ಹಾಲಿನ ಪ್ರೋತ್ಸಾಹ ಧನ‌ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ: ಮೈದಹಳ್ಳಿ ಕಾಂತರಾಜು

ಮಧುಗಿರಿ : ರಾಜ್ಯದ ಹಾಲು ಉತ್ಪಾದಕರ ಹಿತದೃಷ್ಟಿಯಿಂದ 5 ರೂ ಹಾಗೂ ಪ್ರೋತ್ಸಾಹ ಧನವನ್ನು 2 ರೂಪಾಯಿಗಳಿಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೆ.ಎಂ.ಎಫ್ ನಿರ್ದೇಶಕ ಮೈದನಹಳ್ಳಿ ಕಾಂತರಾಜು (Maidahalli Kantharaju) ತಿಳಿಸಿದರು.

ಪಟ್ಟಣದ ಹಿಂದೂಪುರ (Hindupura) ರಸ್ತೆಯ ಸಮೀಪವಿರುವ ಹಾಲು (Milk) ಶೀಥಲೀಕರಣ ಕೇಂದ್ರಕ್ಕೆ ಪ್ರಥಮಬಾರಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಬೆಲೆ ಹೆಚ್ಚಳದಿಂದಾಗಿ ಹಾಲು ಉತ್ಪಾದನೆಯಲ್ಲಿ ತೊಡಗಿರುವ ರೈತರು ಇತ್ತೀಚೆಗೆ ನಿರಾಸಕ್ತಿ ತೋರುತ್ತಿದ್ದು ಅವರ ಅಭಿವೃದ್ಧಿಗಾಗಿ ಸದಾ ರೈತರ ಪರವಾಗಿ ಕಾಳಜಿ ಹೊಂದಿರುವ ಸಹಕಾರ ಸಚಿವರಾದ ಕೆ.ಎನ್ ರಾಜಣ್ಣ (K N Rajanna) ನವರು ನೇರವಾಗಿ ಉತ್ಪಾದಕರ ಖಾತೆಗೆ ಹೆಚ್ಚಳದ ಹಣವನ್ನು ನೀಡುವ ಬಗ್ಗೆ ಪ್ರಮುಖವಾಗಿ ಸಭೆಯಲ್ಲಿ ಚರ್ಚಿಸಿದ್ದು ಶೀಘ್ರವಾಗಿ ಮುಖ್ಯ ಮಂತ್ರಿಗಳ ಬಳಿ ಕೆ ಎಂ ಎಫ್ ನ ಪದಾಧಿಕಾರಿಗಳ ನಿಯೋಗ ಭೇಟಿ ನೀಡಿ ಹಾಲಿನ ದರ ಹೆಚ್ಚಳಕ್ಕೆ ಪ್ರಸ್ತಾಪ ಸಲ್ಲಿಸಲಾಗುವುದು ಈ ಬಗ್ಗೆ ಮುಖ್ಯಮಂತ್ರಿಗಳಿಂದ ಸಕರಾತ್ಮವಾದ ಪ್ರತಿಕ್ರಿಯೆ ದೊರೆಯಲಿದೆ ಎಂಬ ಭರವಸೆಯನ್ನು ನಿರ್ದೇಶಕ ಕಾಂತರಾಜು ವ್ಯಕ್ತಪಡಿಸಿದರು.

ಈಗಾಗಲೇ ಸರಿಯಾದ ಸಮಯಕ್ಕೆ ಮಳೆಯು ಆಗದೆ ಇರುವುದರಿಂದ ಸ್ವಲ್ಪ ಮಟ್ಟಿಗೆ ಹಾಲಿನ ಶೇಖರಣೆಯು ಕಡಿಮೆಯಾಗಿದೆ. ಕ್ಷೇತ್ರದಲ್ಲಿ ಚರ್ಮಗಂಟು ರೋಗವು ನಿಯಂತ್ರಣಕ್ಕೆ ಬರುತ್ತಿದ್ದು ಲ್ಯಾಕ್ಟೋ ಮೀಟರ್ ರೀಡಿಂಗ್ ಮೂಲಕ ಗುಣಮಟ್ಟದ ಹಾಲಿನ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮಕೈಗೊಂಡಿದ್ದು ಉತ್ತಮವಾದ ಹಾಲು ರೈತರಿಂದ ಶೇಖರಣೆಯಾಗಲಿದೆ.

