UNESCO ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಹೋಯ್ಸಳರ ಬೇಲೂರು ಹಳೇಬೀಡು ಸೋಮನಾಥಪುರದ ದೇವಾಲಯಗಳಿಗೆ ವಿಶ್ವ ಪರಂಪರೆಯ ಸ್ಥಾನಮಾನ

ಬೆಂಗಳೂರು: ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಇದೀಗ ಕರ್ನಾಟಕದ ಹೊಯ್ಸಳರ ಕಾಲದ ದೇವಾಲಯಗಳನ್ನು ಸೇರ್ಪಡೆಗೊಳಿಸಲಾಗಿದೆ. ಹೀಗಾಗಿ ಹಾಸನ ಜಿಲ್ಲೆಯಲ್ಲಿರುವ ಬೇಲೂರು, ಹಳೇಬೀಡು ಮತ್ತು ಮೈಸೂರು ಜಿಲ್ಲೆಯಲ್ಲಿರುವ ಸೋಮನಾಥಪುರ ದೇವಾಲಯಗಳಿಗೆ ಯುನೆಸ್ಕೋ ವಿಶ್ವ ಪರಂಪರೆಯ ಸ್ಥಾನಮಾನಗಳನ್ನು ನೀಡಿದೆ.ಈ ಬಗ್ಗೆ ಯುನಸ್ಕೋದ ಅಧಿಕೃತ ಟ್ವೀಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ಸೋಮನಾಥಪುರದ ದೇವಾಲಯದ ಚಿತ್ರದೊಂದಿಗೆ “ಹೊಯ್ಸಳರ ಪವಿತ್ರ ಸ್ಥಳಗಳು, ಭಾರತ, ಅಭಿನಂದನೆಗಳು” ಎಂದು ಬರೆಯಲಾಗಿದೆ. ಬೇಲೂರಿನ ಚನ್ನಕೇಶವ ದೇವಾಲಯ ಮತ್ತು ಹಳೇಬೀಡು ಹೊಯ್ಸಳೇಶ್ವರ ದೇವಸ್ಥಾನಗಳು ಹೊಯ್ಸಳರ ದೊರೆ ವಿಷ್ಣುವರ್ಷನ ಆಡಳಿತಾವಧಿಯಲ್ಲಿ( ಕ್ರಿಶ 1110ರಿಂದ 1142) ನಿರ್ಮಾಣಗೊಂಡಿವೆ. ಇನ್ನು ಹಳೇಬೀಡು ಸೋಮನಾಥಪುರದ ಚನ್ನಕೇಶವ ದೇವಾಲಯವು ಹೊಯ್ಸಳರ ದೊರೆಯಾದ ಮೂರನೇಯ ನರಸಿಂಹನ ಕಾಲದಲ್ಲಿ ದಂಡನಾಯಕನಾಗಿದ್ದ ಸೋಮನಾಥ ಎಂಬಾತನಿಂದ 1268 ರಲ್ಲಿ ನಿರ್ಮಾಣಗೊಂಡಿದೆ. ಈ ತಾಣಗಳು ಈ ಹಿಂದೆ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿದ್ದವು. ಇದೀಗ ಅಧಿಕೃತವಾಗಿ ಘೋಷಿಸಲಾಗಿದೆ. ಪ್ರಧಾನಿ ಮೋದಿ ಟ್ವೀಟ್ಈ…

Read More

ಐದು ಗ್ಯಾರಂಟಿ ಯೋಜನೆಗಳು ಬಿಟ್ಟಿ ಭಾಗ್ಯಗಳಲ್ಲ- ಜನತೆಯಹಣ ಜನತೆಯ ಕಿಸೆಗಳಿಗೆ ಮರಳಿದೆ ಅಷ್ಟೇ ಎನ್ನುತ್ತಾರೆ ರಾಜ್ಯದ ಜನ: ಈದಿನ ಮಾಸಿಕ ಸಮೀಕ್ಷೆ

ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ವಾಸ್ತವವಾಗಿ ಜನರ ಹಕ್ಕುಗಳು ಮತ್ತು ಜನರ ಹಣ ಜನರ ಕಿಸೆಗಳಿಗೇ ಮರಳುತ್ತಿದೆ ಎಂದು ರಾಜ್ಯದ ಬಹುಪಾಲು ಜನರು ಭಾವಿಸಿದ್ದಾರೆ ಎಂಬ ಅಂಶ  Eedina.com ಇತ್ತೀಚೆಗೆ ನಡೆಸಿದ ಸಮೀಕ್ಷೆಯಿಂದ ಕಂಡುಬಂದಿದೆ. ಸಮೀಕ್ಷೆಗೊಳಪಟ್ಟವರಲ್ಲಿ ಸುಮಾರು 51% ಮಂದಿ, ಬಹುಪಾಲು ಮಾಧ್ಯಮಗಳು ಗ್ಯಾರಂಟಿ ಯೋಜನೆಗಳ ವಿರುದ್ಧ ಸಾರ್ವಜನಿಕರನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸುತ್ತಿವೆ ಎಂದು ಹೇಳಿದ್ದಾರೆ. ಸಮುದಾಯಗಳು, ಮಾಧ್ಯಮ ಸ್ವಯಂಸೇವಕರು(ಮೀಡಿಯಾ ವಾಲಂಟಿಯರ್ಸ್‌) ಹಾಗೂ ಸಾರ್ವಜನಿಕರ ಸಹಭಾಗಿತ್ವ- ಸಹಕಾರದಿಂದಲೇ ನಡೆಯುತ್ತಿರುವ Eedina.com ಕನ್ನಡ ಡಿಜಿಟಲ್‌ ಮಾಧ್ಯಮ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶಗಳು ಹೊರಬಿದ್ದಿವೆ. ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ‘ಈದಿನ.ಕಾಂ’ ನಡೆಸಿದ ಚುನಾವಣಾ ಪೂರ್ವ ಫಲಿತಾಂಶಗಳಿಗೆ ನೂರಕ್ಕೆ ನೂರರಷ್ಟು ಹತ್ತಿರವಿದ್ದ ಏಕೈಕ ಸಮೀಕ್ಷೆ ಎನಿಸಿಕೊಂಡಿತ್ತು. ಆಂಗ್ಲ ಮಾಧ್ಯಮಗಳಾದ ‘ಫ್ರಂಟ್‌ಲೈನ್‌’ ಮಾಸಿಕ, ‘ದಿ ಟೆಲಿಗ್ರಾಫ್‌’ ದೈನಿಕ ಹಾಗೂ ‘ದಿ ವೈರ್‌’ ಮತ್ತು ‘ದಿ ನ್ಯೂಸ್‌ ಮಿನಿಟ್‌’ ನಂತಹ…

Read More

ಪೋಷಕರೇ ಎಚ್ಚರ! ಎಚ್ಚರ! ಪೋಷಕರು ನೋಡಲೇಬೇಕಾದ ಸ್ಟೋರಿ: ಚಾಕೊಲೇಟ್ ನಲ್ಲಿ ಡ್ರಗ್ಸ್ ಮಿಕ್ಸ್ ಮಾಡಿ ಮಾರಾಟ!

ಮಂಗಳೂರು: ನಗರದಲ್ಲಿ ಮಾದಕವಸ್ತು ಮಿಶ್ರಿತ ಚಾಕೊಲೇಟ್​ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೈಲ್ಯಾಂಡ್​​​​ ಬಳಿಯ ಅಂಗಡಿಯಲ್ಲಿ ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ನರ್(45) ಬಾಂಗ್ ಮಿಶ್ರಿ ಚಾಕೊಲೇಟ್ ಮಾರುತ್ತಿದ್ದನು. ಈತನನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಳಿ ಇದ್ದ 5,500 ರೂ. ಮೌಲ್ಯದ ಬಾಂಗ್ ಚಾಕೊಲೇಟ್ ಜಪ್ತಿ ಮಾಡಿದ್ದಾರೆ. ಕಾರ್ ಸ್ಟ್ರೀಟ್ ಬಳಿ ಬಾಂಗ್ ಮಿಶ್ರಿ ಚಾಕೊಲೇಟ್ ಮಾರುತ್ತಿದ್ದ ಮನೋಹರ್ ಶೇಟ್ (49) ನನ್ನು ಮಂಗಳೂರು ಉತ್ತರ ಠಾಣಾ ಬಂಧಿಸಿದ್ದಾರೆ. ಆರೋಪಿಯಿಂದ 48,000 ರೂ. ಮೌಲ್ಯದ ಬಾಂಗ್ ಚಾಕೊಲೇಟ್​​ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ಕರ್ (45) ಹಾಗೂ ಮಂಗಳೂರಿನ ಕಾರ್ ಸ್ಟ್ರೀಟ್ ನಿವಾಸಿ ಮನೋಹರ್ ಶೇಟ್ (49) ಪೊಲೀಸರು ವಶಕ್ಕೆ ಪಡೆದ ಆರೋಪಿಗಳಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಗರದ ಕಾರ್ ಸ್ಟ್ರೀಟ್ ಹಾಗೂ ಹೈಲ್ಯಾಂಡ್ ಎಂಬಲ್ಲಿನ ಅಂಗಡಿಗಳ…

