ಮಾಲೀಕನ ಹೆಂಡತಿಯ ಮೇಲೆ ಹತ್ಯಾಚಾರಕ್ಕೆ ಯತ್ನ: ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು

ನೆಲಮಂಗಲ: ತಾನೂ ಕೆಲಸ ಮಾಡುತ್ತಿದ್ದ ಮಾಲಿಕನ ಪತ್ನಿಯ ಫೋಟೋ ತೆಗೆದುಕೊಂಡು ಗಂಡನಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿ ವಿರುದ್ದ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಲಮಂಗಲ ನಗರ ವ್ಯಾಪ್ತಿಯಲ್ಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನ ಅರೊಪಿ ಕಳೆದ ನಾಲ್ಕು ತಿಂಗಳ ಹಿಂದೆ ತಾನು ಕೆಲಸ ಮಾಡುತ್ತಿದ್ದ ಅಂಗಡಿಯ ಮಾಲೀಕನ ಹೆಂಡತಿಯ ಮೇಲೆ ಹತ್ಯಾಚಾರಾಕ್ಕೆ ಯತ್ನಿಸಿದ್ದ, ಮರ್ಯಾದೆ ಅಂಜಿ ದೂರು ನೀಡದೆ  ಆತನನ್ನ ಕೆಲಸದಿಂದ ತೆಗೆದಿದ್ದರು.

ಇದಾದ ಬಳಿಕ ಆರೋಪಿ ತನ್ನ ಮೊಬೈಲ್‌ನಲ್ಲಿ ಗೌಪ್ಯವಾಗಿ ಸೆರೆಹಿಡಿದಿದ್ದ ಮಹಿಳೆಯ ಫೋಟೋಗಳನ್ನ ಆತನ ಗಂಡನಿಗೆ ಫೋಟೋಗಳನ್ನ ಕಳುಹಿಸಿ ಬ್ಲಾಕ್ ಮೇಲ್ ಮಾಡಿದ್ದಾನೆ.

ನೀನು ನಿನ್ನ ಹೆಂಡತಿಯನ್ನ ಬಿಟ್ಟು ಬಿಡು, ನಾನು ಅವಳನ್ನ ಮದುವೆಯಾಗುತ್ತೇನೆ ಎಂದು ಗಂಡನ ಮೊಬೈಲ್‌ಗೆ ಕರೆ ಮಾಡಿದ್ದಾನೆ. ಇಷ್ಟೆಲ್ಲಾ ಬೆಳವಣಿಗೆಗಳ ಬಳಿಕ ಆರೋಪಿ ಕಿರುಕುಳಕ್ಕೆ ಬೇಸತ್ತು ಗಂಡ ಹೆಂಡತಿ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಏನಿದೆ: ಅಂಗಡಿಯಲ್ಲಿ, ಕೆಲಸ ಮಾಡುವ ಎಲ್ಲ ಹುಡುಗರಿಗೂ ಮದ್ಯಾಹ್ನದ ಊಟವನ್ನು ನಾನೇ ಮಾಡುತ್ತಿದ್ದು, ಅಬ್ರಾ‌ ಮದ್ಯಾಹ್ನದ ವೇಳೆ ಮನೆಗೆ ಬಂದು ಊಟವನ್ನು ತೆಗೆದುಕೊಂಡು ಹೋಗುತ್ತಿದ್ದನು. ಹೀಗೆ 6 ತಿಂಗಳ ಹಿಂದೆ ಅಂದರೆ ಸುಮಾರು ಪೆಬ್ರವರಿ ಮೊದಲ ವಾರದಲ್ಲಿ ಒಂದು ದಿನ ಊಟ ತೆಗೆದುಕೊಂಡು ಹೋಗಲು ಅರೊಪಿ ಮನೆಗೆ ಬಂದಾಗ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅವನು ನನ್ನನ್ನು ತಬ್ಬಿಕೊಂಡು ನನ್ನ ಮೈ ಕೈ ಎದೆ ತೊಡೆಯನ್ನೆಲ್ಲಾ ಮುಟ್ಟಿ ಬಲವಂತವಾಗಿ ನನ್ನ ಬಟ್ಟೆ ಕಳಚಿ ಲೈಂಗಿಕ ಕ್ರಿಯೆ ನಡೆಸಲು ಪ್ರಯತ್ನಪಟ್ಟನು.

