ಪ್ರತಿಯೊಬ್ಬ ನಾಗರೀಕರು ಭಾಷಾಭಿಮಾನವನ್ನು ಬೆಳೆಸಿಕೊಂಡಾಗ ಮಾತ್ರ ಭಾಷೆ ಮತ್ತಷ್ಟು ಉಳಿಯಲು ಸಾಧ್ಯ: ಮಣ್ಣೆಮೋಹನ್

ನೆಲಮಂಗಲ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ಸಾಹಿತ್ಯ ಪರಿಷತ್‌ನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರವನ್ನು ಉದ್ಧೇಶಿಸಿ ಮಾತನಾಡಿದರು. ಕನ್ನಡ ಭಾಷೆ ವಿಶ್ವಮಟ್ಟದಲ್ಲಿ ವಿಶೇಷ ಸ್ಥಾನಮಾನವನ್ನು ಪಡೆದುಕೊಂಡಿದ್ದು ಅದಾ ಗೌರವ ಪೂರಕವಾಗಿ ಕನ್ನಡ ಸಾಹಿತ್ಯ ಪರಿಷತ್ ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಬ್ಬರು ಭಾಷಾಭಿಮಾನವನ್ನು ಬೆಳೆಸಿಕೊಂಡಾಗ ಮಾತ್ರ ಭಾಷೆ ಮತ್ತಷ್ಟು ಪ್ರಭಲಗೊಳ್ಳಲು ಸಾಧ್ಯವಾಗಿದೆ. ನೆರೆಹೊರೆ ರಾಜ್ಯದಲ್ಲಿ ಭಾಷಾಭಿಮಾನ ಹೆಚ್ಚಾಗಿದ್ದು ನಮ್ಮ ರಾಜ್ಯ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬೇಕು. ರಾಜ್ಯದ ನಗರದ ಪ್ರದೇಶದಲ್ಲಿ ಕನ್ನಡ ಭಾಷೆಯನ್ನು ಬಳಕೆ ಮಾಡುವ ಜನ ಕಡಿಮೆ ಇದ್ದಾರೆ. ಸಮಾಜದ ಅಭಿವೃದ್ಧಿ ಸೇರಿದಂತೆ ಕನ್ನಡ ಅಭಿವೃದ್ಧಿ ಪ್ರತಿಯೊಬ್ಬರು ಶ್ರಮಿಸಬೇಕಿದೆ. ಸಾಹಿತ್ಯ ಪರಿಷತ್ ಸಂಸ್ಥಾಪಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಲೋಚನೆ ಪ್ರತಿಯೊಬ್ಬ ಅರ್ಥ ಮಾಡಿಕೊಳ್ಳಬೇಕು ಎಂದರು. ಕನ್ನಡ ಸಾಹಿತ್ಯ ಪರಿಷತ್ ರಾಜ್ಯಪ್ರತಿನಿಧಿ ಡಾ.ಎಲ್.ಕೃಷ್ಣಮೂರ್ತಿ ಮಾತನಾಡಿ ಭಾಷೆಗೆ ಯಾವುದೇ ಜಾತಿ ತರತಮ್ಯ ವಿಲ್ಲ. ಪ್ರತಿಯೊಬ್ಬರು ಭಾವನೆಯನ್ನು ವ್ಯಕ್ತ ಪಡಿಸುವ…