Read More

16ರ ಬಾಲೆಗೆ ಬಂದಿತ್ತು ಬೆನ್ನುಹುರಿ ಕ್ಷಯ (Spine TB) : ಜಯಿಸಿದ್ದೆ ಅಚ್ಚರಿ, ವೈದ್ಯರಿಗೆ ಮೆಚ್ಚುಗೆ

ದೊಡ್ಡಬಳ್ಳಾಪುರ: ಆಕೆಯ ಹೆಸರು ಮುಸ್ಕಾನ್.ಉತ್ತರ ಪ್ರದೇಶ‌‌ ಮೂಲದ ಬಡ ಕುಟುಂಬದ ಹೆಣ್ಣು‌ಮಗಳು. ಸಣ್ಣ ವಯಸ್ಸಿನಲ್ಲೇ ಬೆನ್ನುಹುರಿ ಕ್ಷಯರೋಗಕ್ಕೆ ತುತ್ತಾಗಿದ್ದ ಮುಸ್ಕಾನ್, ಈಗ ಸಾಮಾನ್ಯರಂತೆ ಬದುಕುವಂತೆ ಓಡಾಡುವಂತೆ‌ ಮಾಡಿದ ಶ್ರೇಯ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಸಲ್ಲುತ್ತದೆ. ವರ್ಷದ ಹಿಂದೆ ಮುಸ್ಕಾನ್ ಅವರನ್ನು ಎಳೆಯ ಮಕ್ಕಳಂತೆ ಕೈಯಲ್ಲಿ ಎತ್ತಿಕೊಂಡು ಬರಬೇಕಾದ ಪರಿಸ್ಥಿತಿ‌ ಇತ್ತು. ಬಹಳಷ್ಟು ಆಸ್ಪತ್ರೆಗಳಲ್ಲಿ ತೋರಿಸಿದರೂ ರೋಗ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಮಗಳ ಧೈನ್ಯ ಸ್ಥಿತಿ ಕಂಡು ಪೋಷಕರು‌ ನಿತ್ಯ‌ ಮರುಗುತ್ತಿದ್ದರು. ಕೆಲಸ ಅರಸಿ ಬಂದಿದ್ದ ಆ ಕುಟುಂಬಕ್ಕೆ ಮನೆಯ ಮಾಲೀಕರು ನೆರವಾಗಿ, ದೊಡ್ಡಬಳ್ಳಾಪುರ ಆಸ್ಪತ್ರೆಗೆ ಕರೆತಂದರು. ಕ್ಲಿನಿಕಲ್ ಡಯಾಗ್ನಿಸಿಸ್ ಮಾಡಿ ಕ್ಷಯ ಪತ್ತೆ ಹಚ್ಚುವಲ್ಲಿ ವೈದ್ಯರು ಸಫಲರಾದರು. ಅದರ ಹಿಂದೆ ಪರಿಣಾಮಕಾರಿ ಚಿಕಿತ್ಸೆಯನ್ನೂ ಆರಂಭಿಸಿದರು. ಚಿಕಿತ್ಸೆ ಪೂರ್ಣಗೊಂಡು ಶನಿವಾರಕ್ಕೆ (ಜು.15) ಒಂದು ವರ್ಷ ತುಂಬಿದ ಬೆನ್ನಲ್ಲೇ ಆಕೆಯ 16ನೇ ವರ್ಷದ ಹುಟ್ಟು ಹಬ್ಬವೂ ಇತ್ತು. ಈ…

