ಸಿದ್ದಗಂಗಾ ಫೌಂಡೇಷನ್‌ ಟ್ರಸ್ಟ್‌ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ

ನೆಲಮಂಗಲ: ಪ್ರತಿಭಾ ಪುರಸ್ಕಾರಗಳು ವಿದ್ಯಾರ್ಥಿಗಳ ಉನ್ನತ ಸಾಧನೆಗೆ ಪ್ರೇರಣೆಯಾಗಲಿದೆ ಎಂದು ರಂಗಶಿಕ್ಷಣ ಕೇಂದ್ರ ಸಂಸ್ಥಾಪಕ ಅಧ್ಯಕ್ಷ ಸಿ.ಸಿದ್ಧರಾಜು ತಿಳಿಸಿದರು.

ತಾಲೂಕಿನ ಯಂಟಗಾನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಾವಿಕೆರೆ ಗ್ರಾಮದಲ್ಲಿ ಭಾನುವಾರ ಶ್ರೀ ಸಿದ್ಧಗಂಗಾ ಫೌಂಡೇಶನ್ ಟ್ರಸ್‌ನಿಂದ ಆಯೋಜಿಸಿದ್ದ ನೂತನ ಟ್ರಸ್ಟ್ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಗಳು ಶೈಕ್ಷಣಿಗೆ ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜತೆಗೆ ಸಮಾಜದೊಂದಿಗೆ ಬದುಕಲು ಬೇಕಾದ ಸಂಸ್ಕಾರಯುತ ಗುಣಗಳನ್ನು ಕಲಿಸುವ ಕೆಲಸ ಪಾಲಕರಿಂದ ಆಗಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಗಳಿಸುವ ಧೈರ್ಯ ಆತ್ಮವಿಶ್ವಾಸವನ್ನು ಮಕ್ಕಳಲ್ಲಿ ಬೆಳೆಸಬೇಕು. ಶ್ರೀ ಸಿದ್ಧಗಂಗಾ ಮಠದ ಶಿವಕುಮಾರಸ್ವಾಮೀಜಿ ಅವರ ತತ್ವಾದರ್ಶನಗಳನ್ನು ಮುಂದಿಟ್ಟುಕೊಂಡು ಟ್ರಸ್ಟ್ ಮಾಡಿರುವ ಸಂತೋಷಕರ ಸಂಗತಿ. ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದ ಸಮಾಜದ ಜವಬ್ದಾರಿ ಪ್ರತಿಭಾ ಪುರಸ್ಕಾರದಿಂದ ವಿದ್ಯಾರ್ಥಿಗಳ ಜತೆ ಸಮಾಜವಿದೆ ಎಂಬುದು ತಿಳಿಯಲಿದೆ. ಪ್ರತಿಭಾವಂತರು ದೇಶ ಮತ್ತು ರಾಜ್ಯದ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಸಮಾಜ ಏಳಿಗೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮುಂದಾಗಿದೆ. ಜತೆಗೆ ಆರೋಗ್ಯ, ಕ್ರೀಡೆ, ಶಿಕ್ಷಣ, ಸಾಂಸ್ಕೃತಿಕ ಸೇರಿದಂತೆ ವಿವಿಧ ಉದ್ದೇಶವನ್ನು ಮುಂದಿಟ್ಟುಕೊಂಡು ಶ್ರೀ ಸಿದ್ಧಗಂಗಾ ಫೌಂಡೇಶನ್ ಟ್ರಸ್ಟ್ ಆರಂಭ ಮಾಡಿರುವುದು ಸಂತೋಷಕರ ಸಂಗತಿ ಎಂದರು.