Read More

ಸಿಜಿಕೆ ರಂಗ ಪ್ರಶಸ್ತಿ ರಾಜ್ಯ ಕಂಡ ಶ್ರೇಷ್ಠ ಜಾನಪದ ಗಾಯಕ ಸಿ.ಸಿದ್ದಯ್ಯ ಮುಡಿಗೆ

c siddhaiah

ಸಿದ್ದಯ್ಯ ಸಿ.ಹೆಚ್ ಇವರು ಕರ್ನಾಟಕ ಬೀದಿನಾಟಕ ಅಕಾಡೆಮಿ ಹಾಗು ರಂಗ ಶಿಕ್ಷಣ ಕೇಂದ್ರ ನೀಡುವ 2023ನೇ ಸಾಲಿನ ರಾಜ್ಯ ಮಟ್ಟದ ಸಿ.ಜಿ.ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಿದ್ದಯ್ಯ ಸಿ.ಹೆಚ್ ಇವರು ನೆಲಮಂಗಲ ತಾಲೊಕಿನ ಚಿಕ್ಕಮಾರನಹಳ್ಳಿ ಯವರು ನಮ್ಮ ರಂಗ ಶಿಕ್ಷಣ ಕೇಂದ್ರದ ವಿದ್ಯಾರ್ಥಿ ಯಾಗಿ 1995 ರಲ್ಲಿ ಪ್ರಥಮ ಬ್ಯಾಚ್ ನ ವಿದ್ಯಾರ್ಥಿಯಾಗಿ ಬಂದು ನಾಟಕಗಳನ್ನು ಕಲಿತು ನಂತರ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡು ಸಾಧನೆ ಮಾಡಿದವರು ಇವರು ನಮ್ಮ ರಂಗ ಶಿಕ್ಷಣ ಕೇಂದ್ರದ ಹಲವಾರು ನಾಟಕಗಳಲ್ಲಿ ಕಲಾವಿದರಾಗಿ ನಟಿಸಿ ಹಾಡುಗಾರರಾಗಿ ಹಾಡಿದ್ದಾರೆ. ಹಾಗು ನಾಟಕಗಳಿಗೆ ಸಂಗೀತ ನಿದರ್ಶನ ಮಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು ಬಂದ ಇವರು ರಂಗಭೂಮಿಯಲ್ಲಿ ಸುಮಾರು 28 ವರ್ಷಗಳ ಅನುಭವವಿದೆ .ಅಲ್ಲದೆ ಐತಿಹಾಸಿಕ, ಸಾಮಾಜಿಕ ನಾಟಕಗಳನ್ನು ತಾಲೂಕು ,ಜಿಲ್ಲೆ, ರಾಜ್ಯವಲ್ಲದೆ ರಾಷ್ಟ ಮಟ್ಟದಲ್ಲಿ ಮನೋಜ್ಞವಾಗಿ ನಟಿಸಿ ಅಭಿನಯದಲ್ಲಿ ರಾಷ್ಟ ಮಟ್ಟದ ಅತ್ಯುತ್ತಮ ನಟ ಪ್ರಶಸ್ತಿ…

Read More

ಸಿದ್ದಗಂಗಾ ಫೌಂಡೇಷನ್‌ ಟ್ರಸ್ಟ್‌ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ

ನೆಲಮಂಗಲ: ಪ್ರತಿಭಾ ಪುರಸ್ಕಾರಗಳು ವಿದ್ಯಾರ್ಥಿಗಳ ಉನ್ನತ ಸಾಧನೆಗೆ ಪ್ರೇರಣೆಯಾಗಲಿದೆ ಎಂದು ರಂಗಶಿಕ್ಷಣ ಕೇಂದ್ರ ಸಂಸ್ಥಾಪಕ ಅಧ್ಯಕ್ಷ ಸಿ.ಸಿದ್ಧರಾಜು ತಿಳಿಸಿದರು. ತಾಲೂಕಿನ ಯಂಟಗಾನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಾವಿಕೆರೆ ಗ್ರಾಮದಲ್ಲಿ ಭಾನುವಾರ ಶ್ರೀ ಸಿದ್ಧಗಂಗಾ ಫೌಂಡೇಶನ್ ಟ್ರಸ್‌ನಿಂದ ಆಯೋಜಿಸಿದ್ದ ನೂತನ ಟ್ರಸ್ಟ್ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳು ಶೈಕ್ಷಣಿಗೆ ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜತೆಗೆ ಸಮಾಜದೊಂದಿಗೆ ಬದುಕಲು ಬೇಕಾದ ಸಂಸ್ಕಾರಯುತ ಗುಣಗಳನ್ನು ಕಲಿಸುವ ಕೆಲಸ ಪಾಲಕರಿಂದ ಆಗಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಗಳಿಸುವ ಧೈರ್ಯ ಆತ್ಮವಿಶ್ವಾಸವನ್ನು ಮಕ್ಕಳಲ್ಲಿ ಬೆಳೆಸಬೇಕು. ಶ್ರೀ ಸಿದ್ಧಗಂಗಾ ಮಠದ ಶಿವಕುಮಾರಸ್ವಾಮೀಜಿ ಅವರ ತತ್ವಾದರ್ಶನಗಳನ್ನು ಮುಂದಿಟ್ಟುಕೊಂಡು ಟ್ರಸ್ಟ್ ಮಾಡಿರುವ ಸಂತೋಷಕರ ಸಂಗತಿ. ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದ ಸಮಾಜದ ಜವಬ್ದಾರಿ ಪ್ರತಿಭಾ ಪುರಸ್ಕಾರದಿಂದ ವಿದ್ಯಾರ್ಥಿಗಳ ಜತೆ ಸಮಾಜವಿದೆ ಎಂಬುದು ತಿಳಿಯಲಿದೆ. ಪ್ರತಿಭಾವಂತರು…