Read More

Good News : ಸಾರ್ವಜನಿಕರಿಗ ಸಿಹಿ ಸುದ್ದಿ ; ಈ ವಸ್ತಗಳ ಬೆಲೆ ಭಾರಿ ಇಳಿಕೆ

ನವದೆಹಲಿ : ಪ್ರತಿ ಬಾರಿ ನಾವು ಯಾವುದೇ ವಸ್ತುವನ್ನ ತೆಗೆದುಕೊಂಡಾಗ, ಏನನ್ನಾದರೂ ತಿನ್ನುವಾಗ ಅಥವಾ ಕುಡಿಯುವಾಗ, ಪಾವತಿ ಮಾಡಿದಾಗ, ಜಿಎಸ್ಟಿ ನಮ್ಮನ್ನ ತೊಂದರೆಗೊಳಿಸುತ್ತದೆ. ಅದೇ ರೀತಿ ಹಳೆಯ ತೆರಿಗೆ ವ್ಯವಸ್ಥೆಯ ಪ್ರಕಾರ, ಪ್ರತಿ ರಾಜ್ಯವು ವಿಭಿನ್ನ ರೀತಿಯಲ್ಲಿ ತೆರಿಗೆಗಳನ್ನ ಸಂಗ್ರಹಿಸುತ್ತಿತ್ತು. ಕೇಂದ್ರ ಸರ್ಕಾರವು ಈ ನೀತಿಯನ್ನ ಕೊನೆಗೊಳಿಸಿದೆ ಮತ್ತು ದೇಶಾದ್ಯಂತ ಒಂದೇ ತೆರಿಗೆ ವ್ಯವಸ್ಥೆಯನ್ನ ತಂದಿದೆ. 2016ರಲ್ಲಿ, ಈ ಸಂಬಂಧ ತಿದ್ದುಪಡಿಯನ್ನ ಜಾರಿಗೆ ತರಲಾಯಿತು ಮತ್ತು 2017ರಲ್ಲಿ, ಕಾಯ್ದೆಯನ್ನು ಜಾರಿಗೆ ತರಲಾಯಿತು. ಮೋದಿ ನೇತೃತ್ವದ ಕೇಂದ್ರವು ಇದನ್ನು ನಾಲ್ಕು ಸ್ಲ್ಯಾಬ್ಗಳಾಗಿ ವಿಂಗಡಿಸಿ ತೆರಿಗೆ ಸಂಗ್ರಹಿಸುತ್ತದೆ. ಅಂದಿನಿಂದ, ಸ್ಲ್ಯಾಬ್’ಗಳಲ್ಲಿ ಹಲವಾರು ಬದಲಾವಣೆಗಳನ್ನ ಮಾಡಲಾಗಿದೆ. ಆದಾಗ್ಯೂ, ಮತ್ತೊಮ್ಮೆ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜಿಎಸ್ಟಿಯ 50ನೇ ಸಭೆಯಲ್ಲಿ, ಸ್ಲ್ಯಾಬ್ಗಳಲ್ಲಿನ ಬದಲಾವಣೆಗಳೊಂದಿಗೆ ಅವುಗಳಲ್ಲಿ ಕೆಲವನ್ನ ತೆರಿಗೆಯಿಂದ ವಿನಾಯಿತಿ ನೀಡಲಾಯಿತು. ಆರೋಗ್ಯ ಮತ್ತು ಆರೈಕೆ ಕ್ಷೇತ್ರಕ್ಕೆ ಪ್ರಮುಖ ಉತ್ತೇಜನವಾಗಿ, ಕ್ಯಾನ್ಸರ್ ವಿರುದ್ಧ ಹೋರಾಡುವ ಔಷಧಿಗಳು…

Read More

40 ದಿನ..!! 4 ಮಕ್ಕಳು..!! ದಟ್ಟಾರಣ್ಯ..!! ಬದುಕುಳಿದಿದ್ದೇ ಆಶ್ಚರ್ಯ….!!

