ಪ್ರೀತಿಸಿ ಮದುವೆಯಾದ ಯುವಕನಿಗೆ ಯುವತಿ ಕುಟುಂಬಸ್ಥರಿಂದ ಹಲ್ಲೆ

ಬೆಂಗಳೂರು: ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಜೋಡಿಗೆ ಯುವತಿಯ ಪೋಷಕರು ನಿರಂತರ ಕಿರುಕುಳ ನೀಡುತ್ತಿದ್ದು, ಇದೇ ವಿಚಾರದಲ್ಲಿ ಯುವಕನಿಗೆರ ಯುವತಿಯ ಪೋಷಕರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ವರ್ತೂರು ಪೊಲೀಸ್‌ ಠಾಣ ವ್ಯಾಪ್ತಿಯ ಮುರುಳಿ(25)ಕೃತಿಕಾ(19) ಪ್ರೀತಿಸಿ ಮದುವೆ ಮಾಡಿಕೊಂಡಿದ್ದರು. ಇದೇ ವಿಚಾರಕ್ಕೆ ಎರಡು ದಿನಗಳ ಹಿಂದೆ ಯುವತಿ ಸೋದರ ಮಾವ ಸೋದರ ಮಾವ ನಾಗರಾಜು,ಸಂಬಂಧಿ ಮಂಜುನಾಥ್ ಸೇರಿ ಮೂವರಿಂದ ಯುವಕನ ಮುರುಳಿ ಮೇಲೆ ಲಾಂಗ್‌ ನಿಂದ ಹಲ್ಲೆ ನಡೆದಿದೆ.

ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರೋ ಘಟನೆ ನಡೆದಿದ್ದು ಯುವಕನಿಗೆ ಮಾರಣಾಂತಿಕ ಹಲ್ಲೆಯಾಗಿದೆ ಎಂದು ಯುವತಿ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ಸದ್ಯ ಆರೋಪಿ ಮಂಜುನಾಥ್ ನನ್ನು ವರ್ತೂರು ಪೊಲೀಸರು ಬಂಧಿಸಿದ್ದು ಪ್ರಮುಖ ಆರೋಪಿ ನಾಗರಾಜ್ ಎಸ್ಕೇಪ್ ಆಗಿರುವ ಹಿನ್ನೆಲೆ ಹುಡುಕಾಟ ನಡೆಸಿದ್ದಾರೆ.

Related posts

Leave a Comment