ಮಗಳು ವಂಶಿಕಾ ಹೆಸರು ಬಳಸಿ ಹಣ ವಸೂಲಿ ಪ್ರಕರಣ: ನಟ ಆನಂದ್‌ ಏನಂದ್ರು!?

ಬೆಂಗಳೂರು: ಕಿರುತೆರೆ ರಿಯಾಲಿಟಿ ಶೋ ಸ್ಟಾರ್‌, ಸೋಷಿಯಲ್‌ ಮೀಡಿಯಾದಲ್ಲಿ ದೂಳೆಬ್ಬಿಸಿರುವ ಪುಟಾಣಿ ವಂಶಿಕ ಹೆಸರು ಬಳಸಿಕೊಂಡು ಹಣ ವಸೂಲಿ ಮಾಡಿರುವ ಆರೋಪದಲ್ಲಿ ವಂಶಿಕ ತಂದೆ ಮಾಸ್ಟರ್‌ ಆನಂದ್‌ ಸದಾಶಿವನಗರ ಪೊಲೀಸ್‌ ಠಾಣೆಯ ಬಳಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ದುಡ್ಡು ಇಸ್ಕೊಂಡ್ ಚಾನ್ಸ್ ಕೊಡೊದು ಈ ಪ್ರಪಂಚದಲ್ಲೇ, ಆರೋಪಿಗಳು ಇನ್ಸಾಟ್ರಾಗಾಮ್ ನಲ್ಲಿ ಎಲ್ಲರಿಗೂ ಮೇಸೆಜ್ ಮಾಡಿದ್ದಾರೆ, ನಿಶಾ ನರಸಪ್ಪ ಮೇಸೆಜ್ ಮಾಡಿ ಆಸೆ ತೋರಿಸಿದ್ದಾರೆ ಇದನ್ನು ನಂಬಿ ಜನರು ಹಣ ಹಾಕಿದ್ದಾರೆ. ನಮ್ಮ ಮಗಳ ಹೆಸರು ಮೀಸ್ ಯೂಸ್ ಆಗಿದೆ ಪೋಷಕರು ಕಣ್ಣು ಮುಚ್ಚಿ ಸಹಿ ಹಾಕಿದ್ದಾರೆ ನಾನ್ ರಿಪೆಂಡ್ ಮಾಡಲ್ಲ ಅಂತ ಕಂಡಿಷನ್ ಇರುತ್ತೆ ಸೊಷಿಯಲ್ ಮೀಡಿಯಾ ನಂಬಿ ಮೋಸ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ.

ನನ್ನ ಮಗಳು ಪತ್ನಿ ಯಶಸ್ವಿನಿ ಎರಡು ಇವೆಂಟ್ ಗೆ ಹೋಗಿದ್ದಾರೆ ಯಾರು ಹಣ ಕೊಟ್ರೇ, ಸಿನಿಮಾದಲ್ಲಿ ಚಾನ್ಸ್ ಕೊಡ್ತಾರೇ ಅನ್ನೋದು ಸುಳ್ಳು, ನಿಮ್ ಟ್ಯಾಲೇಟ್ ಇದ್ರೆ ಮಾತ್ರ ಆಕ್ಟಿಂಗ್ ಚಾನ್ಸ್ ಸಿಗುತ್ತೆ, ಸಲೆಬ್ರಿಟಿ ಪೋಟೋ ಇಟ್ಕೊಂಡು ನಿಶಾ ಹಣ ಮಾಡಿದ್ದಾರೆ ಇದನ್ನು ನಿಶಾ ಬಗೆಹರಿಸಿಕೊಳ್ಳಬೇಕು ಯಾರಿಗೆ ಮೋಸ ಹಾಕಿದೆ ಅವರಿಗೆ ನಿಶಾ ಹಣ ಮರುಪಾವತಿ ಮಾಡಬೇಕು ಎಂದು ಆಗ್ರಹಿಸಿದರು.

Related posts

Leave a Comment