ನಾನು ಗಾಬರಿಯಿಂದ ಜೋರಾಗಿ ನೂಕಿ ಅವನ ಮೇಲೆ ಗಲಾಟೆ ಮಾಡುತ್ತಲೇ ಅವನು ಅಲ್ಲಿಂದ ಓಡಿ ಹೋದನು. ನಾನು ಈ ವಿಚಾರವನ್ನು ನನ್ನ ಗಂಡನಿಗೆ ಹೇಳಿದಾಗ ಅವರು ಇದನ್ನು ದೊಡ್ಡದು ಮಾಡುವುದು ಬೇಡ ಎಂದು ಹೇಳಿ ಅವನನ್ನು ಅವತ್ತಿನಿಂದಲೇ ಕೆಲಸದಿಂದ ತೆಗೆದು ಹಾಕಿದರು. ಅಂದಿನಿಂದ ಅವನು ಕೆಲಸಕ್ಕೆ ಬರುತ್ತಿರುವುದಿಲ್ಲ. ಅವನು ಕೆಲಸ ಬಿಟ್ಟು ಹೋಗುವಾಗಲೇ ನನ್ನ ಗಂಡನಿಗೆ ನಿನ್ನ ಸಾಯಿಸದೇ ಬಿಡುವುದಿಲ… ನಿನ್ನ ಸಂಸಾರಕ್ಕೆ ಒಂದು ಗತಿ ಕಾಣಿಸುತ್ತೇನೆ ಅಂತ ಬೆದರಿಕೆ ಹಾಕಿದನು, ಸ್ವಲ್ಪ ದಿನ ಕಳೆದ ನಂತರ ಆತನ ಮೊಬೈಲ್ ನಂಬರ್ ಬಿಡುವುದಿಲ್ಲ. ನಿನ್ನ ಸಂಸಾರಕ್ಕೆ ಒಂದು ಗತಿ ಕಾಣಿಸುತ್ತೇನೆ ಅಂತ ಬೆದರಿಕೆ ಹಾಕಿದ್ದನು, ಸ್ವಲ್ಪ ದಿನ ಕಳೆದ ನಂತರ ಆತನ ಮೊಬೈಲ್ ನಂಬರ್ ನಿಂದ ನನ್ನ ಗಂಡನ ಫೋನ್‌ಗೆ ನನ್ನ ಪೋಟೊ ಕಳುಹಿಸಿ ನನ್ನ ಬಳಿ ನಿನ್ನ ಹೆಂಡತಿಯ ಎಂತೆಂತದೋ ಪೋಟೋ ಇದೆ ಕಳುಹಿಸುತ್ತೇನೆ ನಿಮ್ಮ ಮರ್ಯಾದೆ ಕಳೆಯುತ್ತೇನೆ ಸೂಳೆ ಮಗನೆ ನನ್ನನ್ನೇ ಕೆಲಸದಿಂದ ತಗೆಯುತ್ತೀಯ ಅಂತ ಬೈದನು, ಆದರೆ ನಾವು ಈ ವಿಚಾರವನ್ನು ದೊಡ್ಡದು ಮಾಡುವುದು ಬೇಡವೆಂದು ಸುಮ್ಮನಾದೆವು.

ಇದಾದ ಕೆಲವೇ ದಿನಗಳಲ್ಲಿ, ಆತನು ನನ್ನ ಗಂಡನಿಗೆ ಬೇರೆ ಬೇರೆ ನಂಬರ್ಗಳಲ್ಲಿ ಪೋನ್ ಮಾಡಿ ನೀನು ನಿನ್ನ ಹೆಂಡತಿಯನ್ನು ಬಿಟ್ಟು ಬಿಡು, ನಾನು ಅವಳನ್ನು ಮದುವೆಯಾಗುತ್ತೆ ಗಾಂಡು ನನ್ನ ಮಗನೇ ಅಂತ ಕೆಟ್ಟದಾಗಿ ಬೈದನು, ಜೊತೆಗೆ ನನ್ನ ಗಂಡನಿಗೆ ನನ್ನ ಬಗ್ಗೆ ಇಲ-ಸಲದ ಸುಳ್ಳನ್ನು ಹೇಳಿ ನಮ್ಮಿಬ್ಬರಿಗೂ ಜಗಳ ಆಗುವಂತೆಯೂ ಮಾಡಲು ಪ್ರಯತ್ನ ಮಾಡಿರುತ್ತಾನೆ. ಆರೋಪಿ ನಮ್ಮ ಮನೆಗೆ ಬಂದು ಹೋಗುವಾಗಲೋ ಅಥವಾ ನಾನು ಅಂಗಡಿಗೆ ಹೋದಾಗಲೋ ನನಗೆ ಗೊತ್ತಾಗದಂತೆ ನನ್ನ ಫೋಟೋ ಮತ್ತು ವಿಡಿಯೋಗಳನ್ನು ನನಗೆ ಗೊತ್ತಿಲದೆ ತೆಗೆದುಕೊಂಡಿರುತ್ತಾನೆ. ಅರೊಪಿ ನನಗೆ ಮತ್ತು ನನ್ನ ಗಂಡನಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿರುತ್ತಾನೆ. ಇದು ನಮಗೆ ತೀರಾ ವೈಯುಕ್ತಿಕ ವಿಚಾರವಾದ್ದರಿಂದ ಮರ್ಯಾದೆಗೆ ಅಂಜಿ ಇಷ್ಟು ದಿನ ದೂರು ನೀಡಲು ತಡಮಾಡಿದ್ದು, ಆದರೂ ಈತನ ಕಿರುಕುಳ ಮುಂದುವರೆದಿದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡುತ್ತಿರುತ್ತೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Related posts

One Thought to “ಮಾಲೀಕನ ಹೆಂಡತಿಯ ಮೇಲೆ ಹತ್ಯಾಚಾರಕ್ಕೆ ಯತ್ನ: ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು”

Leave a Comment