ಗ್ರಾಮೀಣ ಸ್ಫೂರ್ತಿಯ ಪುನಶ್ಚೇತನ: ಈಶ ಗ್ರಾಮೋತ್ಸವದ 16ನೇ ಆವೃತ್ತಿ ಕರ್ನಾಟಕದಾದ್ಯಂತ ಆರಂಭ – Revival of rural spirit: 16th edition of Isha Gramotsav kicks off across Karnataka

ಗ್ರಾಮೀಣ ಸ್ಫೂರ್ತಿಯ ಪುನಶ್ಚೇತನ: ಈಶ ಗ್ರಾಮೋತ್ಸವದ 16ನೇ ಆವೃತ್ತಿ ಕರ್ನಾಟಕದಾದ್ಯಂತ ಆರಂಭ – Revival of rural spirit: 16th edition of Isha Gramotsav kicks off across Karnataka

ಗ್ರಾಮೀಣ ಭಾರತದ ಕ್ರೀಡಾ ಸ್ಫೂರ್ತಿಯನ್ನು ಆಚರಿಸುವ 16ನೇ ಈಶ ಗ್ರಾಮೋತ್ಸವದ ಕ್ಲಸ್ಟರ್ ಮಟ್ಟದ ಕ್ಲಸ್ಟರ್ ಮಟ್ಟದ ಪಂದ್ಯಗಳು ಕರ್ನಾಟಕದ 6 ಜಿಲ್ಲೆಗಳಾದ ಕೊಡಗು, ಬೆಂಗಳೂರು ಗ್ರಾಮಾಂತರ, ವಿಜಯಪುರ, ತುಮಕೂರು, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ನಡೆಯಿತು. ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ನವೆಂಬರ್ 23, 2024ರಂದು ಪುರುಷರ ವಾಲಿಬಾಲ್ ಪಂದ್ಯಗಳು ನಡೆದರೆ, ಕೊಡಗು, ವಿಜಯಪುರ ಮತ್ತು ತುಮಕೂರಿನಲ್ಲಿ ನವೆಂಬರ್ 23 ಮತ್ತು 24, 2024ರಂದು ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ಥ್ರೋಬಾಲ್ ಪಂದ್ಯಗಳು ನಡೆದವು. ಇದು ಈ ಹಿಂದೆ ಕರ್ನಾಟಕದ 10 ಜಿಲ್ಲೆಗಳಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪಂದ್ಯಗಳ ಎರಡನೇ ಹಂತವಾಗಿದೆ.

ಪಂದ್ಯಗಳ ಅತಿಥಿಗಳಲ್ಲಿ ಧೀರಜ್ ಮುನಿರಾಜು, ಶಾಸಕರು, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ; ಅಮರೇಶ್ ಗೌಡ, ಸರ್ಕಲ್ ಇನ್ಸ್​​​​ಪೆಕ್ಟರ್​​​​​​​, ದೊಡ್ಡಬಳ್ಳಾಪುರ; ಕಾರ್ತಿಕೇಶ್ವರ, ಕಮಿಷನರ್, ದೊಡ್ಡಬಳ್ಳಾಪುರ; ಸುಮಿತ್ರಮ್ಮ, ಪುರಸಭೆ ಅಧ್ಯಕ್ಷರು, ದೊಡ್ಡಬಳ್ಳಾಪುರ ಮತ್ತು ಬೆಂಗಳೂರಿನ ಜನಪ್ರಿಯ ಸಾಮಾಜಿಕ ಜಾಲತಾಣದ ಪ್ರಭಾವಿಕರಾದ ಮಧುಸೂದನ ಗೌಡ ಉಪಸ್ಥಿತರಿದ್ದರು.

