ಸುಧಾಕರ್ ಇಂದಲೇ ನಾನು ಸೋತಿದ್ದು: ಮಾಜಿ ಸಚಿವ ಎಂ‌ಟಿ‌ಬಿ ನಾಗರಾಜ್ ಆಕ್ರೋಶ MTB NAGARAJ VS SUDHAKAR – Digital Varthe

ಬೆಂಗಳೂರು: ಬೆಂಗಳೂರಿನ ಬಿಜೆಪಿ (BJP OFFICE) ಕಚೇರಿಯಲ್ಲಿ ನಡೆಯುತ್ತಿರುವ ಪರಾಜಿತ ಅಭ್ಯರ್ಥಿಗಳ ಸಭೆಯಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಕೆಂಡಾಮಂಡಲರಾಗಿದ್ದಾರೆ, ಸಭೆಯಲ್ಲಿ ಬಿಜೆಪಿ ನಾಯಕರ ವಿರುದ್ಧವೇ ಎಂಟಿಬಿ ನಾಗರಾಜ್ ಫುಲ್ ಗರಂ ಆಗಿದ್ದಾರೆ.

ಡಬಲ್‌ ಸೋಲು: ಬಿಜೆಪಿ ಪಕ್ಷದಿಂದ ಬಿ-ಫಾರಂ‌ ಪಡೆದು ಎರಡು ಭಾರಿ ಹೊಸಕೋಟೆಯಲ್ಲಿ (HOSAKOTE)  ಸೋಲಿನ ಬಗ್ಗೆ ಸಭೆಯಲ್ಲಿ ಎಂಟಿಬಿ ಆಕ್ರೋಶ ಹೊರಹಾಕಿದ್ದಾರೆ, ಕಾಂಗ್ರೆಸ್ (CONGRESS) ನಲ್ಲಿದ್ದಾಗ ಮೂರು ಸಲ ಗೆದ್ದಿದ್ದೆ ಬಿಜೆಪಿಗೆ ಬಂದ ಮೇಲೆ ಎರಡೂ ಸಲ ಸೋಲಬೇಕಾಯ್ತು, ನಾನು ಬಿಜೆಪಿಗೆ ಬಂದಿದ್ದು ಹಣದ, ಸಚಿವ ಸ್ಥಾನದ, ಅಧಿಕಾರದ ಆಮಿಷಕ್ಕಾಗಿ ಅಲ್ಲ ಎಂದು ಸಿಟ್ಟಾದರು.

ಇದನ್ನು ಓದಿ: ಕೆಡಬ್ಲ್ಯೂ ಜೆವಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ವೀರಸಾಗರ ಭಾನುಪ್ರಕಾಶ್. ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ನೇಮಕ

ಸೋಲಿಗೆ ಸುಧಾಕರ್ ಕಾರಣ: ಸಭೆಯಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಮೇಲೂ ಎಂ‌ಟಿಬಿ ನಾಗರಾಜ್ ಸಿಟ್ಟಾದರು, ಸುಧಾಕರ್ (CHIKKABALLAPURA EX MLA) ನಿಂದಾಗಿಯೇ ನಾನು ಸೋತಿದ್ದು, ಸುಧಾಕರ್ ತಾವೂ ಸೋತು, ನಮ್ಮನ್ನೂ‌‌ ಸೋಲಿಸಿದರು, ನಾನು ಮತ್ತು ಚಿಂತಾಮಣಿ (CHINTAMANI) ಅಭ್ಯರ್ಥಿ ಸೋಲಲು ಸುಧಾಕರ್ ಸಹ ಕಾರಣ ಅಂತ ಎಂಟಿಬಿ ನಾಗರಾಜ್ ಗುಡುಗಿದರು.