ಇತ್ತೀಚೆಗೆ ಹಾಲಿನಲ್ಲಿ ನೀರು ಮತ್ತು ಉಪ್ಪು ಬೆರೆಕೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ತನಿಖೆಯು ನಡೆಯುತ್ತಿದೆ ಅವರಿಂದ ವರದಿ ಬಂದಾಕ್ಷಣ ತಪ್ಪಿತಸ್ಥರು ಯಾರೇ ಆದರೂ ಅವರುಗಳ ವಿರುದ್ಧ ಅಗತ್ಯ ಕಾನೂನು ಕ್ರಮಕೈಗೊಳ್ಳಲಾಗುವುದು ಈ ವಿಚಾರದಲ್ಲಿ ಸಂಧಾನದ ಮಾತೇ ಇಲ್ಲ ಎಂದರು.

ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವಿರುವಂತಹ ಕೆ.ಎನ್ ರಾಜಣ್ಣನವರು ಇದೇ ಮೊದಲ ಬಾರಿಗೆ ಮಧುಗಿರಿ ಕ್ಷೇತ್ರದ ಕುಗ್ರಾಮವಾದ ಮೈದನಹಳ್ಳಿಯ ಗ್ರಾಮದ ಸಾಮಾನ್ಯ ವ್ಯಕ್ತಿಯನ್ನು ಕೆ ಎಂ ಎಫ್ ನ ನಿರ್ದೇಶಕ ಸ್ಥಾನಕ್ಕೆ ನನ್ನನ್ನು ಆಯ್ಕೆಮಾಡಿರುವುದು ಇತಿಹಾಸವಾಗಿದೆ ನಾನು ಅವರಿಗೆ ಚಿರಖುಣಿಯಾಗಿದ್ದು ಅವರ ಮಾರ್ಗದರ್ಶನದಲ್ಲಿ ಎಲ್ಲಾ ಹಾಲು ಉತ್ಪಾದರ ಸಂಘಗಳ ಪದಾಧಿಕಾರಿಗಳ ಸಹಕಾರದಿಂದ ಮುನ್ನೆಡೆಯಲಿದ್ದೇನೆ.

ಮುಂದಿನ ದಿನಗಳಲ್ಲಿ ಸಹಕಾರ ಸಚಿವರು ಹಾಗೂ ಕ್ಷೇತ್ರದ ಶಾಸಕರಾದ ಕೆ.ಎನ್ ರಾಜಣ್ಣನವರು ಶೀಘ್ರದಲ್ಲಿ ಹಾಲು ಶೀಥೀಲಿಕರಣ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ ಈ ಬಗ್ಗೆ ದಿನಾಂಕ ನಿಗಧಿ ಪಡಿಸಿ ಕ್ಷೇತ್ರದ ಹಾಲು ಉತ್ಪಾದಕರು , ಅಧ್ಯಕ್ಷರು ಕಾಯದರ್ಶಿಗಳು ಪರವಾಗಿ ಸನ್ಮಾನಿಸಿ ಗೌರವಿಸಲಾಗುವುದು ಎಂದರು.

ವಿಸ್ತರಣಾಧಿಕಾರಿ ಶಂಕರ್ ನಾಗ್ , ಸುದರ್ಶನ್ , ಮಹಾಲಕ್ಷ್ಮೀ , ನಾಗರಾಜು ಹಾಗೂ ಮತ್ತಿತರರು ಇದ್ದರು.

Related posts

Leave a Comment