಮಂತ್ರಿಗಳ ಬಳಿ ಕೆ ಎಂ ಎಫ್ ನ ಪದಾಧಿಕಾರಿಗಳ ನಿಯೋಗ ಭೇಟಿ ನೀಡಿ ಹಾಲಿನ ದರ ಹೆಚ್ಚಳಕ್ಕೆ ಪ್ರಸ್ತಾಪ…

Read More

ವಾಲ್ಮಿಕಿ ಸಮಾಜದಿಂದ ಶಾಸಕರು, ಸಚಿವರು, ಪರಿಷತ್ ಸದಸ್ಯರಿಗೆ ಅಭಿನಂದನಾ ಸಮಾರಂಭ: ಪುರುಷೋತ್ತಮ್

ಮಧುಗಿರಿ: ಜಿಲ್ಲಾ ವಾಲ್ಮೀಕಿ ಸಮಾಜದ ವತಿಯಿಂದ ನೂತನ ಸಚಿವರು , ಶಾಸಕರು , ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಸಮಾಜದ ಜಿಲ್ಲಾ ಅಧ್ಯಕ್ಷ ಪುರುಷೋತ್ತಮ್ ತಿಳಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಭಿನಂದನಾ ಸಮಾರಂಭದ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿ ನಂತರ ಮಾತನಾಡಿದ ಅವರು ತುಮಕೂರಿನ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಬೃಹತ್ ಅಭಿನಂದನಾ ಸಮಾರಂಭವನ್ನು ಶ್ರೀ ವಾಲ್ಮೀಕಿ ಪ್ರಸನ್ನಾಂದ ಪುರಿ ಸ್ವಾಮೀಜಿ , ಶಿಡ್ಲೇಕೋಣದ ಶ್ರೀ ಸಂಜಯ್ ಕುಮಾರ ಸ್ವಾಮೀಜಿ ಯವರ ದಿವ್ಯ ಸಾನಿಧ್ಯದೊಂದಿಗೆ ಜೂ.25 ರ ಭಾನುವಾರ ಬೆಳಗ್ಗೆ 10:30 ಘಂಟೆಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯದ ವಾಲ್ಮೀಕಿ ಸಮುದಾಯದ ನೂತನ ಸಚಿವರು , ಶಾಸಕರು , ವಿಧಾನ ಪರಿಷತ್ ಸದಸ್ಯರು ಮತ್ತು ಸಂಸದರನ್ನು ಜಿಲ್ಲಾ ಸಂಘ ಹಾಗೂ ನಾಯಕ ಸಂಘಟನೆ ಮತ್ತು ಸಂಸ್ಥೆ ಗಳ ವತಿಯಿಂದ ಅಭಿನಂದಿಸಲಾಗುತ್ತಿದ್ದು ,…

Read More

ತ್ಯಾಮಗೊಂಡ್ಲು ಲಕ್ಶ್ಮಿನಾರಾಯಣ ಟಿ ಎನ್ ರವರಿಗೆ ಡಾಕ್ಟರೇಟ್ ಪದವಿ.

ನೆಲಮಂಗಲ: ತ್ಯಾಮಗೊಂಡ್ಲು ಗ್ರಾಮದ ನಿವಾಸಿಗಳಾದ ನರಸಿಂಹಮೂರ್ತಿ.ಎಲ್ ಮತ್ತು ಲಕ್ಷ್ಮಮ್ಮ ದಂಪತಿಗಳ ಪುತ್ರರಾದ ಮತ್ತು ತುಮಕೂರಿನ ಶ್ರೀ ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಲಕ್ಷ್ಮಿನಾರಾಯಣ ಟಿ ಎನ್ ರವರಿಗೆ ತುಮಕೂರು ವಿಶ್ವವಿದ್ಯಾನಿಲಯ ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ಘೋಷಿಸಿದೆ. ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಚಿಕ್ಕಣ್ಣರವರ ಮಾರ್ಗದರ್ಶನದಲ್ಲಿ ಮಂಡಿಸಿದ “ಆದಿಚುಂಚನಗಿರಿ ಕ್ಷೇತ್ರವು ಮಹಿಳಾ ಸಬಲೀಕರಣಕ್ಕಾಗಿ ನೀಡಿರುವ ಕೊಡುಗೆಗಳು” ಎಂಬ ವಿಷಯದ ಮೇಲಿನ  ಸಂಶೋಧನಾ ಮಹಾ ಪ್ರಬಂಧಕ್ಕೆ ತುಮಕೂರು ವಿಶ್ವವಿದ್ಯಾನಿಲಯ ಪಿಎಚ್‌ಡಿ ಪ್ರಧಾನ ಮಾಡಿ ಗೌರವಿಸಿದೆ. ಗ್ರಾಮಸ್ಥರು ಮತ್ತು ವಿದ್ಯಾರ್ಥಿ ವೃಂದ, ಪ್ರಾಧ್ಯಾಪಕ ವರ್ಗದವರು ಲಕ್ಷ್ಮಿನಾರಾಯಣರನ್ನು ಅಭಿನಂದಿಸಿದ್ದಾರೆ.

Read More