All India general knowledge, Indian Talent ಪರೀಕ್ಷೆಯಲ್ಲಿ ಎಂ‌ಇಎಸ್ ಶಾಲಾ ವಿಧ್ಯಾರ್ಥಿಗಳ ಸಾಧನೆ.

ನೆಲಮಂಗಲ: ಇಂಡಿಯನ್ ಟಾಲೆಂಟ್ ಪರೀಕ್ಷೆ ಹಾಗೂ ಆಲ್ ಇಂಡಿಯಾ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ನಗರದ ಎಂ.ಇ.ಎಸ್.ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮೆರೆಸಿದ್ದಾರೆ.

 
೨೦೨೨-೨೩ ನೇ ಸಾಲಿನಲ್ಲಿ ಕಳೆದ ೨೦೨೨ರ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ನಡೆದ  ಇಂಡಿಯನ್ ಟಾಲೆಂಟ್ ಪರೀಕ್ಷೆಯಲ್ಲಿ ೧೪೦ ವಿದ್ಯಾರ್ಥಿ ಭಾಗವಹಿಸಿದ್ದು ಸುಮಾರು ೧೪ ಮಂದಿ ವಿದ್ಯಾರ್ಥಿಗಳು ಅತ್ಯುತಮ ಶ್ರೇಣಿಯಲ್ಲಿ ಉತೀರ್ಣರಾದರೇ ಶಾಲೆಯ ೫ನೇ ತರಗತಿ ಸ್ನೇಹಾ ಎಂಬಾ ವಿದ್ಯಾರ್ಥಿನಿ ವಿಜ್ಞಾನ ವಿಷಯದಲ್ಲಿ ಹಾಗೂ ೧೦ನೇ ತರಗತಿ ಎಂ.ಡಿ.ಸಿಂಚನ ಎಂಬ ವಿದ್ಯಾರ್ಥಿನಿ ಸಮಾಜ ವಿಜ್ಞಾನದಲ್ಲಿ ೫ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಅಲ್ಲದೆ ಆಲ್ ಇಂಡಿಯಾ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ  ಶಾಲೆಯ ಸುಮಾರು ೫೬೦ ಮಂದಿ ವಿದ್ಯಾರ್ಥಿ ೫ ಮಂದಿ ಅತ್ಯುತಮ ಶ್ರೇಣಿಯಲ್ಲಿ ಉತೀರ್ಣರಾಗಿದ್ದು  ಅಕ್ಷಯ್ ಎಂಬ ವಿದ್ಯಾರ್ಥಿ ಇಂಡಿಯಾ ೩೭ ಬ್ಯಾಂಕ್ ಪಡೆದು ಸ್ಕಾಲರ್ ಶಿಪ್ ಪಡೆಯಲು ಅರ್ಹನಾಗಿರುತ್ತಾರೆ. ಜತೆಗೆ  ಶಾಲೆಗೆ “ಗೋಲ್ಡನ್ ಸ್ಕೂಲ್” ಎಂಬ ಪ್ರಶಸ್ತಿಯನ್ನು ತಂದು ಕೊಟ್ಟಿರುತ್ತಾರೆ ಎಂದು  ಶಾಲೆಯ ಕಾರ್ಯದರ್ಶಿ ಕೆ.ಹೆಚ್.ಕಾಂತರಾಜು ತಿಳಿಸಿದರು.

ಶಾಲಾ ಮುಖ್ಯಶಿಕ್ಷಕಿ ಜಯಂತಿ ಮಂಜುನಾಥ್, ಶಿಕ್ಷಕ ಪವನಗೌಡ, ಚನ್ನೇಗೌಡ ಹೆಚ್, ಸುಹಾಸ್, ವೀಣಾಕುಮಾರಿ, ಟಿ.ಹೆಚ್.ಮಿನಾಕ್ಷಿ, ಸಿದ್ದಗಂಗಮ್ಮ, ಪಿ.ಹೆಚ್.ಜ್ಯೋತಿ ಮತ್ತಿತರರು ಉಪಸ್ಥಿತರಿದರು.

Related posts

Leave a Comment