ಹೆದ್ದಾರಿ ಪಕ್ಕದ ಮೋರಿಯಲ್ಲಿ ಪತ್ತೆಯಾತ್ತು ಶವ: ಸಾವಿನ ಬಗ್ಗೆ ಸೃಷ್ಟಿಯಾಗಿವೇ ಸಾಕಷ್ಟು ಅನುಮಾನ: ಇದು ಅಪಘಾತನ ಅಥವಾ ಕೊಲೆನ?

ನೆಲಮಂಗಲ: ನಗರದ ರಾ.ಹೆದ್ದಾರಿ೪೮ರ ದಾನೋಜಿಪಾಳ್ಯ ಬಳಿ ಅನುಮಾನಸ್ಪದ ರೀತಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಮೃತ ದೇಹ ಪತ್ತೆಯಾಗಿದೆ. ದೊಡ್ಡಬಳ್ಳಾಪುರ ನಗರದ ಬಸವೇಶ್ವರಬಡಾವಣೆ ನಿವಾಸಿ ಸಂತೋಷ್‌ಕುಮಾರ್(೩೨) ಮೃತ ವ್ಯಕ್ತಿ ಎಂದು ಗುರುತಿಸಿಲಾಗಿದೆ.

ಏನಿದು ಘಟನೆ: ಆ.೦೫ರಂದು ಶನಿವಾರ ಮದ್ಯಾಹ್ನ ೧೨ ಗಂಟೆ ವೇಳೆಯಲ್ಲಿ ಸ್ಥಳೀಯರೊಬ್ಬರು ದಾನೋಜಿಪಾಳ್ಯ ಬಳಿ ಮೊರಿಯೊಂದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಬಿದ್ದಿದನ್ನು ಕಂಡು ತಕ್ಷಣ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಸ್ಥಳದಕ್ಕೆ ಆಗಮಿಸಿದ್ದ ನಗರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಶಶಿಧರ್ ಪರಿಶೀಲನೆ ನಡೆಸಿದ್ದು ಮೃತ ವ್ಯಕ್ತಿಯ ಜೇಬಿನಲ್ಲಿ ಚೀಟಿಯಲ್ಲಿ ಸಂಬಂಧಿಕರೊಬ್ಬ ನಂಬರ್ ಸಿಕ್ಕಿದ್ದು ಕರೆ ಮಾಡಿ ವಿಚಾರ ತಿಳಿಸಿದ್ದು ಸ್ಥಳಕ್ಕೆ ಆಗಮಿಸಿದ್ದ ಕುಟುಂಬಸ್ಥರು ಕೈಮೇಲೆ ಅಚ್ಚೆ, ಬಟ್ಟೆ, ಕನ್ನಡಕವನ್ನು ಕಂಡು ಸಾವನ್ನಪ್ಪಿರುವ ವ್ಯಕ್ತಿ ಸಂತೋಷ್‌ಕುಮಾರ್ ಎಂದು ಗುರುತಿಸಿದ್ದಾರೆ.