ಮುಖಂಡ ಚಿಕ್ಕಹನುಮೇಗೌಡ ಮಾತನಾಡಿ ಪ್ರತಿಭಾ ಪುರಸ್ಕಾರ ಸ್ವೀಕರಿಸಿದ್ದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಪುರಸ್ಕಾರವನ್ನು ಪಡೆಯುವಂತಾಗಬೇಕು. ತಮ್ಮನ್ನು ಗುರಿತಿಸಿದಂತೆ ಸಂಸ್ಥೆಗೆ ಸದಾ ಚಿರಋಣಿಯಾಗಿರಬೇಕು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ವಿವಿಧ ಸರ್ಕಾರಿ ಹುದ್ದೆಗಳನ್ನು ಅಲಂಕಾರಿಸಿ ಜನಿಸಿದ್ದ ಗ್ರಾಮಕ್ಕೆ ಒಳ್ಳೆಯ ಹೆಸರು ತಂದುಕೊಡಬೇಕು ಎಂದರು.

ಪ್ರತಿಭಾಪುರಸ್ಕಾರ ಹಾಗೂ ಸುಗಮಸಂಗೀತ: ಕಾರ್ಯಕ್ರಮದ ಪ್ರಯುಕ್ತ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಟ್ರಸ್ಟ್ ವತಿಯಿಂದ ತಲಾ 2 ಸಾವಿರ ಚೆಕ್ ನೀಡಿ ಅಭಿನಂದಿಸಲಾಯಿತು. ಜತೆಗೆ ಉತೀರ್ಣರಾದ ಗ್ರಾಮದ 20ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳನ್ನೂ ಅಭಿನಂದಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಾಡು ಕಂಡ ಖ್ಯಾತ ಜಾನಪದ ಗಾಯಕ ಸಿ.ಹೆಚ್.ಸಿದ್ದಯ್ಯ ಹಾಗೂ ಗಾಯಕ ತ್ರಿವೇಣಿ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಎ.ಪಿಳ್ಳಪ್ಪ, ಗ್ರಾಮಪಂಚಾಯಿತಿ ಅಧ್ಯಕ್ಷೆ ಲಕ್ಷö್ಮಮ್ಮ, ಸದಸ್ಯ ಮಹಂತೇಶ್, ಮಂಜುನಾಥಯ್ಯ, ರೇಣುಕಮ್ಮ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಪ್ರಮೋದ್‌ಕುಮಾರ್, ಪ್ರಧಾನಕಾರ್ಯದರ್ಶಿ ಅಭಿಷೇಕ್, ಕಲಾವಿದ ದಿನೇಶ್‌ಚಿಕ್ಕಮಾರನಹಳ್ಳಿ, ದೊಡ್ಡೇಬೈಲಪ್ಪ, ಬೂದಿಹಾಲ್‌ಕಿಟ್ಟಿ, ಸಿ.ಹೆಚ್.ಸಿದ್ದಯ್ಯ, ಶ್ರೀ ಸಿದ್ಧಗಂಗಾ ಫೌಂಡೇಶನ್ ಟ್ರಸ್ ಅಧ್ಯಕ್ಷೆ ಗಂಗಲಕ್ಷö್ಮಮ್ಮ, ಕಾರ್ಯದರ್ಶಿ ಅಜಯ್‌ಕುಮಾರ್, ಖಜಾಂಚಿ ರವಿಕುಮಾರ್, ವ್ಯವಸ್ಥಾಪಕ ವಿಜಯ್‌ಕುಮಾರ್, ಟ್ರಸ್ಟಿ ಸಿದ್ಧಗಂಗಯ್ಯ, ಮುಖಂಡ ಚನ್ನಬಸಪ್ಪ, ರಾಜಣ್ಣ, ರಮೇಶ್, ಗಂಗಾಧರ್, ಲೋಕೇಶ್, ವಿನಯ್‌ಪ್ರಸಾದ್, ರವಿಕುಮಾರ್, ಮಂಜುನಾಥ್, ಸಿದ್ಧರಾಜು ಮತ್ತಿತರರು ಉಪಸ್ಥಿತರಿದರು.

Related posts

Leave a Comment