16ರ ಬಾಲೆಗೆ ಬಂದಿತ್ತು ಬೆನ್ನುಹುರಿ ಕ್ಷಯ (Spine TB) : ಜಯಿಸಿದ್ದೆ ಅಚ್ಚರಿ, ವೈದ್ಯರಿಗೆ ಮೆಚ್ಚುಗೆ

ದೊಡ್ಡಬಳ್ಳಾಪುರ: ಆಕೆಯ ಹೆಸರು ಮುಸ್ಕಾನ್.
ಉತ್ತರ ಪ್ರದೇಶ‌‌ ಮೂಲದ ಬಡ ಕುಟುಂಬದ ಹೆಣ್ಣು‌ಮಗಳು.

ಸಣ್ಣ ವಯಸ್ಸಿನಲ್ಲೇ ಬೆನ್ನುಹುರಿ ಕ್ಷಯರೋಗಕ್ಕೆ ತುತ್ತಾಗಿದ್ದ ಮುಸ್ಕಾನ್, ಈಗ ಸಾಮಾನ್ಯರಂತೆ ಬದುಕುವಂತೆ ಓಡಾಡುವಂತೆ‌ ಮಾಡಿದ ಶ್ರೇಯ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಸಲ್ಲುತ್ತದೆ.

ವರ್ಷದ ಹಿಂದೆ ಮುಸ್ಕಾನ್ ಅವರನ್ನು ಎಳೆಯ ಮಕ್ಕಳಂತೆ ಕೈಯಲ್ಲಿ ಎತ್ತಿಕೊಂಡು ಬರಬೇಕಾದ ಪರಿಸ್ಥಿತಿ‌ ಇತ್ತು. ಬಹಳಷ್ಟು ಆಸ್ಪತ್ರೆಗಳಲ್ಲಿ ತೋರಿಸಿದರೂ ರೋಗ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಮಗಳ ಧೈನ್ಯ ಸ್ಥಿತಿ ಕಂಡು ಪೋಷಕರು‌ ನಿತ್ಯ‌ ಮರುಗುತ್ತಿದ್ದರು.

ಕೆಲಸ ಅರಸಿ ಬಂದಿದ್ದ ಆ ಕುಟುಂಬಕ್ಕೆ ಮನೆಯ ಮಾಲೀಕರು ನೆರವಾಗಿ, ದೊಡ್ಡಬಳ್ಳಾಪುರ ಆಸ್ಪತ್ರೆಗೆ ಕರೆತಂದರು. ಕ್ಲಿನಿಕಲ್ ಡಯಾಗ್ನಿಸಿಸ್ ಮಾಡಿ ಕ್ಷಯ ಪತ್ತೆ ಹಚ್ಚುವಲ್ಲಿ ವೈದ್ಯರು ಸಫಲರಾದರು. ಅದರ ಹಿಂದೆ ಪರಿಣಾಮಕಾರಿ ಚಿಕಿತ್ಸೆಯನ್ನೂ ಆರಂಭಿಸಿದರು.

ಚಿಕಿತ್ಸೆ ಪೂರ್ಣಗೊಂಡು ಶನಿವಾರಕ್ಕೆ (ಜು.15) ಒಂದು ವರ್ಷ ತುಂಬಿದ ಬೆನ್ನಲ್ಲೇ ಆಕೆಯ 16ನೇ ವರ್ಷದ ಹುಟ್ಟು ಹಬ್ಬವೂ ಇತ್ತು. ಈ ಸಂದರ್ಭವನ್ನು ಅವಿಸ್ಮರಣೀಯಗೊಳಿಸಲು ಸರ್ಕಾರಿ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಯು ಬಾಲಕಿಗೆ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಆಚರಿಸಿದರು.

ಆಸ್ಪತ್ರೆಯ ವೈದ್ಯರಾದ ಡಾ. ಮಂಜುನಾಥ್ ಹಾಗೂ ಡಾ.ಗಿರೀಶ್ ಅವರು ನಿರಂತರವಾಗಿ ಚಿಕಿತ್ಸೆ ನೀಡಿದರು. ಈಗಾಗಲೇ ಕ್ಷಯರೋಗ ಗೆದ್ದಿದ್ದ ಮುತ್ತುರಾಜ್ ಅವರು ಬಾಲಕಿಗೆ ಅಗತ್ಯವಾದ ಪೌಷ್ಟಿಕ ಆಹಾರ, ಆಧಾರ್ ಕಾರ್ಡ್, ನಿಕ್ಷೇಯ್ ಪೋಷಣ್ ಯೋಜನೆಯಡಿ ಮಾಸಿಕ 500ರೂ. ಪ್ರೋತ್ಸಾಹಧನ ಬರುವಂತೆ‌ ಮಾಡಿ ಆಕೆಯ ಕುಟುಂಬಕ್ಕೆ ನೆರವಾಗಿದ್ದರು.

