ಕ್ಯಾಂಟರ್ ಪಲ್ಟಿ, ಸ್ಥಳದಲ್ಲೇ ಮೂವರು ಸಾವು – ಇಬ್ಬರ ಸ್ಥಿತಿ ಗಂಭೀರ

ಚಿಕ್ಕಬಳ್ಳಾಪುರ: ಕಲ್ಲು ಕೂಚ ಸಾಗಿಸುತ್ತಿದ್ದ ಕ್ಯಾಂಟರ್ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಹಿನ್ನೆಲೆ ಕ್ಯಾಂಟರ್ ನಲ್ಲಿ ಇದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಆಸ್ಪತ್ರೆಯ ಆಸಿಗೆ ಮೇಲೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಕಣಿವೆ ಬಳಿ ಘಟನೆ ನಡೆದಿದ್ದು ಚಿಕ್ಕಬಳ್ಳಾಪುರ – ಗೌರಿ ಬಿದನೂರು ಮಾರ್ಗದಲ್ಲಿ ಕೆಲಸ ಕಾಲ ಸಂಚಾರ ದಟ್ಟನೆ ಉಂಟಾಗಿತ್ತು. ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಚಿಕ್ಕ ತಿರುಪತಿಯಿಂದ ಚಿಕ್ಕಬಳ್ಳಾಪುರದ ಮಂಚೇನಹಳ್ಳಿಗೆ ಕೂಚದ ಕಲ್ಲುಗಳನ್ನ ಸಾಗಿಸಲಾಗುತ್ತಿತ್ತು. ಘಟನೆಗೆ ಕ್ಯಾಂಟರ್ ನಲ್ಲಿ ತುಂಬಿದ್ದ ಅಧಿಕ ತೂಕವೇ ಕಾರಣ ಎಂದು ಹೇಳಲಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಅವಘದ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More

ದಿನಕ್ಕೆರಡು ಬಾರಿ ಆ ಯುವತಿಗೆ ತಪ್ಪದೆ ಕರೆ ಮಾಡುತ್ತಿದ್ದ ಪ್ರಜ್ವಲ್!? ಆಕೆಯ ಹಿಂದೆ ಬಿದ್ದ ಎಸ್‌ಐಟಿ

ಬೆಂಗಳೂರು: ವಿದೇಶದಲ್ಲಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಸದ್ಯದಲ್ಲೇ ವಿಶೇಷ ತನಿಖಾ ತಂಡದ ಎದುರು ಶರಣಾಗಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಈ ನಡುವೆ ಸ್ಫೋಟಕ ರಹಸ್ಯವೊಂದು ಬಯಲಾಗಿದೆ. ಯಾರೊಂದಿಗೂ ಸಂಪರ್ಕದಲ್ಲಿಲ್ಲದ ಪ್ರಜ್ವಲ್ ರೇವಣ್ಣ ಆ ಒಂದು ನಂಬರ್‌ಗೆ (Mobile Number) ಮಾತ್ರ ದಿನಕ್ಕೆ ಎರಡು ಬಾರಿ ಕರೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಪ್ರಜ್ವಲ್ ಕರೆ ಮಾಡುತ್ತಿರುವುದು ಬೇರೆ ಯಾರಿಗೂ ಅಲ್ಲ, ತಾನೂ ಮದುವೆ ಆಗಬೇಕು ಅಂದುಕೊಂಡಿದ್ದ ಯುವತಿಗೆ ಎಂದು ಮೂಲಗಳು ತಿಳಿಸಿವೆ. ಇದೇ ತಿಂಗಳಲ್ಲಿ ಪ್ರಜ್ವಲ್ ಆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡ್ಕೋಬೇಕು ಅಂದುಕೊಂಡಿದ್ದರಂತೆ, ಆ ಹುಡುಗಿಗೆ ದಿನಕ್ಕೆರಡು ಬಾರಿ ಫೋನ್ ಮಾಡಿ ಮಾತನಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಮಾಹಿತಿ ತಿಳಿದಕೂಡಲೇ ಎಸ್‌ಐಟಿ ಆ ಯುವತಿಯ ಚಲನವಲನಗಳ ಮೇಲೆ ನಿಗಾ ವಹಿಸಿದೆ. ಆ ಮೂಲಕ ಪ್ರಜ್ವಲ್ ಎಲ್ಲಿದ್ದಾರೆ ಎಂಬ ಹುಡುಕಾಟವೂ ನಡೆಯುತ್ತಿದೆ ಎಂದು ಉನ್ನತ ಮೂಲಗಳಿಂದ…

