SEX HEALTH: ಲೈಂಗಿಕ ಶಕ್ತಿಗೆ ರಾಮಬಾಣ ಈ ಮಾಕಾ ಬೇರು : ಲೈಂಗಿಕ ಸಮಸ್ಯೆ ಉಳ್ಳವರು ತಪ್ಪದೇ ಟ್ರೈ ಮಾಡಿ

ಲೆಪಿಡಿಯಮ್ ಮೆಯೆನಿ, ಈ ಮಾಕಾ ಸಸ್ಯದ ವೈಜ್ಞಾನಿಕ ಹೆಸರು. ಇದನ್ನು ಪೆರುವಿಯನ್ ಜಿನ್ಸೆಂಗ್ ಎಂದೂ ಕರೆಯಲಾಗುತ್ತದೆ. ಕೋಸುಗಡ್ಡೆ, ಹೂಕೋಸು, ಎಲೆಕೋಸು ಮತ್ತು ಎಲೆಕೋಸುಗಳಂತೆಯೇ, ಮಾಕಾ ಕೂಡ ತರಕಾರಿಯಾಗಿದೆ. ಮಕಾ ಒಂದು ಸಸ್ಯವಾಗಿದ್ದು ಇದನ್ನು ಆಹಾರ ಮತ್ತು ಔಷಧಿಯಾಗಿ ಬಳಸಲಾಗುತ್ತದೆ. ಮಾಕಾ ಬೇರು ವಿಟಮಿನ್, ಖನಿಜ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಶಕ್ತಿಯನ್ನು ಹೆಚ್ಚಿಸಲು, ತ್ರಾಣವನ್ನು ಹೆಚ್ಚಿಸಲು ಮತ್ತು ಲೈಂಗಿಕ ಆಸಕ್ತಿಯನ್ನು ಸುಧಾರಿಸಲು ಇದನ್ನು ಶತಮಾನಗಳಿಂದ ಜನರು ಬಳಸಲಾಗುತ್ತದೆ. ಪ್ರಯೋಜನಗಳು ಮಾನಸಿಕ ಆರೋಗ್ಯಮಾಕಾ ಬೇರು ಫ್ಲೇವನಾಯ್ಡ್ ಮತ್ತು ಫೈಟೊನ್ಯೂಟ್ರಿಯೆಂಟ್ಗಳಲ್ಲಿ ಸಮೃದ್ಧವಾಗಿದ್ದು, ಇದು ಮನಸ್ಥಿತಿಯನ್ನು ಸುಧಾರಿಸಲು ಮತ್ತು ಆತಂಕವನ್ನು ಕಡಿಮೆ ಸಹಾಯಕವಾಗಿದೆ. ಫಲವತ್ತತೆಮಹಿಳೆಯರು ಮತ್ತು ಪುರುಷರಲ್ಲಿ ಫಲವತ್ತತೆಯನ್ನು ಹೆಚ್ಚಿಸಲು ಮಾಕಾ ಬೇರನ್ನು ಶತಮಾನಗಳಿಂದ ಬಳಸಲಾಗುತ್ತಿದೆ. ಇದು ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ, ವೀರ್ಯ ಎಣಿಕೆ ಮತ್ತು ಚಲನಶೀಲತೆಯನ್ನು ಸುಧಾರಿಸುತ್ತದೆ ಮತ್ತು ಒಟ್ಟಾರೆ ಸಂತಾನೋತ್ಪತ್ತಿ ಕಾರ್ಯವನ್ನು ಹೆಚ್ಚಿಸುತ್ತದೆ. ಕಾಮಾಸಕ್ತಿ ಮತ್ತು ಲೈಂಗಿಕ ಕ್ರಿಯೆಮಾಕಾ ಬೇರು ಕಾಮಾಸಕ್ತಿ ಮತ್ತು ಲೈಂಗಿಕ ಕ್ರಿಯೆಯನ್ನು ವರ್ಧಿಸುತ್ತದೆ…

Read More

ಮೊಟ್ಟೆ ತಿನ್ನುವವರು ಈ ತಪ್ಪು ಮಾಡಲೇಬೇಡಿ, ತಪ್ಪದೇ ಈ ಸುದ್ದಿ..!