Read More

ಅನ್ನ, ಅಕ್ಷರ, ಆಶ್ರಯ, ಅಕ್ಕರೆಯ ದಾನಿ;ಬಡಮಕ್ಕಳಿಗೆ ವಿದ್ಯೆ ನೀಡಿದ ಮೈಸೂರಿನ ಜ್ಞಾನಿ – ಮಣ್ಣೆ ಮೋಹನ್

indipendent

ಮಣ್ಣೆ ಮೋಹನ್ ವಿರಚಿತ “ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಿಡಿಗಳು” ಪುಸ್ತಕದಿಂದ ಆಯ್ದ ಭಾಗ ಗಾಂಧೀಜಿಯವರ ಅಪ್ಪಟ ಅಭಿಮಾನಿ, ಅನುಯಾಯಿಯಾದ ಆ ವ್ಯಕ್ತಿ, 1925ರಲ್ಲಿ ಗಾಂಧೀಜಿಯವರ ಭೇಟಿಗಾಗಿ ಗುಜರಾತಿನ ಸಬರಮತಿ ಆಶ್ರಮಕ್ಕೆ ಹೋಗುತ್ತಾರೆ. ಅವರ ದರ್ಶನವಾಗುತ್ತಿದ್ದಂತೆಯೇ, ಆ ವ್ಯಕ್ತಿ ಅವರ್ಣನೀಯ ಆನಂದಕ್ಕೆ ಪಕ್ಕಾಗುತ್ತಾರೆ. ಗಾಂಧೀಜಿಯವರನ್ನು ಕಂಡು ಅವರೊಡನೆ ಮಾತನಾಡುವ ಅವಕಾಶ ದೊರೆತಿದ್ದಕ್ಕೆ ಸಂಭ್ರಮಿಸುತ್ತಾರೆ. ತಮ್ಮನ್ನು ಕಾಣಲು ಬರುವ ಪ್ರತಿಯೊಬ್ಬರನ್ನು ಮಾತನಾಡಿಸಿ, ಅವರಿಗೆ ಒಂದಷ್ಟು ಮಾರ್ಗದರ್ಶನ ನೀಡುವ ಕಾರ್ಯವನ್ನು ಗಾಂಧೀಜಿ ನಿರಂತರವಾಗಿ ಮಾಡುತ್ತಿರುತ್ತಾರೆ. ಹಾಗೆಯೇ, ಈಗಲೂ ಸಹ ಗಾಂಧೀಜಿ ದೇಶಪ್ರೇಮ, ಸರಳ ಜೀವನ, ಶಿಕ್ಷಣ ಪ್ರಸಾರ, ಸ್ವಚ್ಛತೆ, ಅಸಹಾಯಕರಿಗೆ ನೆರವು, ಹರಿಜನ ಸೇವೆ ಮುಂತಾದ ವಿಚಾರಗಳ ಬಗ್ಗೆ ಆ ವ್ಯಕ್ತಿಗೆ ಬೋಧಿಸುತ್ತಾರೆ. ಆ ಬೋಧನೆ ಆ ವ್ಯಕ್ತಿಯ ಮೇಲೆ ಅಪಾರ ಪ್ರಭಾವ ಬೀರುತ್ತದೆ. ತಮ್ಮ ಆಶಯದಂತೆಯೇ ನಡೆಯುತ್ತೇನೆಂದು ಗಾಂಧೀಜಿಯವರಿಗೆ ಭರವಸೆ ನೀಡುತ್ತಾರೆ. ತನ್ನ ಸಂಪೂರ್ಣ ಜೀವನವನ್ನು ಸಮಾಜ ಸೇವೆಗೆ ಮೀಸಲಿಡಲು ನಿಶ್ಚಯಿಸುತ್ತಾರೆ.…