Read More

ಹೆಚ್.ಡಿ ರೇವಣ್ಣ ಬಂಧಿಸಿದ ಎಸ್ಐಟಿ ಅಧಿಕಾರಿಗಳು

ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಮಹಿಳೆಯ ಅಪಹರಣ ಸಂಬಂಧ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರಗೊಂಡ ಬೆನ್ನಲ್ಲೇ ಹೆಚ್.ಡಿ ರೇವಣ್ಣ ಬಂಧನವಾಗಿದೆ. ಪದ್ಮನಾಭ ನಗರದಲ್ಲಿರುವ ತಂದೆ ಹೆಚ್.ಡಿ ದೇವೇಗೌಡರ ಮನೆಯಲ್ಲಿದ್ದ ಹೆಚ್.ಡಿ ರೇವಣ್ಣರನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮನೆಯಿಂದ ಅವರನ್ನು ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ. ಅವರನ್ನು ಮೊದಲು ಕೋರ್ಟ್ ಮುಂದೆ ಹಾಜರು ಪಡಿಸುವ ಸಾಧ್ಯತೆಯಿದೆ.

Read More

ಲಕ್ಷ ಲಕ್ಷ ಹಣವನ್ನು ತವರಿಗೆ ಕಳುಹಿಸಿದ್ದ ಪತ್ನಿ, ಸಿಟ್ಟಿಗೆದ್ದು ಹೆಂಡತಿಯನ್ನೆ ಕೊಂ*ದ ಗಂಡ.

ಆ ಸುಂದರ ಕುಟುಂಬ ಕಳೆದ ಹದಿನೇಳು ವರ್ಷದಿಂದ ಸುಖವಾಗಿ ಬಾಳುತ್ತಿದ್ದರು, ಸುಖ ಸಂಸಾರಕ್ಕೆ ಸಾಕ್ಷಿಯಾಗಿ ಮೂರು ಮಕ್ಕಳು ಇದ್ರು, ಬಡತನದಲ್ಲಿದ್ದ ಕುಟುಂಬಕ್ಕೆ ಬಂದ ಕೋಟಿ ಕೋಟಿ ಹಣವೇ ಕುಟುಂಬ ಕಲಹಕ್ಕೆ ಕಾರಣವಾಗಿ, ಮನೆಯ ಯಜಮಾನಿಯನ್ನೆ ಗಂಡ ಭರ್ಬರವಾಗಿ ಕೊಂ*ದು ನೀರಿನ ಸಂಪಿನಲ್ಲಿ ಹಾಕಿದ್ದಾನೆ. ಮನೆಯ ಮುಂದೆಯೆ ತೋಡಿರುವ ಗುಂಡಿ, ಸಂಪಿನಿಂದ ಹೊರತೆಗೆದಿರುವ ಮೃ*ತ ದೇಹ, ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು, ಸ್ಥಳ ಮಹಜರ್ ಮಾಡುತ್ತಿರುವ ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು, ಈ ದೃಶ್ಯಗಳು ಕಂಡು ಬಂದದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಗೊಟ್ಟಿಗೆರೆ ಗ್ರಾಮದಲ್ಲಿ. ಇಲ್ಲಿ ನೀರಿನಲ್ಲಿ ಮು*ಳುಗಿ ಸಾ*ವನ್ನಪ್ಪಿರುವ ಮಹಿಳೆ 36 ವರ್ಷದ ಜಯಲಕ್ಷ್ಮಿ, ಈಕೆಯನ್ನ ಕೊಂ*ದು ನೀರಿನಲ್ಲಿ ಮುಳುಗಿಸಿದ್ದು ಈತನ ಪತಿ 42 ವರ್ಷದ ಶ್ರೀನಿವಾಸ್. ಸುಂದರ ಸಂಸಾರದಲ್ಲಿ ಈ ಕೊ*ಲೆಗೆ ಕಾರಣ ವಾಗಿದ್ದು ಮಾತ್ರ ಹಣ ಹಣ ಹಣ ಕೈಗಾರಿಕಾ ಪ್ರದೇಶಕ್ಕೆ ಇವರ…

