40 ದಿನ..!! 4 ಮಕ್ಕಳು..!! ದಟ್ಟಾರಣ್ಯ..!! ಬದುಕುಳಿದಿದ್ದೇ ಆಶ್ಚರ್ಯ….!!

ಕೊಲಂಬಿಯಾ ದೇಶದ ತಾಯಿಯೊಬ್ಬಳು ಮೇ ೧ ರಂದು ತನ್ನ ನಾಲ್ಕು ಮಕ್ಕಳ ಜೊತೆ ಪುಟ್ಚ ವಿಮಾನದಲ್ಲಿ ಜಾಲಿ ರೈಡ್ ಹೋಗುತ್ತಾಳೆ. ಪ್ರಾರಬ್ಧಕ್ಕೆ ಆ ವಿಮಾನ ಕ್ರಾಶ್ ಆಗಿ ಅಮೆಝಾನ್ ಕಾಡಿನಲ್ಲಿ ಉದುರಿ ಬೀಳುತ್ತದೆ. ಕಾಣೆಯಾದ ವಿಮಾನ ಹುಡುಕುತ್ತಾ ಅಮೆಝಾನ್ ಕಾಡಿಗೆ ಹೋದ ಕೊಲಂಬಿಯಾದ ಮಿಲಿಟರಿ ಜವಾನರಿಗೆ ಅಪಘಾತದಲ್ಲಿ ತಾಯಿ, ಅವಳ ಸಂಬಂಧಿ ಮತ್ತು ಪೈಲೆಟ್ ಸತ್ತು ಬಿದ್ದಿರುವುದು ಕಾಣುತ್ತದೆ.
ಹೌದೂ, ಆ ನಾಲ್ಕು ಮಕ್ಕಳು? ಅವರೆಲ್ಲಿ?

ದೊಡ್ಡದು 13 ವರ್ಷ. ಎರಡನೆಯದ್ದಕ್ಕೆ 9,ಮೂರನೆಯದ್ದು 4 ವರ್ಷದ್ದು. ನಾಲ್ಕನೇ ಮಗು ಪಾಪ ಇನ್ನೂ ಒಂದು ವರ್ಷದ ಕಂದಮ್ಮ!

ಅವರೆಲ್ಲಿದ್ದಾರೆ ಎಂದು ಮಿಲಿಟರಿ ಶೋಧ ಶುರುಮಾಡುತ್ತದೆ.

ಮಕ್ಕಳು ಜೀವಂತ ಇದ್ದಾರೆ ಎಂಬ ಗುಮಾನಿ ಮಿಲಿಟರಿಗೆ. ಅದಕ್ಕೆ ಪೂರಕವಾಗಿ ಅದು ಹುಡುಕಾಟ ನಡೆಸುತ್ತದೆ. ಕಾಡಿನ ಮೇಲೆ ಹೆಲಿಕಾಪ್ಟರ್ ಹಾರಿಸಿ ಅಲ್ಲಲ್ಲಿ ನೀರಿನ ಬಾಟಲಿ, ಸ್ನಾಕ್ಸ್ ಪೊಟ್ಟಣಗಳನ್ನು ಉದುರಿಸುತ್ತದೆ.
ಮಕ್ಕಳು ಹುಟಿಟೋ ಕಮ್ಯುನಿಟಿಯವರು. ಹುಟಿಟೋ ಜನರಿಗೆ ಕಾಡೆಂದರೆ ಕ್ಯಾರೇ ಇಲ್ಲ. ಹೀಗಾಗಿ ಮಕ್ಕಳು ಕಾಡಿಗೆ,ಅದರ ಸವಾಲಿಗೆ ಜಗ್ಗುವುದಿಲ್ಲ ಎಂಬುದು ಮಿಲಿಟರಿಯ ವಿಶ್ವಾಸ.
ಮಕ್ಕಳ ಅಜ್ಜಿಯ ಧ್ವನಿ ದಾಖಲಿಸಿ, ಮಕ್ಳೇ ಎಲ್ಲೂ ಹೋಗ್ಬೇಡಿ, ಅಲ್ಲೇ ಇರಿ ಎನ್ನುವ ಕೂಗನ್ನು ದೊಡ್ಡದಾಗಿ ಕಾಡೊಳಗೆ ಹರಿಯಬಿಡುತ್ತಾರೆ.
ನಲುವತ್ತು ದಿನಗಳಾದವು.
ಇಂದು ಆ ನಾಲ್ಕೂ ಮಕ್ಕಳು ಅಮೆಝಾನ್ ಎಂಬ ದಟ್ಟಡವಿಯೊಳಗೆ ಪತ್ತೆಯಾಗಿದ್ದಾರೆ.
ಮಕ್ಕಳ ಜೊತೆ ಇರುವ ಫೋಟೋಗಳನ್ನು ಮಿಲಿಟರಿ ಪ್ರಕಟಿಸಿದೆ.

How amazing!!

ಈ ಮಕ್ಕಳು ವಿಮಾನ ಕ್ರಾಶ್ ಆಗಿಯೂ ಬದುಕಿದ್ದಾರೆ, ಅಮೆಝಾನ್ ಕಾಡೊಳಗೆ ನಲುವತ್ತು ದಿನ ಕಳೆದೂ ಬದುಕಿದ್ದಾರೆ!!
ಅವರೇನು ತಿಂದರೋ ಅದೇನು ಕುಡಿದರೋ? ಆ ಅಡವಿಯ ಮೃಗಗಳೂ ಮಕ್ಕಳತ್ತ ಸುಳಿದಾಡಲಿಲ್ಲ!!
ಆ ಮೂರು ಪುಟಾಣಿಗಳು, they kept a year old baby alive as well!

ಮಕ್ಕಳು ಕ್ಷೇಮವಾಗಿ ಸಿಕ್ಕರು ಅಂತ ಕೊಲಂಬಿಯಾದ ಅಧ್ಯಕ್ಷ ಗುಸ್ತಾವೊ ಪೆಟ್ರೋ ಕುಣಿದಾಡಿದ್ದಾನೆ.
“These children are today the children of peace and the children of Colombia.”ಅಂತ ಸಂಭ್ರಮಿಸಿದ್ದಾನೆ.
ಅವನೇನು ಒಬ್ಬನೇ ಸಂಭ್ರಮಿಸೋದು? ನಾನೂ ಹೇಳುತ್ತೇನೆ, “These children are today the children of peace and the children of this World”

ಜಗತ್ತಿಗೆ ಜಗತ್ತೇ ಸಂಭ್ರಮಿಸಬೇಕಾದ ಹೊತ್ತು ಇದು.

Credit: Gopalakrishna kuhtini

Related posts

Leave a Comment