Read More

ಕವಿತೆ: ವನಿತೆ ಜಗದ ತೋರಣ – ಮಣ್ಣೆ ಮೋಹನ್

ಎಲೆಯ ಮರೆಯ ಕುಸುಮ ಬಿರಿದುಪರಿಮಳವ ಸೂಸುತ್ತಿದೆಎಳೆಯ ಹರೆಯ ಚೆಲುವೆ ನಲಿದುಅನುರಾಗವು ಹಾಸುತ್ತಿದೆ ಕುಸುಮ ಸುಗಂಧದ ಘಮಘಮಕೆನಿಸರ್ಗಾಲಯವೇ ಆನಂದಚೆಲುವೆ ಸೌಂದರ್ಯದ ಅನುರಾಗಕೆಪುರುಷಕುಲವೇ ಅನುಬಂಧ ಮಕರಂದದ ಮಾಧುರ್ಯಕೆದುಂಬಿ ನಾದ ರಿಂಗಣಚೆಲುವೆಯ ಮಾರ್ದವತೆಗೆಮನುಕುಲವೇ ತಲ್ಲಣ ಚೆಲುವಿನಿಂದ ಮಿನುಗು ಹೂವುನಿಸರ್ಗ ದೇವಿಯ ಆಭರಣಜಗದ ಚೆಲುವ ಧರಿಸಿ ಮೆರೆವವನಿತೆ ಜಗದ ತೋರಣ –ಮಣ್ಣೆ ಮೋಹನ್ ಲೇಖಕರಾದ ಮಣ್ಣೆ ಮೋಹನ್‌ ರಚಿತ ಕವಿತೆ “ನನ್ನವಳು”‌ ಓದಲು ಕ್ಲಿಕ್‌ ಮಾಡಿ

Read More

ಲೇಖಕರಾದ ಮಣ್ಣೆ ಮೋಹನ್‌ ರಚಿತ ಕವಿತೆ “ನನ್ನವಳು”

ಓ! ತಂಗಾಳಿಯೇನನ್ನವಳ ಮೈ ಸೋಕಿಸಿಘಮ ಸುವಾಸನೆ ಹೊತ್ತು ತಾಓ! ಮೇಘದೂತನೇನನ್ನವಳಿಗೆ ನೆರಳು ನೀಡಿನೆರಳ ತಂಪನು ತೆತ್ತು ತಾಓ! ಮಳೆರಾಯನೇನನ್ನವಳ ಮೈ ತೋಯಿಸಿಮೈಯ್ಯ ಸುಗಂಧವ ತೇದು ತಾಓ! ರವಿ ರಶ್ಮಿಯೇನನ್ನವಳ ಮೈ ಚುಂಬಿಸಿದೇಹ ಕಾಂತಿಯನು ಕಾದು ತಾಓ! ಶಶಿ ಕಾಂತಿಯೇನನ್ನವಳ ಮೈ ಅರಳಿಸಿಉನ್ಮಾದವ ಉತ್ತು ಬಾಓ! ಖಗಗಳ ಹಿಂಡೇನನ್ನವಳ ದನಿಯ ಆಲಿಸಿಸರಿಗಮವ ಹೊತ್ತು ಬಾಓ! ಹಸಿರು ಚಿಗುರೆನನ್ನವಳಿಗೆ ಉಸಿರು ನೀಡಿಅವಳ ಜೀವವ ಉಳಿಸು ಬಾಓ! ಅನಂತ ದೈವವೇಅವಳುಸಿರನು ನನ್ನುಸಿರಲಿ ಬೆರೆಸಿಈರ್ವರನು ಒಂದಾಗಿಸು ಬಾ –ಮಣ್ಣೆ ಮೋಹನ್ ಲೇಖಕರ ಮತ್ತೊಂದು ಕವಿತೆ ನೆನೆಪು ಓದಲು ಕ್ಲಿಕ್‌ ಮಾಡಿ

Read More

ಕವಿತೆ: ನೆನಪು, ಲೇಖಕರು: ಮಣ್ಣೆ ಮೋಹನ್

ನೆನಪು ಮಳೆಯ ಹನಿಯು ನಿಂತರುಮರದ ಹನಿಯು ನಿಲ್ಲದಂತೆ/ನೀನು ದೂರ ಹೋದರುನಿನ್ನ ನೆನಪು ಬೆಲ್ಲದಂತೆ// ಹನಿಯನೊತ್ತ ಮರಕೀಗಸಂಭ್ರಮದ ಝಳಕ/ನೆನಪನ್ನೊದ್ದ ನನ್ನ ಮನಕೆಸಂತಸದ ಪುಳಕ// ಹನಿಯನೊದ್ದ ಎಲೆಗಳುಎಷ್ಟೊಂದು ಸುಂದರ/ನೆನಪ ಅಲೆಯ ಭಾವಗಳುಎಂದೆಂದಿಗೂ ಮಧುರ// ಮರದ ಹನಿಯು ಬಿದ್ದ ಮೇಲೆಮರದ ಭಾರವೆಲ್ಲ ಹಗುರ/ನಿನ್ನ ನೆನಪು ಹೋದ ಗಳಿಗೆನನ್ನ ಹೃದಯ ಬಲು ಭಾರ// –ಮಣ್ಣೆ ಮೋಹನ್

Read More