ಅಕ್ಕಿ ಕಡಿತ ಮಾಡಿದ್ದೆ ಸೋಲಿಗೆ ಕಾರಣ: ಕಾಂಗ್ರೆಸ್ ನವರು ಹತ್ತು ಕೆಜಿ ಅಕ್ಕಿ (FREE RICE) ಕೊಡ್ತಿದ್ರು ನೀವು ಆರು ಕೆಜಿ ಅಕ್ಕಿ ಕೊಟ್ರಿ, ಬಡವರು ಇದರಿಂದ ಸಿಟ್ಟಾಗಿದ್ರು ನನ್ನ ಕ್ಷೇತ್ರದಲ್ಲಿ ಹತ್ತು ಕೆಜಿ ಉಚಿತ ಅಕ್ಕಿ ಗ್ಯಾರಂಟಿಯೂ (CONGRESS GUARANTEE) ನನ್ನ ಸೋಲಿಗೆ ಕಾರಣ ಎಂದು ತಮ್ಮ ಸೋಲಿನ ಬಗ್ಗೆ ಹತಾಷರಾಗಿ ಬೇಸರದಿಂದ ಆಕ್ರೋಶ ವ್ಯಕ್ತಪಡಿಸಿರುವ ಎಂಟಿಬಿ ನಾಗರಾಜ್

ಇದನ್ನೂ ಓದಿ: 2 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಬಿದ್ದ ಪಿಡಿಓ

ಯಡಿಯೂರಪ್ಪ ಮಾತಿಗೆ ಬಿಜೆಪಿ ಸೇರಿದೆ: ಯಡಿಯೂರಪ್ಪ ಮಾತಿಗೆ ನಾನು ಬಿಜೆಪಿ ಸೇರಿದೆ ಬಿಜೆಪಿಯಲ್ಲಿ ಸ್ಪರ್ಧೆ ಮಾಡಿ ಎರಡೂ ಚುನಾವಣೆ ಸೋತೆ, ಆ ಸುಧಾಕರ್‌ ಗೆ ಉಸ್ತುವಾರಿ ನೀಡಿದ್ರು, ಆತನೂ ಸೋತ, ಕೊನೆಗೂ ನಮ್ಮನ್ನೂ ಸೋಲಿಸಿದ, ಉಸ್ತುವಾರಿಯನ್ನು ಸಮರ್ಥವಾಗಿ ಸುಧಾಕರ್‌ ನಿಭಾಯಿಸಲಿಲ್ಲ ಎಂದು ತನ್ನ ಸೋಲಿಗೆ ಪಕ್ಷದ ಜೊತೆಗೆ ಕೆಲವು ಪ್ರಮುಖ ನಾಯಕರನ್ನು ದೂರಿದ ಎಂಟಿಬಿ ನಾಗರಾಜ್

– 40% ಕಮಿಷನ್ ಆರೋಪಕ್ಕೆ ಕೌಂಟರ್ ಅಟ್ಯಾಕ್ ಮಾಡಿಲ್ಲ,ನಾವು ಕೇವಲ ಸಿದ್ದರಾಮಯ್ಯಗೆ ಅಷ್ಟೇ ಬೈದ್ವಿ

– ನಮ್ಮಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು ಸರಿಯಾಗಿ ಆರೋಪಕ್ಕೆ ತಿರುಗೇಟು ಕೊಟ್ಟಿಲ್ಲ

– ಪಕ್ಷದ ಕಾರ್ಯಕರ್ತರನ್ನು ಸಚಿವರು ಗಣನೆಗೆ ತೆಗೆದುಕೊಂಡಿಲ್ಲ

– ಕಾರ್ಯಕರ್ತರ ಆಗು ಹೋಗುಗಳನ್ನು ಉಸ್ತುವಾರಿ ಸಚಿವರು ಕೇಳಲಿಲ್ಲ, ಇದರಿಂದ ಕಾರ್ಯಕರ್ತರು ಸಿಟ್ಟಾಗಿದ್ದರು

ಇದೆಲ್ಲದರಿಂದ ನಮಗೆ ಸೋಲು ಆಗಿದೆ ಎಂದು ಬಿಜೆಪಿ ನಾಯಕರ ಮುಂದೆ ಬೇಸರ ವ್ಯಕ್ತಪಡಿಸಿದ ಎಂಟಿಬಿ

Related posts

Leave a Comment