Read More

ಉ.ಪ್ರದೇಶ: ದಲಿತ ಮಹಿಳೆ ಮೇಲೆ ಅತ್ಯಾಚಾರ, ದೇಹ ತುಂಡರಿಸಿ ಆರೋಪಿಗಳು ನಾಪತ್ತೆ

40 ವರ್ಷದ ದಲಿತ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ, ಆನಂತರ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿರುವ ಘಟನೆ ಉತ್ತರ ಪ್ರದೇಶದ ಬಂಡಾದಲ್ಲಿ ನಡೆದಿದೆ. ಘಟನೆ ಕುರಿತು ಮಾಹಿತಿ ನೀಡಿದ ಸ್ಟೇಷನ್ ಹೌಸ್ ಆಫೀಸರ್ ಸಂದೀಪ್ ತಿವಾರಿ, ”ಮಂಗಳವಾರ ಮಹಿಳೆ ಆರೋಪಿ ರಾಜ್‌ಕುಮಾರ್ ಶುಕ್ಲಾ ಅವರ ಹಿಟ್ಟಿನ ಗಿರಣಿಯನ್ನು ಸ್ವಚ್ಛಗೊಳಿಸಲು ಮನೆಗೆ ತೆರಳಿದ್ದರು. ಸ್ವಲ್ಪ ಸಮಯದ ನಂತರ ಆ ಮಹಿಳೆಯ 20 ವರ್ಷದ ಮಗಳು ಶುಕ್ಲಾ ಅವರ ಮನೆಗೆ ಹೋಗಿದ್ದಾಳೆ, ಒಳಗಿನಿಂದ ಚಿಲಕ ಹಾಕಿದ ಕೊಠಡಿಯಿಂದ ತಾಯಿಯ ಕಿರುಚಾಟ ಕೇಳಿದೆ” ಎಂದು ತಿಳಿಸಿದರು. ಸ್ವಲ್ಪ ಸಮಯದ ನಂತರ ಕೋಣೆಯ ಬಾಗಿಲು ತೆರೆದಾಗ ಬಾಲಕಿ ತಾಯಿಯ ಶವ ಮೂರು ತುಂಡುಗಳಾಗಿ ಬಿದ್ದಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ರಾಜ್‌ಕುಮಾರ್ ಶುಕ್ಲಾ, ಅವರ ಸಹೋದರ ಬೌವಾ ಶುಕ್ಲಾ ಮತ್ತು ರಾಮಕೃಷ್ಣ ಶುಕ್ಲಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಸ್‌ಎಚ್‌ಒ…

Read More

ದಲಿತ ಯುವಕನಿಗೆ ಜಾತಿ ನಿಂದನೆ, ಕೊಲೆ: ಆರೋಪಿಗೆ ಜೀವಾವಧಿ ಶಿಕ್ಷೆ

ದಲಿತ ಕೂಲಿ ಕಾರ್ಮಿಕನೋರ್ವನಿಗೆ ಜಾತಿ ನಿಂದಿಸಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 72 ವರ್ಷದ ವ್ಯಕ್ತಿಗೆ ಉತ್ತರಪ್ರದೇಶದ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಭದೋಹಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಸದ್ ಅಹ್ಮದ್ ಹಶ್ಮಿ ಅವರು 2002ರಲ್ಲಿ ನಡೆದ ಅಜೀತ್ ಕುಮಾರ್ (32) ಕೊಲೆ ಪ್ರಕರಣದಲ್ಲಿ ದೇವಿಚರಣ್ ವಿಶ್ವಕರ್ಮ ದೋಷಿ ಎಂದು ತೀರ್ಪು ನೀಡಿದ್ದು, ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು ಮತ್ತು 52,000 ರೂ.ದಂಡವನ್ನು ವಿಧಿಸಿದ್ದಾರೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (SC-ST) ಅನಿಲ್ ಕುಮಾರ್ ಶುಕ್ಲಾ ಅವರು ಈ ಘಟನೆ 2022ರ ಜು.18ರಂದು ಸಂಭವಿಸಿದೆ. ಆಕಾಶ್ ಮಿಶ್ರಾ ಎಂಬವರು ಮನೆ ನಿರ್ಮಾಣ ಮಾಡುತ್ತಿದ್ದರು ಮತ್ತು ದೇವಿಚರಣ್ ವಿಶ್ವಕರ್ಮ ಮತ್ತು ಮೃತ ಅಜೀತ್ ಕುಮಾರ್ ಅಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಅಜೀತ್ ಕುಮಾರ್ ಇತರ ಕಾರ್ಮಿಕರಿಗೆ ಚಹಾ ನೀಡುತ್ತಿದ್ದಾಗ ವಿಶ್ವಕರ್ಮ ಜಾತಿ ನಿಂದನೆ ಮಾಡಿದ್ದಾನೆ. ಇದಕ್ಕೆ ಅಜೀತ್ ಕುಮಾರ್ ವಿರೋಧವನ್ನು…