ಅಪಘಾತದ ಶಂಕೆ: ಮೃತ ದೇಹ ಪತ್ತೆಯಾದ ಸ್ಥಳದಲ್ಲಿ ಆ.೦೪ರಂದು ಶುಕ್ರವಾರ ಬೆಳಗ್ಗೆ ೧:೩೦ರ ವೇಳೆಯಲ್ಲಿ ಆಟೋ ಮತ್ತು ಕಾರು ನಡುವೆ ಅಪಘಾತ ಸಂಬಂವಿಸಿದ್ದು ಆಟೋದಲ್ಲಿದ್ದ ೩ ಮಂದಿ ಹಾಗೂ ಕಾರಿನಲ್ಲಿ ಇಬ್ಬರು ಗಾಯಾಳಾಗಿದ್ದು ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬಹುಶಃ ಈ ಅಪಘಾತದಲ್ಲಿ ಮೃತ ಪಟ್ಟಿರಬಹುದಾದ ಪಾದಾಚಾರಿ ಎಂದು ಪೊಲೀಸರು ಆರಂಭದಲ್ಲಿ ಶಂಕಿಸಿದ್ದರು. ಬಳಿಕ ಸಂಚಾರಿ ಠಾಣೆಯಿಂದ ಪಡೆದ ಮಾಹಿತಿ ಆಧರಿಸಿ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳನ್ನ ಸಂಪರ್ಕಿಸಿದಾಗ ಸಂತೋಷ್ ಮೃತ ದೇಹವನ್ನು ಗೊತ್ತಿಲ್ಲ ಎಂದು ತಿಳಿಸಿದರು. ಅಲ್ಲದೆ ಅಪಘಾತವಾದ ವೇಳೆ ಯಾವುದೇ ಪಾದಾಚಾರಿಗೆ ನಮ್ಮ ವಾಹನಗಳು ಡಿಕ್ಕಿ ಹೊಡೆದಿದ್ದ ಎಂದಿದ್ದಾರೆ. ಬಳಿಕ ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು ಸ್ಥಳಕ್ಕೆ ಆಗಮಿಸಿ ಮೃತ ದೇಹ ಪತ್ತೆ ಸ್ಥಳದಲ್ಲಿ ಪರಿಶೀಲನೆ ನಡೆಸಿ ಕೆಲ ಮಾಹಿತಿಗಳೊಂದಿಗೆ ಕೆಲ ವಸ್ತುಗಳನ್ನು ಸಂಗ್ರಹಿಸಿದರು.

ಸಾವಿನಲ್ಲಿ ಅನುಮಾನ: ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ದೊಡ್ಡಕುಂಚಿ ಗ್ರಾಮದ ನಿವಾಸಿಯಾಗಿದ್ದ ಸಂತೋಷ್‌ಕುಮಾರ್ ಚಾಟ್ಸ್ ಅಂಗಡಿ ನಡೆಸುತ್ತಿದ್ದು ಕಳೆದ ೧೫ ವರ್ಷದಿಂದ ಬಸವೇಶ್ವರ ಬಡಾವಣೆ ಮನೆ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿದ್ದ. ಕಳೆದ ೪ವರ್ಷದ ಹಿಂದೆ ತಂದೆ ನಂಜುಂಡೇಗೌಡರ ಸಹೋದರಿ ಮಣಿ ಎಂಬಾಕೆಯ ಪುತ್ರಿ ದಿವ್ಯಾ ಎಂಬಾಕೆಯನ್ನು ವಿವಾಹವಾಗಿದ್ದು ೩ ವರ್ಷದ ಗಂಡು ಮಗುವಿದೆ. ಒಂದು ವಾರದ ಹಿಂದಿಯಷ್ಟೆ ಪತ್ನಿ ದಿವ್ಯಾಳೊಂದಿಗೆ ನಂಜನಗೂಡಿನ ದೇವಾಲಯಕ್ಕೆ ತೆರಳಿದ್ದು ವಾಪಾಸ ಬರುವ ವೇಳೆ ಪತ್ನಿಯನ್ನು ಚಿಕ್ಕಚಾಗಹಳ್ಳಿಯ ತವರು ಮನೆಯಲ್ಲಿ ಬಿಟ್ಟಿದ್ದ. ಮೃತ ಸಂತೋಷ್ ಕಳೆದ ಐದಾರು ದಿನಗಳ ಹಿಂದೆ ಹಿಂದೆ ಸ್ನೇಹಿತರೊಂದಿಗೆ ಕಾರು ತಗೆದುಕೊಂಡು ಹೋಗಿದ್ದ ಮನೆಗೆ ಬಂದಿದನ್ನು ಕಂಡು ಸಂತೋಷ್ ಸಾವಿನಲ್ಲಿ ಅನುಮಾನವಿದೆ ಎಂದು ಮೃತ ಕುಟುಂಬಸ್ಥರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ನಗರ ಪೊಲೀಸ್ ಠಾಣೆ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

Related posts

Leave a Comment