ರೋಗಿಯ ಆರೈಕೆಗೆ ಕ್ಷಯ ಸಂದರ್ಶಕರಾದ ಯುವರಾಜ್ ,ಮಂಜುನಾಥ್ , ತಾಲೂಕು ವೈದ್ಯಾಧಿಕಾರಿ ಡಾ.ಪರಮೇಶ್ವರ್, ಆಸ್ಪತ್ರೆ ಆಡಳಿತಾಧಿಕಾರಿ ಡಾ.ರಮೇಶ್ ಕೂಡ ನೆರವಾಗಿ, ಬಾಲಕಿಗೆ ಧೈರ್ಯ ತುಂಬಿದ್ದರು.

ಕ್ಷಯರೋಗ ಚಾಂಪಿಯನ್ ಮುಸ್ಕಾನ್
ಸ್ಪೈನ್ ಟಿಬಿಯಿಂದ ಬಾಲಕಿ ಮುಸ್ಕಾನ್ ಗುಣಮುಕರಾದ ಹಿನ್ನೆಲೆಯಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಟಿಬಿ ಚಾಂಪಿಯನ್ ಎಂದು ಗುರುತಿಸಿ, ಹುಟ್ಟುಹಬ್ಬ ಆಚರಿಸಲಾಯಿತು.

ಆಸ್ಪತ್ರೆಯ ಮೂಳೆ ತಜ್ಞ ಡಾ. ಮಂಜುನಾಥ್ ಮಾತನಾಡಿ, ಆರಂಭಿಕ ಹಂತದಲ್ಲಿ ಅನೇಕ ಬೆನ್ನು ಹುರಿಯ ಕ್ಷಯ ರೋಗ‌ ಎಂಬುದನ್ನು ಪತ್ತೆ‌ ಹಚ್ಚಿದೆವು. ಅಂದಿನಿಂದ ಇಲ್ಲಿಯವರೆಗೆ (ಒಂದು ವರ್ಷ) ಚಿಕಿತ್ಸೆ ಹಾಗೂ ಆರೈಕೆ ಮಾಡಿದ ಪರಿಣಾಮ ಬಾಲಕಿ ಟಿಬಿ ಗೆದ್ದಿದ್ದಾರೆ. ಯಾರೂ ಕೂಡ ಕ್ಷಯರೋಗ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಅದು ಗುಣಪಡಿಸಬಹುದಾದ ರೋಗವಾಗಿದೆ ಎಂದು ಹೇಳಿದರು.

ಬೆನ್ನುಹುರಿಯ ಟಿಬಿ ಏನು.. ಎತ್ತ?

ವೈದ್ಯಕೀಯ ಕ್ಷೇತ್ರದಲ್ಲಿ‌ ಬೆನ್ನುಹುರಿಯ ಕ್ಷಯರೋಗವನ್ನು ಶ್ವಾಸಕೋಶದ ಕಾಯಿಲೆ ಎಂದು ಪರಿಗಣಿಸುವರು. ಆರಂಭಿಕ ಹಂತದಲ್ಲೇ ರೋಗ ಪತ್ತೆ ಹಚ್ಚಿ‌ ಪರಿಣಾಮಕಾರಿ‌ ಚಿಕಿತ್ಸೆ ನೀಡದಿದ್ದರೆ ಅಂಗಾಂಗಗಳ ಮೇಲೂ ತೀವ್ರತರದ ಪರಿಣಾಮ ಬೀರಲಿದೆ. ಕ್ಷಯರೋಗದ ಸೋಂಕು ಬೆನ್ನುಮೂಳೆಯಲ್ಲಿ ಇರಲಿದೆ. ಲ ಸ್ಪೈನಲ್ ಟಿಬಿಯನ್ನು ಟ್ಯೂಬರ್ಕ್ಯುಲಸ್ ಸ್ಪಾಂಡಿಲೈಟಿಸ್ ಅಥವಾ ಪಾಟ್ಸ್ ಕಾಯಿಲೆ ಎಂದೂ ಕರೆಯಲಾಗುತ್ತದೆ.


ಬೆನ್ನುಹುರಿಯು ಸಂಧಿವಾತಕ್ಕೂ ಕಾರಣ ಆಗಲಿದೆ. ಸೋಂಕು ಎರಡು ಪಕ್ಕದ ಕೀಲುಗಳಿಗೆ ಹರಡಿದಂತೆ ಬೆನ್ನು ಹುರಿಯ ಡಿಸ್ಕ್ ಕಡಿಮೆ ಪೋಷಕಾಂಶಗಳನ್ನು ಪಡೆಯುತ್ತದೆ. ಡಿಸ್ಕ್ ಕುಸಿದಾಗ ಕಶೇರುಖಂಡವು ಕಿರಿದಾಗಿ, ಕುಸಿಯುತ್ತದೆ.

Related posts

Leave a Comment