Read More

Contaminated Water : ಕಾವಾಡಿಗರ ಹಟ್ಟಿ ವಿಷಜಲ ದುರಂತಕ್ಕೆ ಇನ್ನೊಂದು ಬಲಿ; ಒಟ್ಟು ಸಾವಿನ ಸಂಖ್ಯೆ 6+1ಕ್ಕೆ ಏರಿಕೆ

ಚಿತ್ರದುರ್ಗ: ಜಿಲ್ಲೆಯ ಕವಾಡಿಗರಹಟ್ಟಿ ವಿಷ ಜಲ ದುರಂತ ಪ್ರಕರಣದಲ್ಲಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಇದರೊಂದಿಗೆ ವಿಷಯುಕ್ತ ನೀರಿಗೆ ಬಲಿಯಾದವರ ಸಂಖ್ಯೆ 6+1 ಆಗಿದೆ. ಈ ಪ್ರಕರಣದಲ್ಲಿ ಇದುವರೆಗೆ ಮೂವರು ಪುರುಷರು ಮತ್ತು ಮೂವರು ಮಹಿಳೆಯರು ಮೃತಪಟ್ಟಿದ್ದರೆ, ತಾಯಿ ಗರ್ಭದೊಳಗೇ ಒಂದು ಮಗು ಕಣ್ಮುಚ್ಚಿದೆ. ಜುಲೈ 30ರಂದು ಭಾನುವಾರ ರಾತ್ರಿ ಚಿತ್ರದುರ್ಗ ಜಿಲ್ಲೆಯ ಕಾವಾಡಿಗರಹಟ್ಟಿಯ ಟ್ಯಾಂಕ್‌ನಿಂದ ಬಿಟ್ಟ ನೀರನ್ನು ಸೇವಿಸಿ 200ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಇವರ ಪೈಕಿ ಹಟ್ಟಿಯ ನಿವಾಸಿಗಳಾದ ಮಂಜುಳಾ, ರಘು, ಪ್ರವೀಣ, ರುದ್ರಪ್ಪ ಮತ್ತು ಪಾರ್ವತಮ್ಮ ಎಂಬ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಜತೆಗೆ ರಘು ಅವರ ಸೋದರಿ ಉಷಾ ಅವರ ಹೊಟ್ಟೆಯಲ್ಲಿದ್ದ ಎಂಟು ತಿಂಗಳು 10 ದಿನದ ಮಗು ಕೂಡಾ ಮೃತಪಟ್ಟಿದ್ದಾದೆ ಇದೀಗ ಚಿತ್ರದುರ್ಗ ತಾಲೂಕಿನ ಚಿಕ್ಕಪುರ ಗ್ರಾಮದ ಕರಿಬಸಪ್ಪ(35) ಎಂಬವರು ವಾಂತಿ ಬೇಧಿಯಿಂದಾಗಿ ಮೃತಪಟ್ಟಿದ್ದು ಸಾವಿನ ಸಂಖ್ಯೆ ಏಳಕ್ಕೇರಿಯಾದಂತಾಗಿದೆ. ಇವರು ಜುಲೈ 30, 31ರಂದು…

Read More

ಹೆದ್ದಾರಿ ಪಕ್ಕದ ಮೋರಿಯಲ್ಲಿ ಪತ್ತೆಯಾತ್ತು ಶವ: ಸಾವಿನ ಬಗ್ಗೆ ಸೃಷ್ಟಿಯಾಗಿವೇ ಸಾಕಷ್ಟು ಅನುಮಾನ: ಇದು ಅಪಘಾತನ ಅಥವಾ ಕೊಲೆನ?