ಜನರು ಅಂಗಡಿಯಲ್ಲಿ ಕೊಂಡು ತಂದ ಮೊಟ್ಟೆಯನ್ನು ಅಡುಗೆಗೆ ಬಳಸುವ ಮೊದಲು ನೀರಿನಲ್ಲಿ ತೊಳೆಯುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ಆರೋಗ್ಯಕ್ಕೆ ಹಾನಿಕರ. ಅಂಗಡಿಗೆ ತರುವ ಮೊದಲೇ ಮೊಟ್ಟೆಗಳನ್ನು ವೈಜ್ಞಾನಿಕ ರೀತಿಯಲ್ಲಿ ತೊಳೆದು ಬ್ಯಾಕ್ಟೀರಿಯಾ ಮುಕ್ತವನ್ನಾಗಿ ಮಾಡಲಾಗಿರುತ್ತದೆ. ಇಂಥ ಮೊಟ್ಟೆಯನ್ನು ಮತ್ತೆ ನೀರಿನಲ್ಲಿ ತೊಳೆಯದೆ ಬಳಸಬಹುದು. ನೀರಿನಲ್ಲಿ ತೊಳೆದರೆ ಮೊಟ್ಟೆಯ ಕೆಲವು ಪೋಷಕಾಂಶಗಳು ನಷ್ಟ ಆಗುವ ಸಾಧ್ಯತೆ ಇದೆ. ದೊಡ್ಡ ಕೋಳಿ ಫಾರಂಗಳಲ್ಲಿ ಬೃಹತ್ ಪ್ರಮಾಣದ ಮೊಟ್ಟೆಗಳನ್ನು ವೈಜ್ಞಾನಿಕ ರೀತಿಯಲ್ಲಿ ತೊಳೆಯುವ ವಿಧಾನವಿದೆ. ಇದರಲ್ಲಿ ಮೊಟ್ಟೆಯ ಚಿಪ್ಪಿನ ಮೇಲ್ಮೈಯಲ್ಲಿರುವ ಪದರವನ್ನು ತೆಗೆದು ಖನಿಜ ತೈಲ ಒಂದರ ಲೇಪನ ಮಾಡಲಾಗುತ್ತದೆ. ಇದರಿಂದ ಮೊಟ್ಟೆಯೊಳಗೆ ಬ್ಯಾಕ್ಟೀರಿಯಾ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ವಾಶಿಂಗ್ ಪ್ರೋಸೆಸ್ಸ್ ಗೆ ಒಳಗಾದ ಮೊಟ್ಟೆಗಳನ್ನು ಕೊಂಡು ತಂದು ಮತ್ತೆ ಮನೆಯಲ್ಲಿ ತೊಳೆದರೆ ಅದರ ತೈಲದ ಪದರ ಹೋಗಿ ಮೊಟ್ಟೆಯ ರಂಧ್ರದೊಳಗೆ ಧೂಳು ಅಥವಾ ಬ್ಯಾಕ್ಟೀರಿಯಾ ಪ್ರವೇಶಿಸಿ ಮೊಟ್ಟೆಯ ಬಿಳಿ ಅಥವಾ…

Read More

ಎದೆಯಲ್ಲಿ ಕಟ್ಟಿಕೊಂಡಿರುವ ಕಫವನ್ನು ತೆಗೆದುಕಾಹಲು ಇಲ್ಲಿವೆ ಸುಲಭವಾದ ಮನೆಮದ್ದುಗಳು..!

