Contaminated Water : ಕಾವಾಡಿಗರ ಹಟ್ಟಿ ವಿಷಜಲ ದುರಂತಕ್ಕೆ ಇನ್ನೊಂದು ಬಲಿ; ಒಟ್ಟು ಸಾವಿನ ಸಂಖ್ಯೆ 6+1ಕ್ಕೆ ಏರಿಕೆ

ಚಿತ್ರದುರ್ಗ: ಜಿಲ್ಲೆಯ ಕವಾಡಿಗರಹಟ್ಟಿ ವಿಷ ಜಲ ದುರಂತ ಪ್ರಕರಣದಲ್ಲಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಇದರೊಂದಿಗೆ ವಿಷಯುಕ್ತ ನೀರಿಗೆ ಬಲಿಯಾದವರ ಸಂಖ್ಯೆ 6+1 ಆಗಿದೆ. ಈ ಪ್ರಕರಣದಲ್ಲಿ ಇದುವರೆಗೆ ಮೂವರು ಪುರುಷರು ಮತ್ತು ಮೂವರು ಮಹಿಳೆಯರು ಮೃತಪಟ್ಟಿದ್ದರೆ, ತಾಯಿ ಗರ್ಭದೊಳಗೇ ಒಂದು ಮಗು ಕಣ್ಮುಚ್ಚಿದೆ. ಜುಲೈ 30ರಂದು ಭಾನುವಾರ ರಾತ್ರಿ ಚಿತ್ರದುರ್ಗ ಜಿಲ್ಲೆಯ ಕಾವಾಡಿಗರಹಟ್ಟಿಯ ಟ್ಯಾಂಕ್‌ನಿಂದ ಬಿಟ್ಟ ನೀರನ್ನು ಸೇವಿಸಿ 200ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಇವರ ಪೈಕಿ ಹಟ್ಟಿಯ ನಿವಾಸಿಗಳಾದ ಮಂಜುಳಾ, ರಘು, ಪ್ರವೀಣ, ರುದ್ರಪ್ಪ ಮತ್ತು ಪಾರ್ವತಮ್ಮ ಎಂಬ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಜತೆಗೆ ರಘು ಅವರ ಸೋದರಿ ಉಷಾ ಅವರ ಹೊಟ್ಟೆಯಲ್ಲಿದ್ದ ಎಂಟು ತಿಂಗಳು 10 ದಿನದ ಮಗು ಕೂಡಾ ಮೃತಪಟ್ಟಿದ್ದಾದೆ ಇದೀಗ ಚಿತ್ರದುರ್ಗ ತಾಲೂಕಿನ ಚಿಕ್ಕಪುರ ಗ್ರಾಮದ ಕರಿಬಸಪ್ಪ(35) ಎಂಬವರು ವಾಂತಿ ಬೇಧಿಯಿಂದಾಗಿ ಮೃತಪಟ್ಟಿದ್ದು ಸಾವಿನ ಸಂಖ್ಯೆ ಏಳಕ್ಕೇರಿಯಾದಂತಾಗಿದೆ. ಇವರು ಜುಲೈ 30, 31ರಂದು…

Read More