ನೆಲಮಂಗಲ: ನಗರದ ರಾ.ಹೆದ್ದಾರಿ೪೮ರ ದಾನೋಜಿಪಾಳ್ಯ ಬಳಿ ಅನುಮಾನಸ್ಪದ ರೀತಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಮೃತ ದೇಹ ಪತ್ತೆಯಾಗಿದೆ. ದೊಡ್ಡಬಳ್ಳಾಪುರ ನಗರದ ಬಸವೇಶ್ವರಬಡಾವಣೆ ನಿವಾಸಿ ಸಂತೋಷ್‌ಕುಮಾರ್(೩೨) ಮೃತ ವ್ಯಕ್ತಿ ಎಂದು ಗುರುತಿಸಿಲಾಗಿದೆ. ಏನಿದು ಘಟನೆ: ಆ.೦೫ರಂದು ಶನಿವಾರ ಮದ್ಯಾಹ್ನ ೧೨ ಗಂಟೆ ವೇಳೆಯಲ್ಲಿ ಸ್ಥಳೀಯರೊಬ್ಬರು ದಾನೋಜಿಪಾಳ್ಯ ಬಳಿ ಮೊರಿಯೊಂದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಬಿದ್ದಿದನ್ನು ಕಂಡು ತಕ್ಷಣ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಸ್ಥಳದಕ್ಕೆ ಆಗಮಿಸಿದ್ದ ನಗರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಶಶಿಧರ್ ಪರಿಶೀಲನೆ ನಡೆಸಿದ್ದು ಮೃತ ವ್ಯಕ್ತಿಯ ಜೇಬಿನಲ್ಲಿ ಚೀಟಿಯಲ್ಲಿ ಸಂಬಂಧಿಕರೊಬ್ಬ ನಂಬರ್ ಸಿಕ್ಕಿದ್ದು ಕರೆ ಮಾಡಿ ವಿಚಾರ ತಿಳಿಸಿದ್ದು ಸ್ಥಳಕ್ಕೆ ಆಗಮಿಸಿದ್ದ ಕುಟುಂಬಸ್ಥರು ಕೈಮೇಲೆ ಅಚ್ಚೆ, ಬಟ್ಟೆ, ಕನ್ನಡಕವನ್ನು ಕಂಡು ಸಾವನ್ನಪ್ಪಿರುವ ವ್ಯಕ್ತಿ ಸಂತೋಷ್‌ಕುಮಾರ್ ಎಂದು ಗುರುತಿಸಿದ್ದಾರೆ. ಅಪಘಾತದ ಶಂಕೆ: ಮೃತ ದೇಹ ಪತ್ತೆಯಾದ ಸ್ಥಳದಲ್ಲಿ ಆ.೦೪ರಂದು ಶುಕ್ರವಾರ ಬೆಳಗ್ಗೆ ೧:೩೦ರ ವೇಳೆಯಲ್ಲಿ…

Read More

ಪೋಷಕರೇ ಎಚ್ಚರ! ಎಚ್ಚರ! ಪೋಷಕರು ನೋಡಲೇಬೇಕಾದ ಸ್ಟೋರಿ: ಚಾಕೊಲೇಟ್ ನಲ್ಲಿ ಡ್ರಗ್ಸ್ ಮಿಕ್ಸ್ ಮಾಡಿ ಮಾರಾಟ!

ಮಂಗಳೂರು: ನಗರದಲ್ಲಿ ಮಾದಕವಸ್ತು ಮಿಶ್ರಿತ ಚಾಕೊಲೇಟ್​ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೈಲ್ಯಾಂಡ್​​​​ ಬಳಿಯ ಅಂಗಡಿಯಲ್ಲಿ ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ನರ್(45) ಬಾಂಗ್ ಮಿಶ್ರಿ ಚಾಕೊಲೇಟ್ ಮಾರುತ್ತಿದ್ದನು. ಈತನನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಳಿ ಇದ್ದ 5,500 ರೂ. ಮೌಲ್ಯದ ಬಾಂಗ್ ಚಾಕೊಲೇಟ್ ಜಪ್ತಿ ಮಾಡಿದ್ದಾರೆ. ಕಾರ್ ಸ್ಟ್ರೀಟ್ ಬಳಿ ಬಾಂಗ್ ಮಿಶ್ರಿ ಚಾಕೊಲೇಟ್ ಮಾರುತ್ತಿದ್ದ ಮನೋಹರ್ ಶೇಟ್ (49) ನನ್ನು ಮಂಗಳೂರು ಉತ್ತರ ಠಾಣಾ ಬಂಧಿಸಿದ್ದಾರೆ. ಆರೋಪಿಯಿಂದ 48,000 ರೂ. ಮೌಲ್ಯದ ಬಾಂಗ್ ಚಾಕೊಲೇಟ್​​ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ಕರ್ (45) ಹಾಗೂ ಮಂಗಳೂರಿನ ಕಾರ್ ಸ್ಟ್ರೀಟ್ ನಿವಾಸಿ ಮನೋಹರ್ ಶೇಟ್ (49) ಪೊಲೀಸರು ವಶಕ್ಕೆ ಪಡೆದ ಆರೋಪಿಗಳಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಗರದ ಕಾರ್ ಸ್ಟ್ರೀಟ್ ಹಾಗೂ ಹೈಲ್ಯಾಂಡ್ ಎಂಬಲ್ಲಿನ ಅಂಗಡಿಗಳ…