ಶೀತ, ಜ್ವರ, ವೈರಲ್ ಸೋಂಕು, ಸೈನಸ್ ಮುಂತಾದವು ಸೇರಿದಂತೆ ಕಫದ ಶೇಖರಣೆಗೆ ಹಲವು ಕಾರಣಗಳಿರಬಹುದು. ಕೆಲವು ಸಂದರ್ಭಗಳಲ್ಲಿ, ಕಫವು ಜ್ವರಕ್ಕೆ ಕಾರಣವಾಗಬಹುದು. ಆದ್ದರಿಂದ ಸರಿಯಾದ ಸಮಯದಲ್ಲೇ ಸಮಸ್ಯೆಯನ್ನು ತೊಡೆದುಹಾಕುವುದು ಅವಶ್ಯಕ. ಹಾಗಾದರೆ ಈ ಕಫವನ್ನು ಎದೆಯಿಂದ ತೆಗೆದುಹಾಕಲು ಅನುಸರಿಸಬೇಕಾದ ಮನೆಮದ್ದುಗಳ ಬಗ್ಗೆ ತಿಳಿಯಲು ಮುಂದೆ ಓದಿ.. ಕರಿಮೆಣಸುಕರಿಮೆಣಸಿನ ಅರ್ಧ ಟೀಚಮಚ ಪುಡಿಯೊಂದಿಗೆ 1 ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ. ಆ ಮಿಶ್ರಣವನ್ನು 10-15 ಸೆಕೆಂಡುಗಳ ಕಾಲ ಮೈಕ್ರೋವೇವ್ ನಲ್ಲಿಡಿ. ನಂತರ ಅದನ್ನು ಕುಡಿಯಿರಿ. ಇದನ್ನು ಕುಡಿದ ತಕ್ಷಣ ನಿಮಗೆ ಪರಿಹಾರ ಸಿಗುತ್ತದೆ. ಕಫವನ್ನು ಸಂಪೂರ್ಣವಾಗಿ ತೊಡೆದುಹಾಕಲು, ಮಿಶ್ರಣವನ್ನು ಒಂದು ವಾರದವರೆಗೆ ದಿನಕ್ಕೆ ಮೂರು ಬಾರಿ ಸೇವಿಸಿ. ಶುಂಠಿಶುಂಠಿಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಅದು ಮೂಗಿನ ಮಾರ್ಗಗಳನ್ನು ತೆರವುಗೊಳಿಸುತ್ತದೆ. ಇದರಲ್ಲಿರುವ ಅಂಶವು ದೇಹದಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಗಂಟಲಿನಲ್ಲಿ ಇರುವ ಲೋಳೆ…

Read More

16ರ ಬಾಲೆಗೆ ಬಂದಿತ್ತು ಬೆನ್ನುಹುರಿ ಕ್ಷಯ (Spine TB) : ಜಯಿಸಿದ್ದೆ ಅಚ್ಚರಿ, ವೈದ್ಯರಿಗೆ ಮೆಚ್ಚುಗೆ