ವಿಜೇತ ತಂಡಗಳು ಮತ್ತು ಉಪವಿಜೇತ ತಂಡಗಳು ಕೊಯಂಬತ್ತೂರಿನ ಈಶ ಯೋಗ ಕೇಂದ್ರದ ಆದಿಯೋಗಿ ಎದುರು ನಡೆಯಲಿರುವ ಅಂತಿಮ ಸ್ಪರ್ಧೆಗೆ ಮುನ್ನ ವಿಭಾಗೀಯ ಮಟ್ಟದ ಪಂದ್ಯಗಳಲ್ಲಿ ಭಾಗವಹಿಸಲಿವೆ. ಈ ಸ್ಪರ್ಧೆಯಲ್ಲಿ 52 ಲಕ್ಷ ರೂಪಾಯಿಗಳ ಬಹುಮಾನದ ಮೊತ್ತವಿದ್ದು, ಗ್ರಾಮೀಣ ಕ್ರೀಡಾ ಸ್ಫೂರ್ತಿಯನ್ನು ಹಿಂದೆಂದೂ ಇಲ್ಲದಂತೆ ಆಚರಿಸಲಾಗುತ್ತಿದೆ.

2004ರಲ್ಲಿ ಸದ್ಗುರು ಅವರು ಪ್ರಾರಂಭಿಸಿದ ಈಶ ಗ್ರಾಮೋತ್ಸವವು ಗ್ರಾಮೀಣ ಜನರ ಜೀವನದಲ್ಲಿ ಕ್ರೀಡೆ ಮತ್ತು ಆಟದ ಸ್ಫೂರ್ತಿಯನ್ನು ತರುವ ವಿಶಿಷ್ಟ ಸಾಮಾಜಿಕ ಉಪಕ್ರಮವಾಗಿದೆ. ವೃತ್ತಿಪರ ಆಟಗಾರರಿಗೆ ಅವಕಾಶವಿಲ್ಲದ ಈ ವಿಶಿಷ್ಟ ಕಾರ್ಯಕ್ರಮವು ದಿನಗೂಲಿ ಕಾರ್ಮಿಕರು, ಮೀನುಗಾರರು, ಗೃಹಿಣಿಯರು ಸೇರಿದಂತೆ ಸಾಮಾನ್ಯ ಗ್ರಾಮೀಣ ಜನರು ತಮ್ಮ ದೈನಂದಿನ ಕೆಲಸಗಳಿಂದ ವಿರಾಮ ಪಡೆದು ಕ್ರೀಡೆಯ ಸಂಭ್ರಮ ಮತ್ತು ಒಗ್ಗಟ್ಟಿನ ಶಕ್ತಿಯನ್ನು ಆನಂದಿಸಲು ಅವಕಾಶ ಕಲ್ಪಿಸುತ್ತದೆ.

ಎರಡು ತಿಂಗಳುಗಳ ಕಾಲ ನಡೆಯುವ ಈ ಕ್ರೀಡಾ ಮಹೋತ್ಸವವು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ಸೇರಿದಂತೆ ದಕ್ಷಿಣ ರಾಜ್ಯಗಳಾದ್ಯಂತ ನಡೆಯುತ್ತದೆ.

162ಕ್ಕೂ ಹೆಚ್ಚು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಈಶ ಗ್ರಾಮೋತ್ಸವದಲ್ಲಿ 40,000ಕ್ಕೂ ಹೆಚ್ಚು ಆಟಗಾರರು ಭಾಗವಹಿಸುತ್ತಾರೆ, ಇದರಲ್ಲಿ 10,000ಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರು – ಹೆಚ್ಚಿನವರು ಗೃಹಿಣಿಯರು – ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಗಳಲ್ಲಿ ಸ್ಪರ್ಧಿಸುತ್ತಾರೆ.

ಗ್ರಾಮೀಣ ಸ್ಫೂರ್ತಿಯ ಪುನಶ್ಚೇತನ: ಈಶ ಗ್ರಾಮೋತ್ಸವದ 16ನೇ ಆವೃತ್ತಿ ಕರ್ನಾಟಕದಾದ್ಯಂತ ಆರಂಭ – Revival of rural spirit: 16th edition of Isha Gramotsav kicks off across Karnataka

Spread the love

Leave a Reply

Your email address will not be published. Required fields are marked *