Read More

HASSAN: ಅನುಮಾನದ ಭೂತ ಹೊಕ್ಕಿತ್ತು, ತಾಳಿ ಕಟ್ಟಿದ ಮಡದಿಯನ್ನು ಕ್ರೂರಾತಿಕ್ರೂರವಾಗಿ ಕೊಂದ

ಕೆಲಸಕ್ಕೆ ಹೋಗುವ ಪತ್ನಿಯ ಮೇಲೆ ವಿನಾಕಾರಣ ಅನುಮಾನದ ಪೀಡೆ ನೆತ್ತಿಗೇರಿಸಿಕೊಂಡು ಆಕೆಯನ್ನ ಹಿಂಬಾಲಿಸೋಕೆ ಶುರು ಮಾಡಿದ್ದ ಪತಿರಾಯ ಕಡೆಗೆ ಆಕೆಯ ನಡತೆ ಬಗ್ಗೆ ಅನುಮಾನಗೊಂಡು ಆಕೆಯನ್ನ ಬರ್ಬರವಾಗಿ ಕೊಂದು ಪೊಲೀಸರಿಗೆ ಶರಣಾಗಿದ್ದಾನೆ.ಹಾಸನ, ಜುಲೈ 21: ಅನುಮಾನ ಅನ್ನುವ ಭೂತ ತಲೆಯೊಳಗೆ ಹೊಕ್ಕಿಬಿಟ್ಟರೆ ಅದೆಂತಹ ಸಂಬಂಧಕ್ಕೂ ಅಲ್ಲಿ ಬೆಲೆ ಇರೋದಿಲ್ಲ, ದಶಕಗಳ ಸಹಬಾಳ್ವೆಗೂ ಅಲ್ಲಿ ನೆಲೆ ಇರೋದಿಲ್ಲ, ದಶಕದ ಹಿಂದೆ ಮದುವೆಯಾಗಿ ಇಬ್ಬರು ಮುದ್ದಾದ ಮಕ್ಕಳನ್ನೂ ಹೊಂದಿದ್ದ ಆ ದಂಪತಿ ನಡುವೆ ಪತಿಯ ತಲೆ ಹೊಕ್ಕಿದ್ದ ಅದೊಂದು ಅನುಮಾನ ಮಾಡಬಾರದ್ದನ್ನ ಮಾಡಿಸಿಬಿಟ್ಟಿದೆ. ಕುಡಿತದ ಚಟಕ್ಕೆ ದಾಸನಾಗಿದ್ದ ಗಂಡ, ತನಗೆ ಸರಿಸಮಾನವಾಗಿ ಸಂಸಾರದ ನೊಗ ಹೊತ್ತಿದ್ದ ಮಡದಿಯ ಮೇಲೆ ಅನುಮಾನ ಪಡೋಕೆ ಶುರು ಮಾಡಿದ್ದ ಗಂಡ ಆಕೆ ಹೋದಲ್ಲೆಲ್ಲಾ ಹಿಂಬಾಲಿಸೋದು, ದುಡಿದ ಹಣದಲ್ಲಿ ಕುಡಿದು ಮಸ್ತಿ ಮಾಡೋದು, ಮತ್ತೆ ವ್ಯವಹಾರಕ್ಕೆ ತವರು ಮನೆಯಿಂದ ಹಣ ತಗೊಂಬಾ ಅಂತಾ ಪೀಡಿಸ್ತಿದ್ದನಂತೆ. ಹತ್ತಾರು…

Read More