ದೊಡ್ಡಬಳ್ಳಾಪುರ: ಆಕೆಯ ಹೆಸರು ಮುಸ್ಕಾನ್.ಉತ್ತರ ಪ್ರದೇಶ‌‌ ಮೂಲದ ಬಡ ಕುಟುಂಬದ ಹೆಣ್ಣು‌ಮಗಳು. ಸಣ್ಣ ವಯಸ್ಸಿನಲ್ಲೇ ಬೆನ್ನುಹುರಿ ಕ್ಷಯರೋಗಕ್ಕೆ ತುತ್ತಾಗಿದ್ದ ಮುಸ್ಕಾನ್, ಈಗ ಸಾಮಾನ್ಯರಂತೆ ಬದುಕುವಂತೆ ಓಡಾಡುವಂತೆ‌ ಮಾಡಿದ ಶ್ರೇಯ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಸಲ್ಲುತ್ತದೆ. ವರ್ಷದ ಹಿಂದೆ ಮುಸ್ಕಾನ್ ಅವರನ್ನು ಎಳೆಯ ಮಕ್ಕಳಂತೆ ಕೈಯಲ್ಲಿ ಎತ್ತಿಕೊಂಡು ಬರಬೇಕಾದ ಪರಿಸ್ಥಿತಿ‌ ಇತ್ತು. ಬಹಳಷ್ಟು ಆಸ್ಪತ್ರೆಗಳಲ್ಲಿ ತೋರಿಸಿದರೂ ರೋಗ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಮಗಳ ಧೈನ್ಯ ಸ್ಥಿತಿ ಕಂಡು ಪೋಷಕರು‌ ನಿತ್ಯ‌ ಮರುಗುತ್ತಿದ್ದರು. ಕೆಲಸ ಅರಸಿ ಬಂದಿದ್ದ ಆ ಕುಟುಂಬಕ್ಕೆ ಮನೆಯ ಮಾಲೀಕರು ನೆರವಾಗಿ, ದೊಡ್ಡಬಳ್ಳಾಪುರ ಆಸ್ಪತ್ರೆಗೆ ಕರೆತಂದರು. ಕ್ಲಿನಿಕಲ್ ಡಯಾಗ್ನಿಸಿಸ್ ಮಾಡಿ ಕ್ಷಯ ಪತ್ತೆ ಹಚ್ಚುವಲ್ಲಿ ವೈದ್ಯರು ಸಫಲರಾದರು. ಅದರ ಹಿಂದೆ ಪರಿಣಾಮಕಾರಿ ಚಿಕಿತ್ಸೆಯನ್ನೂ ಆರಂಭಿಸಿದರು. ಚಿಕಿತ್ಸೆ ಪೂರ್ಣಗೊಂಡು ಶನಿವಾರಕ್ಕೆ (ಜು.15) ಒಂದು ವರ್ಷ ತುಂಬಿದ ಬೆನ್ನಲ್ಲೇ ಆಕೆಯ 16ನೇ ವರ್ಷದ ಹುಟ್ಟು ಹಬ್ಬವೂ ಇತ್ತು. ಈ…

Read More

ಯೋಗವು ನಮ್ಮ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ: ಪಾಲಿಕೆ ಮಾಜಿ ಸದಸ್ಯ ಎಚ್.ಎನ್.ಗಂಗಾದರ್

ಬೆಂಗಳೂರು: ಯೋಗವು ನಮ್ಮ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಯೋಗವು ಮನಸ್ಸು ಮತ್ತು ದೇಹ, ಆಲೋಚನೆ ಮತ್ತು ಕ್ರಿಯೆಯ ಏಕತೆಯನ್ನು ಒಳಗೊಂಡಿರುತ್ತದೆ ನಮ್ಮ ಆರೋಗ್ಯ ಮತ್ತು ನಮ್ಮ ಯೋಗಕ್ಷೇಮಕ್ಕೆ ಮೌಲ್ಯಯುತವಾದ ಒಂದು ಸಮಗ್ರ ವಿಧಾನವೇ ಯೋಗ ಮಾಡುವುದು ಎಂದು ಪಾಲಿಕೆ ಮಾಜಿ ಸದಸ್ಯ ಎಚ್.ಎನ್.ಗಂಗಾದರ್ ತಿಳಿಸಿದರು. ವಿಶ್ವ ಯೋಗ ದಿನದ ಪ್ರಯುಕ್ತ ಹೆಗ್ಗನಹಳ್ಳಿಯ ನಿಸರ್ಗ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಯೋಗವೆಂದರೆ ಕೇವಲ ವ್ಯಾಯಾಮವಲ್ಲ ಇದು ನಿಮ್ಮೊಂದಿಗೆ, ಪ್ರಪಂಚ ಮತ್ತು ಪ್ರಕೃತಿಯೊಂದಿಗೆ ಏಕತೆಯ ಅರ್ಥವನ್ನು ಕಂಡುಕೊಳ್ಳುವ ಒಂದು ಮಾರ್ಗವಾಗಿದೆ. ಅಲ್ಲದೇ‌ ಇದೊಂದು ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದ್ದು ವಿಶ್ವಾದ್ಯಂತ ಹೆಚ್ಚಿನ ಜನರು ತಮ್ಮ ಮಾನಸಿಕ ಒತ್ತಡ ಮತ್ತು ದೈಹಿಕ ಸೌಂದರ್ಯಕ್ಕಾಗಿ ಯೋಗದ ಮೊರೆ ಹೋಗುತ್ತಿರುವುದು ನಿಮಗೆಲ್ಲ ತಿಳಿದಿದೆ ಎಂದರು. ಯೋಗದ ಪ್ರಾಮುಖ್ಯತೆ ಅರಿತ ಜನ ತಮ್ಮ ಉತ್ತಮ ಆರೋಗ್ಯಕ್ಕಾಗಿ ಯೋಗ ಅಭ್ಯಸಿಸಲು ಮುಂದಾಗಿದ್ದಾರೆ. ಆದರೆ…