ಕೊಲಂಬಿಯಾ ದೇಶದ ತಾಯಿಯೊಬ್ಬಳು ಮೇ ೧ ರಂದು ತನ್ನ ನಾಲ್ಕು ಮಕ್ಕಳ ಜೊತೆ ಪುಟ್ಚ ವಿಮಾನದಲ್ಲಿ ಜಾಲಿ ರೈಡ್ ಹೋಗುತ್ತಾಳೆ. ಪ್ರಾರಬ್ಧಕ್ಕೆ ಆ ವಿಮಾನ ಕ್ರಾಶ್ ಆಗಿ ಅಮೆಝಾನ್ ಕಾಡಿನಲ್ಲಿ ಉದುರಿ ಬೀಳುತ್ತದೆ. ಕಾಣೆಯಾದ ವಿಮಾನ ಹುಡುಕುತ್ತಾ ಅಮೆಝಾನ್ ಕಾಡಿಗೆ ಹೋದ ಕೊಲಂಬಿಯಾದ ಮಿಲಿಟರಿ ಜವಾನರಿಗೆ ಅಪಘಾತದಲ್ಲಿ ತಾಯಿ, ಅವಳ ಸಂಬಂಧಿ ಮತ್ತು ಪೈಲೆಟ್ ಸತ್ತು ಬಿದ್ದಿರುವುದು ಕಾಣುತ್ತದೆ.ಹೌದೂ, ಆ ನಾಲ್ಕು ಮಕ್ಕಳು? ಅವರೆಲ್ಲಿ? ದೊಡ್ಡದು 13 ವರ್ಷ. ಎರಡನೆಯದ್ದಕ್ಕೆ 9,ಮೂರನೆಯದ್ದು 4 ವರ್ಷದ್ದು. ನಾಲ್ಕನೇ ಮಗು ಪಾಪ ಇನ್ನೂ ಒಂದು ವರ್ಷದ ಕಂದಮ್ಮ! ಅವರೆಲ್ಲಿದ್ದಾರೆ ಎಂದು ಮಿಲಿಟರಿ ಶೋಧ ಶುರುಮಾಡುತ್ತದೆ. ಮಕ್ಕಳು ಜೀವಂತ ಇದ್ದಾರೆ ಎಂಬ ಗುಮಾನಿ ಮಿಲಿಟರಿಗೆ. ಅದಕ್ಕೆ ಪೂರಕವಾಗಿ ಅದು ಹುಡುಕಾಟ ನಡೆಸುತ್ತದೆ. ಕಾಡಿನ ಮೇಲೆ ಹೆಲಿಕಾಪ್ಟರ್ ಹಾರಿಸಿ ಅಲ್ಲಲ್ಲಿ ನೀರಿನ ಬಾಟಲಿ, ಸ್ನಾಕ್ಸ್ ಪೊಟ್ಟಣಗಳನ್ನು ಉದುರಿಸುತ್ತದೆ.ಮಕ್ಕಳು ಹುಟಿಟೋ ಕಮ್ಯುನಿಟಿಯವರು. ಹುಟಿಟೋ ಜನರಿಗೆ…

Read More

ಗಡಿಪಾರು ಭೀತಿಯಲ್ಲಿದ್ದ ನಟ ಚೇತನ್ ಅಹಿಂಸಾಗೆ ಹೈಕೋರ್ಟ್ ಮತ್ತೆ ಬಿಗ್ ರಿಲೀಫ್

ಬೆಂಗಳೂರು (ಜೂ. 2): ನಟ ಚೇತನ್ ಗೆ ನೀಡಿದ್ದ ಒಸಿಐ ಮಾನ್ಯತೆ ರದ್ದು ಮಾಡಿದ ವಿಚಾರದಲ್ಲಿ ಜೂನ್.20 ರವರೆಗೆ ತಡೆಯಾಜ್ಞೆ ಹೈಕೋರ್ಟ್ ವಿಸ್ತರಿಸಿದೆ. 2018 ರಲ್ಲಿ ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡ್ ಪಡೆದು ಚೇತನ್ ಭಾರತದಲ್ಲಿ ವಾಸಿಸುತ್ತಿದ್ದರು. ಈ ವೇಳೆ ಅನೇಕ ಕ್ರಾಂತಿಕಾರಿ ಚಟುವಟಿಕೆಗಳನ್ನ ಚೇತನ್ ಅಹಿಂಸಾ ರಾಜ್ಯದಲ್ಲಿ ಹಮ್ಮಿಕೊಂಡಿದ್ದರು. ಈ ರೀತಿಯ ಕ್ರಾಂತಿಕಾರಿ ಚಟುವಟಿಕೆಗಳ ವಿಚಾರದಲ್ಲಿ ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಯತ್ನ, ಭಾರತ ವಿರೋಧಿ ಚಟುವಟಿಕೆ ಆರೋಪಗಳು ಕೇಳಿ ಬಂದ ಹಿನ್ನೆಲೆ ಕೇಂದ್ರ ಸರ್ಕಾರ ನಟ ಚೇತನ್ ಅಹಿಂಸಾಗೆ ನೋಟೀಸ್ ನೀಡಿ ಉತ್ತರ ಪಡೆದಿತ್ತು ಚೇತನ್ ಉತ್ತರ ಸಮಾಧಾನಕಾರವಿಲ್ಲ‌ ಎಂದು ಕೇಂದ್ರ ನಟ ಚೇತನ್ ಪಡೆದಿದ್ದ ಒಸಿಐ ಕಾರ್ಡ್ ರದ್ದು ಮಾಡಿತ್ತು. ಇದನ್ನು ಹೈಕೋರ್ಟ್ ನಲ್ಲಿ ನಟ ಚೇತನ್ ಪ್ರಶ್ನಿಸಿದ್ದರು, ಏ.21 ರಂದು ಚೇತನ್‌ಗೆ ಹೈಕೋರ್ಟ್ ಷರತ್ತುಬದ್ದ ರಿಲೀಫ್ ನೀಡಿ ಚೇತನ್ ಅರ್ಜಿಗೆ…

Read More