ಇಬ್ಬರ ಫೋಟೋ ವೈರಲ್ ಮಾಡ್ತೇನೆ ಎಂದಿದಕ್ಕೆ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ

ಬೆಂಗಳೂರು: ಓದು ಮುಗಿಸಿ ಮಂತ್ರಿ ಮಾಲ್‌ನಲ್ಲಿ ಕೆಲಸ ಮಾಡ್ತಾ ಇದ್ಲು, ಈ ವೇಳೆ ಪ್ರೀತಿ ಪ್ರೇಮ ಪ್ರಣಯ ಅಂತಾ ಪಾರ್ಕ್ ಪಿಚ್ಚರ್ ಮಾಲ್ ಎಲ್ಲಾ ಕಡೆ ಸುತ್ತಾಡುತ್ತಿದಳು, ಅದೇಗೋ ಈಕೆಯ ಪ್ರೇಮದಾಟದ ವಿಚಾರ ಮನೆಯವರಿಗೆ ತಿಳಿದು ಬಿಟ್ಟಿದೆ, ಮನೆಯವರು ವಿರೋಧಾನು ಮಾಡುದ್ರು, ಪ್ರಿಯಕರನು ನಿನ್ನ ನಾ ಬಿಡೋದಿಲ್ಲ ಅಂತ. ನೀ ಕೊಡೆ ನಾ ಬಿಡೆ ಅನ್ನೋ ಜಂಜಾಟದಲ್ಲಿ ಆಕೆ ನೇಣುಬಿಗಿದುಕೊಂಡ ಸಾವನ್ನಪ್ಪಿದ್ದಾಳೆ.

ಈ ಫೋಟೋದಲ್ಲಿ ಕಾಣ್ತಾ ಇರೋ ಈಕೆ 21 ವರ್ಷದ ಆಶಾ, ನೋಡೋಕು ಅಂದ ಚಂದವಾಗೆ ಇದಾಳೆ, ಕೈ ಮೇಲೆ ಎ ಅಂತ ಅಂದವಾಗಿ ಟ್ಯಾಟೋ ಸಹ ಹಾಕಿಕೊಂಡಿದ್ದಾಳೆ. ಎ ಅಂದ್ರೆ ಆಶಾ ಅಂತಲ್ಲ ಅಸಲಿಗೆ ಈಕೆಯ ಪ್ರಿಯಕರನ ಹೆಸರು ಅವಿನಾಶ್ ಅಂತ. ಗಟ್ಟಿ ಮುಟ್ಟಾಗಿದ್ದ ಇವರ ಪ್ರೇಮ ಬಂಧನಕ್ಕೆ ಹೆತ್ತವರ ವಿರೋಧ ವ್ಯಕ್ತವಾಗಿತ್ತಿ, ಪ್ರಿಯಕರ ನಾ ನಿನ್ನ ಬಿಟ್ಟಿರಲಾರೆ, ನೀನು ನಮಗೆ ಮೋಸ ಮಾಡುದ್ರೆ ನಿನ್ನ ನಮ್ಮಿಬ್ಬರ ಫೋಟೋ ವೈರಲ್ ಮಾಡ್ತೇನೆ ಅಂದಿದ್ದಕ್ಕೆ ಮನನೊಂದ ಆಶಾ ತಾನಿದ್ದ ಮನೆ ರೂಮಿನಲ್ಲಿರುಅ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣ ವ್ಯಾಪ್ತಿಯ ಮಲ್ಲಸಂದ್ರದಲ್ಲಿ ಘಟನೆ ನಡೆದಿದೆ.‌

ಮೃತೆ ಆಶಾ ಕಳೆದ ಐದು ವರ್ಷಗಳಿಂದ ಅವಿನಾಶ್ ಎನ್ನುವ ಯುವಕನನ್ನ ಪ್ರೀತಿಸುತ್ತಿದ್ದಳಂತೆ. ಮಂತ್ರಿ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಆಶಾ ತನ್ನ ಪ್ರಿಯಕರ ಅವಿನಾಶ್ ಜೊತೆಗೆ ಪಾರ್ಕ್ ಸಿನಿನಾ ಅಂತಾ ಸುತ್ತಾಡುತ್ತಿದ್ದಳಂತೆ. ಪ್ರೀತಿ ವಿಷಯವನ್ನ ಮನೆಯವರಿಗೂ ತಿಳಿಸಿದ್ದಳಂತೆ, ಪ್ರೀತಿ ಎಲ್ಲಾ ನಮಗೆ ಬೇಡಮ್ಮ ಎಂದು ಬುದ್ದಿ ಹೇಳಿದ್ದರಂತೆ.

Read this: ಮ್ಯಾಜಿಕ್ ಮಾಡಲು ಹೋಗಿ ಕುತ್ತಿಗೆಗೆ ಚಾಕು ಹಾಕಿದ ಜಾದುಗಾರ!!?

ಈ ವಿಷಯವನ್ನ ಮೃತೆ ಆಶಾ ತನ್ನ ಪ್ರಿಯಕರನಿಗೆ ಮನೆಯವರ ವಿರೋಧದ ವಿಷಯ ತಿಳಿಸಿದಳಂತೆ. ಸದ್ಯಕ್ಕೆ ಪ್ರೀತಿ ಎಲ್ಲಾ ಬೇಡ ಎಂದಿದ್ದಕ್ಕೆ ನೀನು ನನಗೆ ಮೋಸ ಮಾಡಿದ್ಯ, ಇದೆಲ್ಲ ಪ್ರೀತಿ ಮಾಡೋಕು ಮುಂಚೇನೆ ಯೋಚ್ನೆ ಮಾಡ್ಬೇಕಿತ್ತು, ನೀನು ನನ್ನ ಬಿಟ್ತೋಗಬೇಡ ಒಂದು ವೇಳೆ ಬಿಟ್ಟೊದರೆ ನಾನು ನಮ್ಮಿಬ್ಬರ ಫೋಟೋ ವೈರಲ್ ಮಾಡ್ತೇನೆ ಎಂದಿದ್ದನಂತೆ. ಇದರಿಂದ ಮನನೊಂದ ಆಶಾ ತನ್ನ ಮನೆಯವರ ಮಾತು ಕೇಳಲ ಇಲ್ಲ ಪ್ರಿಯಕರನ ಮಾತು ಕೇಳಲ ಎಂದು ಬೇಸರವಾಗಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ. ಇತ್ತ ಮೃತಳ ಕುಟುಂಬಸ್ಥರು ತನ್ನ ಮಗಳ ಕಣ್ಣುಗಳನ್ನ ದಾನ ಮಾಡಿ ಇಬ್ಬರಿಗೆ ಬೆಳಕಾಗಿದ್ದಾರೆ.

ಸದ್ಯ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವಕನನ್ನ ವಿಚಾರಣೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ಪೊಲೀಸರ ತನಿಖೆಯಿಂದಷ್ಟೆ ಈ ಸಾವಿಗೆ ನೈಜ್ಯ ಕಾರಣ ತಿಳಿದುಬರಬೇಕಿದೆ.

Related posts

Leave a Comment