Read More

ಗ್ರಾಮೀಣ ಪ್ರದೇಶದ ಜನರಿಗಾಗಿ ಡಯಾಲಿಸೀಸ್ ಕೇಂದ್ರ ಆರಂಭ

ನೆಲಮಂಗಲ: ಗ್ರಾಮೀಣ ಪ್ರದೇಶದಲ್ಲೂ ಜನರಲ್ಲಿ ಕಿಡ್ನಿ ಸಮಸ್ಯೆ ಕಂಡುಬರುತ್ತಿದ್ದು, ಡಯಾಲಿಸಿಸ್ ಸೇವಾ ಕೇಂದ್ರಗಳ ಅವಶ್ಯಕತೆ ಹೆಚ್ಚಿದೆ ಎಂದು ಸೋಂಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಕುಮಾರ್ ಅಭಿಪ್ರಾಯಪಟ್ಟರು. ತಾಲೂಕಿನ ಸೋಂಪುರ ಹೋಬಳಿಯ ವಿ ಕೇರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವಾ ವಿಭಾಗಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದಿನ ವೇಗದ ಒತ್ತಡದ ಜೀವನದಲ್ಲಿ ಹಲವಾರು ಖಾಯಿಲೆಗಳು ಯಾರಿಗೂ ಗೊತ್ತಾಗದ ರೀತಿ ದೇಹವನ್ನು ಅಕ್ರಮಿಸುತ್ತದೆ, ಕಿಡ್ನಿ ಸಮಸ್ಯೆ ಸಹ ಅದೇರೀತಿಯಾಗಿದೆ, ಡಯಾಲಿಸಿಸ್ ನಿಂದ ಕಿಡ್ನಿ ರೋಗಿಗಳಿಗೆ ತಾತ್ಕಾಲಿಕವಾಗಿ ಖಾಯಿಲೆ ದೂರಮಾಡಲು ಸಹಕಾರಿಯಾಗುತ್ತದೆ. ಸೋಂಪುರ ಹೋಬಳಿಯಲ್ಲಿ ಇದೀಗ ಈ ನೂತನ ವಿಭಾಗ ಪ್ರಾರಂಭವಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ, ಡಯಾಲಿಸಿಸ್ ಸೇವೆ ಆಯುಷ್ಮಾನ್ ಭಾರತ್, ಇ.ಎಸ್.ಐ. ಸೇರಿದಂತೆ ಇನ್ನೀತರ ವೈದ್ಯಕೀಯ ಸೇವಾ ವಿಮೆಯಿಂದ ಸಂಪೂರ್ಣ ಶುಲ್ಕದಲ್ಲಿ ವಿನಾಯಿತಿ ಇರುವುದು ಬಡವರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದರು. ಇದನ್ನೂ ಓದಿ: ಎರಡು ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತರ…

Read More